ಪುಸ್ತಕದ ಶೀರ್ಷಿಕೆ: ಪತ್ತೆದಾರಿ ಕಾದಂಬರಿ ಕೇಸ್ ಆಫ್ ಕಮಲಾಪುರ ಎಸ್ಟೇಟ್
ಪುಸ್ತಕದ ಲೇಖಕರು: ಕೌಶಿಕ್ ಕೂಡುರಸ್ತೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪ್ರಹ್ಲಾದ . ಜಿ . ಉಪ್ರಳ್ಳಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
"ಕೇಸ್ ಆಫ್ ಕಮಲಾಪುರ ಎಸ್ಟೇಟ್...." 'ಕೇಸ್ ಆಫ್ ಕಮಲಾಪುರ ಎಸ್ಟೇಟ್..' ಕೌಶಿಕ್ ಕೂಡುರಸ್ತೆ ಅವರ ಎಂಟನೆ ಪತ್ತೆದಾರಿ ಕಾದಂಬರಿಯಾಗಿದ್ದು ,ಅವರು ಓದಿ ತಿಳಿದಂತೆ ನೈಜ ಘಟನೆಗಳು ಹಾಗೂ ಕಾಲ್ಪನಿಕ ವಾದ ಅಭೂತಪೂರ್ವ ಸನ್ನಿವೇಶಗಳನ್ನು ಈ ಕಥೆಯಲ್ಲಿ ಕವಿ ಚಿತ್ರಿಸಿದ್ದಾನೆ. ಕವಿ ಪರಿಕಲ್ಪನೆವು ಒಂದು ಭಯಾನಕವಾಂದತಹ ಅಮಾವಾಸ್ಯೆಯ ಕಗ್ಗತ್ತಲೆಯ ರಾತ್ರಿಯಲ್ಲಿ ಕಾಡು ಮೃಗ ಬೇಟೆಯಲ್ಲಿ ತಾನೆ ಭೇಟೆ ಆಗುತೇನೆ ಎನ್ನುವ ಪರಿಕಲ್ಪನೆ ಇಲ್ಲದ ಮಾಯಾ ಜಾಲದ ಕನಸಿನ ಲೋಕದಿಂದ ಮೇಲೆದ್ದ ಕಮಲಾಪುರ ಎಸ್ಟೇಟ್ ನ ನಕುಲ್ ಕನಸಿನ ಚಿತ್ರಣದ ಒಂದು ನೋಟ ಇದಾಗಿದೆ.. ಕಮಲಾಪುರ ಎಸ್ಟೇಟ್ ಒಂದು ಸುಂದರವಾದ ಪ್ರಕೃತಿಯ ಮಧ್ಯೆ ತುಂಬಿದ ಕುಟುಂಬ ಇರುವಂತಹ ಗೆಸ್ಟಹೌಸ ಅದಾಗಿತ್ತು . ಆಶೆ ,ದುರಾಸೆ ,ವಂಚನೆಯ ದ್ವೇಷವನ್ನು ಹೋತ್ತಿಸಿಕೊಂಡ ಮನೆಯವರು ಸಂಕಷ್ಟಕ್ಕೆ ಸಿಲುಕಿ ಚಿತ್ರ ವಿಚಿತ್ರ ಘಟನೆಗಳು ನೆಡೆದು ಹೊಗುತ್ತದೆ. ಮುಖ್ಯ ಪಾತ್ರ ದಾರಿಯಾಗಿ ೭೫ ರ ಹರೆಯದ ಎಸ್ಟೇಟ್ ಮಾಲಿಕರಾದ ಕಾಳಿದಾಸರು ಹಾಗೂ ಅವರ ಮನೆಯವರಾದ ಆನಂದ ಅರಸರು ಅವರ ಮಗ ಆದಶ೯ , ನರಹರಿ , ಅವರ್ ಮೊಮ್ಮಗ ನಕುಲ್ ಹೀಗೆ ಹಲವರ ಪಾತ್ರಗಳು ಅಚ್ಚರಿ ಮೂಡಿಸುವ ಸಂಗತಿ ಸನ್ನಿವೇಶಗಳು ಈ ಪಾತ್ರಗಳಲ್ಲಿ ಬಂದು ಹೋಗುತ್ತದೆ,! "ಅಂಬರ್ ಗ್ರೀಸ್ "( ತಿಮಿಂಗಿಲ ವಾಂತಿ) ಎನ್ನುವ ಬೆಲೆಬಾಳುವ ವಸ್ತು ಕಳ್ಳ ತನವಾಗಿ ಅದು ಕಮಲಾಪುರ ಎಸ್ಟೇಟ್ ಗೆ ಬಂದಿದ್ದು ಅದೊಂದು ಭಯಾನಕ ಕಥೆಯೆ ಸರಿ.! ಇದನ್ನು ಹಿಂಬಾಲಿಸಿ ಕೊಂಡು ಬಂದ 'ರಿಸರ್ಚ್ ಸೈಂಟಿಸ್ಟ್' ಆಗಿಬಂದ ಹಿಮವಂತ , ಸುಧೀರ ಉದ್ದೇಶ ಪೂರ್ವಕವಾಗಿ ಹಿಮವಂತನ ಬಳಿ ಕೆಲಸಕ್ಕೆ ಸೆರಿಕೊಂಡು ಕಮಲಾಪುರ ಎಸ್ಟೇಟ್ ನ ರಹಸ್ಯವನ್ನೆ ಬೆದಿಸುತ್ತಾರೆ . ಬೆಲೆಬಾಳುವ ತಿಮಿಂಗಿಲ ವಾಂತಿಯಿಂದಾಗಿ ತನ್ನ ಸ್ನೇಹಿತನ ಡ್ರೈವರ ಶಂಕರನನ್ನು ಕೋಲೆ ಮಾಡಬೇಕಾದ ಅನಿವಾರ್ಯತೆ ಕಾಳಿದಸರಿಗೆ ಹಾಗೂ ಅಸಿಸ್ಟೆಂಟ್ ಡಿಟೆಕ್ಟಿವ್ ಆಗಿ ಸುಧೀರನಿಗೆ ಅನಿವಾರ್ಯತೆ ಇದೆ. ಶಂಕರ್ ಎನ್ನುವ ವೆಕ್ತಿಯ ಸಾವಿನ ಹಿಂದೆ ಹಲವರ ಕೈವಾಡ ಅದರಲ್ಲಿ ತನ್ನ ಸ್ವಂತ ಅಣ್ಣನ್ ಹೆಂಡತಿಯ ಜೊತೆ ಅನೈತಿಕ ಸಂಬಂಧ ಹೊಂದಿದರಿಂದ ಸುಧೀರ ರೂಪಿಸಿದ ಸಂಚಾಗಿದೆ.. ಶಂಕರ್ ನ ಕೋಲೆ ಕೆಸ್ ನಲ್ಲಿ ಕಾಳಿದಸರ ಮೊಮ್ಮಗ ನಕುಲ್ ಬಲಿಪಶು ಆಗುವ ಪರಿಸ್ಥಿತಿ ಬಂದಿತ್ತು ಇದನ್ನು ಅರಿತ ಕಾಳಿದಾಸರು ಸುಧೀರನಿಗೆ ತಿಳಿಸಿದ್ದು ಅದು ಅವನಿಗೆ ಕೆಡುಕಾಗಿತ್ತು. ಕುಟುಂಬ ಸದಸ್ಯರು ಆಸ್ತಿ, ನಿಧಿ, ಬೆಲೆ ಬಾಳುವ ಅಂಬರ್ ಗ್ರೀಸ್ ಆಸೆಯಿಂದ ಕಾಳಿದಾಸರನೆ ಸಾಯಿಸುವ ಮನಸ್ಥಿತಿ ಮನೆಯವರದ್ದು , ಕೊನೆಗೂ ಅವರು ತಿನ್ನುವ ಬೀಡಾದಲ್ಲಿ ಔಡಲಕಾಯಿ ಜೊತಗೆ ಬೇರೆ ದ್ರಾವಣ ಬೆರೆಸಿ ಅನಾರೋಗ್ಯ ದ ರೀತಿಯಲ್ಲಿ ಕಾಳಿದಾಸರ ಕೋಲೆ ಸುಧೀರನ ಸಂಚಾಯಿತು. ಆದರೆ ಕಮಲಾಪುರ ಎಸ್ಟೇಟ್ ನಲ್ಲಿ ಇದಕ್ಕೂ ಮೊದಲು ಸಹ ಹಲವಾರು ಕೋಲೆಗಳು ನೆಡೆದಿದ್ದು ಹಾಗು ಅಮಾನುಷವಾದ ಸಾವನ್ನಾಗಿಸಿ ಸಂಪಾದಿಸಿಕೊಂಡ ಆಸ್ತಿ ಎಸ್ಟೇಟ್ ಅದಗಿತ್ತು .ಕೊನೆಗೂ ಡಿಟೆಕ್ಟಿವ್ ಹಿಮವಂತ ತನ್ನ ಜೊತೆ ಕೆಲಸಕ್ಕೆ ಸೇರಿಕೊಂಡ ಸುಧೀರನೆ ನನಗೆ ವಂಚನೆ ಮಾಡಿ ಅವನೆ ತಪ್ಪಿತಸ್ಥ ಎಂದು ಸಾಬಿತು ಪಡಿಸಿ ನಿಷ್ಟವಂತಾ ಡಿಟೆಕ್ಟಿವ್ ಆಗಿ ತಮ್ಮ ಕತ್೯ವ್ಯವನ್ನು ನಿವ್೯ಹಿಸಿದರು. ಈ ಪತ್ತೆದಾರಿಯ ಹಾದಿಯಲಿ ಹಾಲವಾರು ಪಾತ್ರಗಳು ಬಂದು ಹೊಗುತ್ತದೆ ಆದರೆ ಒಂದೊಂದು ಪಾತ್ರಗಳು ವಿಬಿನ್ನವಾದ ಸನ್ನಿವೇಶ ರೋಚಕ ತಿರುವನು ನಿಡುದರ ಜೋತೆಗೆ ಕೂತುಹಲವನ್ನು ಬಿರುಸುವಂತದ್ದು. ಯಾರೇ ಆಗಲಿ ಹೆಣ್ಣು ,ಹೊನ್ನು ,ಮಣ್ಣಿಗೆ ಆಸೆ ಪಟ್ಟು ಸಂಪಾದಿಸಿದವರು ಬೆರಳಣಿಕ್ಕೆಷ್ಟು ಜನರು ಮಾತ್ರ ಹೆಚ್ಚಿನವರು ವಿನಾಶಕ್ಕೆ ಹತ್ತಿರವಾಗಿ ಬಿಡುತ್ತಾರೆ. ಕವಿಯ ಕಲ್ಪನೆಯ ಅಂಬರ್ ಗ್ರೀಸ್ ಕೇಸಿನ ನಿಗೂಡವಾದ ಮಾಯಾ ಚಿತ್ರಣ ಪುಟದಿಂದ ಪುಟಕ್ಕೆ ವಿಶಿಷ್ಟ ವಿಷ್ಮಯ ಬರಿತ ಕುತೂಹಲ ಮೂಡಿಸುವಂತಹ ಚೌಡಿ ಕಲ್ಲಿನ ಬಳಿ ವಾಸಿಸುತ್ತಿದ್ದ ದೇವರ ದೈತ್ಯ ಕೋತಿಯ ನಿಗೂಡತೆಯೇ...!!"ಕಮಲಾಪುರ ಎಸ್ಟೇಟ್ ".!! ಪತ್ತೇದಾರಿ ಕಾದಂಬರಿ...
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಕಾಳಿದಾಸರ ೨೫ ರೈ ಹರೆಯದ ಹುಟ್ಟು ಹಬ್ಬದ ಸಂದರ್ಭದ ಕ್ಷಣ, ಶಂಕರ್ ಹಾಗೂ ಕಾಳಿದಾಸರ ನಿಗೂಡ ಸಾವಿನ ಸಂಚು, ಡಿಟೆಕ್ಟಿವ್ ಹಿಮವಂತನ ಪತ್ತೆದಾರಿ ಕೆಲಸ ಹಾಗೇ ನಕುಲ್ ನಾ ಸಿನಿಮಾ ಕಥೆ ಯಾ ಸನ್ನಿವೇಶಗಳು ಇಲ್ಲಿ ಪ್ರಮುಖ ಪಾತ್ರ ದಾರಿಯಾಯಿತು.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಒಂದು ಒಳ್ಳೆ ಸ್ಟೋರಿಯನ್ನು ಹುಡುಕುವವರು ಕಂಡಿತಾ ಇದನ್ನು ಓದಬಹುದು ರೊಚಕ ಸನ್ನಿವೇಶಗಳನ್ನಾ ನೊಡಬಹುದು , ಎಲ್ಲಾ ವಯಸ್ಸಿನವರು ಓದುವಂತಹ ಕಾದಂಬರಿ. ಅತಿಆದಾ ದುರಾಸೆಯಿಂದ ಪಡೆದುಕೊಂಡ ಎಲ್ಲಾನೂ ಬಿಟ್ಟುಹೊಗಲೇ ಬೇಕು ಯಾವುದು ಶಾಶ್ವತವಲ್ಲಾ ನಾವು ಮಾಡಿದ ಪಾಪಕಮ್೯ದ ಪಲವನ್ನಾ ಆ ದೇವರು ಕೊಟ್ಟೆ ಕೊಡುತ್ತಾನೆ ಎನ್ನುವುದು ಈ ಪತ್ತೆದಾರಿಯಲ್ಲಿ ನಾ ಕಂಡ ಸತ್ಯ ಅಸತ್ತತೆಗಳು.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.