Submission 1881

ಪುಸ್ತಕದ ಶೀರ್ಷಿಕೆ: ಭಾವತೀರಯಾನ

ಪುಸ್ತಕದ ಲೇಖಕರು: ಎ.ಆರ್. ಮಣಿಕಾಂತ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅಂಬಿಕಾ ಸಂತೋಷ್ (ಅಂಸ)

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಸದಾ ಜಯವನ್ನೇ ಬಯಸುವುದು ಮನುಷ್ಯನ ಸ್ವಭಾವ . ತೊಂದರೆಯನ್ನು ಮೈಮೇಲೆ ಎಳೆದುಕೊಳ್ಳಲು ಯಾರು ಬಯಸುವುದಿಲ್ಲ . ಪ್ರಸ್ತುತ ಸಂದರ್ಭದಲ್ಲಿ ಗೆಲ್ಲಲು ಹೊರಟ ಮಂದಿಗೆ ನಾಯಕ ಎನ್ನುವವರು ಬೇಕು . ಆಗ ಮಾತ್ರ ಮನಸ್ಸು ಕನಸೆಂಬ ಕುದುರೆಯನ್ನು ಏರಿ ಓಡಲು ಪ್ರಾರಂಭಿಸುತ್ತದೆ . ವಿಜಯದ ಕಥೆಗಳನ್ನು ಪ್ರತಿ ಹೆಜ್ಜೆಗೂ ಕೇಳುತ್ತಾ ಸಾಗಿದರೆ ಬದುಕಲು ಜಯಭೇರಿ ಬಾರಿಸಬಹುದು ಎಂಬ ಅದಮ್ಯ ಚಿಂತನೆಯನ್ನ ಸ್ಪುರಿಸುವ ಹೊತ್ತಿಗೆ ಇದಾಗಿದೆ . ಈ ಪುಸ್ತಕದ ಪ್ರತಿಪುಟಗಳಲ್ಲೂ ಗೆಲುವಿನ ಸೌರಭ ಎಲ್ಲೆಡೆ ಪಸರಿಸಲು ಸಜ್ಜಾಗಿದೆ. ಸಾಧಕರನ್ನು ಸಂದರ್ಶಿಸಿ ಅವರೊಡನೆ ಗಂಟೆ. ಗಟ್ಟಲೆ ಮಾತಾಡಿ ಅವರ ಜೀವನದ ಆಗುಹೋಗುಗಳನ್ನ ತಿಳಿದು ಮಣಿಕಾಂತ್ ರವರು ಅವರದೇ ಬರೆಹದ ಶೈಲಿಯಲ್ಲಿ ಓದುಗರ ಕಣ್ಣಿಗೆ ಕಟ್ಟುವಂತೆ ಅನುಭವ ವೇದ್ಯವಾಗುವಂತೆ ಸಾಧನೆಯ ಹಿಂದಿನ ಕಥೆಗಳನ್ನು ತಿಳಿಸುತ್ತಾ ಎಲ್ಲರಲ್ಲಿಯೂ ಪ್ರೇರಣೆಯನ್ನು ನೀಡುತ್ತಾ ಹೋಗುವಲ್ಲಿ ಇಲ್ಲಿನ ಲೇಖನಗಳು ಓದುಗನಿಗೆ ಹೃದ್ಯವೆನಿಸುತ್ತದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ನೆಮ್ಮದಿಯಿಂದ ಬದುಕಬೇಕೆಂಬ ಉದ್ದೇಶದಿಂದ ತಪಸ್ಸಿಗೆ ಕೂತು ದೇವರನ್ನು ಒಲಿಸಿಕೊಂಡು ಆತನಿಂದ ವರ ಪಡೆದು ಅತಿ ಆಸೆ ಮತ್ತು ಆತುರದ ಕಾರಣದಿಂದ ಎಲ್ಲವನ್ನು ಬಾಚಿಕೊಂಡ ಮನುಷ್ಯ ಅಮೂಲ್ಯವಾದ ಎರಡು ವಸ್ತುಗಳಾದ ನೆಮ್ಮದಿ ಆಯುಷ್ಯವನ್ನು ಮರೆತುಬಿಟ್ಟದ್ದು ಇಂದಿಗೂ ಅದನ್ನು ಹುಡುಕುತ್ತಲೇ ಇರುವ ಸಂದರ್ಭ ಇಷ್ಟವಾಗುತ್ತದೆ. ಸ್ವಾಧೀನ ಕಳೆದುಕೊಂಡಾಕೆ ದೀಪಾ ಮಲ್ಲಿಕ್ ಅನಂತರದಲ್ಲಿ ಪ್ರವಾಹಕ್ಕೆ ಎದುರಾಗಿ ಒಂದು ಕಿಲೋಮೀಟರ್ ಈಸಿ ದಾಖಲೆ ಮಾಡಿ ಪ್ಯಾರ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಬಾಚಿಕೊಂಡ ಪರಿ ರೋಮಾಂಚನವೆನಿಸುತ್ತದೆ. ನಾವು ಮಾಡುವ ಒಳ್ಳೆ ಕೆಲಸ ಕೆಟ್ಟ ಕೆಲಸಗಳೆಲ್ಲವೂ ಕೌಂಟ್ ಆಗ್ತಾ ಒಳ್ಳೆಯವರಿಗೆ ಒಳ್ಳೆಯದಾಗಲಿ ಕೆಟ್ಟವರಿಗೆ ಫೀಡ್ ಆಗುತ್ತೆ ಎಂದಿದ್ದ ಮೇಷ್ಟ್ರ ಮಾತು ನಿಜವೆನಿಸುತ್ತೆ. ಅಮ್ಮನ ಅಂಗೈ ಕಾರುಣ್ಯದ ಕಥೆ ಹೇಳಿದ್ದು, ಕಾರ್ಗಿಲ್ ಯುದ್ಧದ ಹೀರೋ ವಿಷ ಕುಡಿದು ಸತ್ತಿದ್ದು ಕರುಳು ಹಿಂಡುತ್ತದೆ . ಪಟ್ರೇಸಿಯಾ ಎಂಬ ಹೆಣ್ಣು ಮಗಳು ಕಷ್ಟ ಬಂದಾಗ ಬಾಗದೆ ಬಾಳಿ ತೋರಿಸಿದ ಕಥೆ ಕೇವಲ 50 ಪೈಸೆ ಬಂಡವಾಳದೊಂದಿಗೆ ಹೋಟೆಲ್ ಉದ್ಯಮಕ್ಕೆ ಬಂದು 30 ವರ್ಷಗಳ ಕಾಲ ತಳ್ಳುವಗಾಡಿಯ ಮೊಬೈಲ್ ಕ್ಯಾಂಟೀನ್ ಹೊಂದಿದ್ದ ಈಕೆ ಈಗ 15 ಎಸಿ ಹೋಟೆಲ್ಗಳ ಓನರ್ ಆಗಿರುವ ಹಿಂದೆ ಸತತ ಪ್ರಯತ್ನ ಪರಿಶ್ರಮ ಸಂಯಮಕ್ಕೆ ಹೆಮ್ಮೆಪಡಬೇಕು. 75 ವರ್ಷದ ಓಂಕಾರ್ನಾಥ ಅಲಿಯಾಸ್ ಮೆಡಿಸನ್ ಬಾಬಾ ಇವರು ಜೋಲಿಗೆ ತುಂಬಾ ಗುಳಿಗೆಗಳನ್ನು ಹಿಡಿದುಕೊಂಡು ಆ ಮೂಲಕ ನೂರಕ್ಕೂ ಹೆಚ್ಚು ಮಂದಿಯ ಜೀವ ಉಳಿಸಿರುವ ಇವರು ಮಾನವತೆಯ ಮೇರು ವ್ಯಕ್ತಿತ್ವದ ಸಾಕಾರ ಮೂರ್ತಿಯಂದೆನಿಸುತ್ತದೆ . ಸೇವೆ ಮಾಡಬೇಕೆಂಬ ಮನಸೊಂದಿದ್ದರೆ ಹಲವು ಮಾರ್ಗಗಳಿವೆ ಎಂಬುದನ್ನು ತಿಳಿಸಿಕೊಡುವ ಜೀವಂತ ನಿದರ್ಶನ ಇವರಾಗಿದ್ದಾರೆ . ಇನ್ನು ಇಂತಹ ಹಲವು ಸ್ಪೂರ್ತಿದಾಯಕ ಕಥೆಗಳು ಮಣಿಕಾಂತ್ ರವರ ಬರೆಹಗಳಲ್ಲಿ ಪುಸ್ತಕ ಮುಗಿಯುವವರೆಗೂ ಓದುಗರಿಗೆ ರಸದೌತಣವಾಗಿ ಓದಲು ಸಿಗುತ್ತಾ ಹೋಗುತ್ತದೆ .

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ವಿದ್ಯಾರ್ಥಿಗಳು ಶಿಕ್ಷಕರು ಉಪನ್ಯಾಸಕರು ಹಿರಿಯರು ಕಿರಿಯರು ಹಾಗೂ ಎಲ್ಲ ವರ್ಗದ ಜನರು ಇದನ್ನು ಕೊಂಡು ಓದಲೇಬೇಕಾದ ಪುಸ್ತಕವಿದು . ಪ್ರತಿಯೊಬ್ಬರ ಮನೆ ಮತ್ತು ಶಾಲೆಗಳಲ್ಲಿ ಈ ಪುಸ್ತಕ ಇರಲೇ ಬೇಕು. ಬದುಕೆಂದರೆ ಭರವಸೆ', ನಂಬಿಕೆ, ದೇವರಿತ್ತ ವರದಾನವಾಗಿದೆ. ಹೀಗಿರಲು ಕ್ಷುಲ್ಲಕ ಕಾರಣಗಳಿಂದಾಗಿ , ಸೋಲು ಉಂಡಾಗ,ಸಮಸ್ಯೆಗಳು ಎದುರಾದಾಗ ಬದುಕಿನಿಂದ ಹಿಮ್ಮೆಟ್ಟುವ,ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಕಂಗೆಡುವ, ಆತ್ಮಹತ್ಯೆಗೆ ಮುಂದಾಗುವ ಅದೆಷ್ಟೋ ಜೀವಗಳಿಗೆ ಅದಮ್ಯ ಚೈತನ್ಯವನ್ನು ಹಾಗೂ ಅವರ ನಿಲುವನ್ನು ಬದಲಿಸುವಲ್ಲಿ ಈ ಪುಸ್ತಕದ ಲೇಖನಗಳು ಪ್ರಾಮಾಣಿಕವಾಗಿ ತಮ್ಮ ನೆರವೇರಿಸುವಲ್ಲಿ ಯಶಸ್ಸನ್ನು ಸಾಧಿಸುತ್ತವೆ ಎಂಬುದು ನನ್ನ ಅಭಿಪ್ರಾಯವಾಗಿದೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

13
Votes
193
Views
4 Months
Since posted

Voting Closed!

Scroll to Top