ಪುಸ್ತಕದ ಶೀರ್ಷಿಕೆ: ಯಯಾತಿ
ಪುಸ್ತಕದ ಲೇಖಕರು: ಮೂಲ ಮರಾಠಿ ಲೇಖಕರು-ವಿ.ಸ.ಖಾಂಡೆಕರ್.ಕನ್ನಡ ಅನುವಾದ-ವಿ.ಎಂ.ಇನಾಮದಾರ್
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ರಾಜೇಂದ್ರ ಮುರಗಯ್ಯ ಹಿರೇಮಠ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಯಯಾತಿ ಇದು ಒಂದು ಪೌರಾಣಿಕ ಕಥೆಯನ್ನೊಳಗೊಂಡ ಕಾದಂಬರಿಯಾಗಿದೆ. ಮಹಾಭಾರತದ ಮೂಲ ಕಥೆಯಲ್ಲಿ ಕಾಣಿಸಿಕೊಳ್ಳುವ ಯಯಾತಿಯ ಚಿತ್ರಣ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಯಯಾತಿ ಇಂದಿನ ಸರ್ವ ಸಾಮಾನ್ಯ ಮನುಷ್ಯನ ಪುರಾಣ ಕಾಲದಲ್ಲಿಯ ಪ್ರತಿಷ್ಠಿತ ಪ್ರತಿನಿಧಿಯಾಗಿದ್ದಾನೆ. ಈ ಪುಸ್ತಕವು ಪೌರಾಣಿಕ ರಾಜ ಯಯಾತಿ ಮತ್ತು ಅವನ ಜೀವನದ ದುರಾಸೆ, ಕಾಮ, ತ್ಯಾಗ ಮತ್ತು ಪಾಪ ಪವಿತ್ರಗಳ ಸಂಘರ್ಷವನ್ನು ಆಧುನಿಕ ದೃಷ್ಟಿಕೋನದಿಂದ ಬಿಂಬಿಸುತ್ತದೆ. ಯಯಾತಿ ತನ್ನ ಯೌವನವನ್ನು ಉಳಿಸಿಕೊಳ್ಳಲು ತನ್ನ ಮಗನಾದ ಪುರುವಿನಿಂದ ಯೌವನವನ್ನು ಪಡೆಯುವ ಘಟನೆಯು ಈ ಕಾದಂಬರಿಯ ಮುಖ್ಯ ಕಥಾ ವಸ್ತು. ಯಯಾತಿಯ ಪಾತ್ರವು 'ಬದುಕಿನಲ್ಲೇನೂ ಸಾಕಾಗುವುದಿಲ್ಲ' ಎನ್ನುವ ಮಾನವ ಧೋರಣೆಯನ್ನು ಅತ್ಯಂತ ಮಾರ್ಮಿಕವಾಗಿ ಬಿಚ್ಚಿಡುತ್ತದೆ. ದುರಾಸೆಗೆ ಅಂತ್ಯವಿಲ್ಲ ಎಂಬ ಸಂಗತಿಯನ್ನು ಈ ಕಥೆ ಬಲವಾಗಿ ಒತ್ತಿ ಹೇಳುತ್ತದೆ. ಖಾಂಡೆಕರ್ ಅವರು ಕಥೆಯನ್ನು ಕೇವಲ ಪುನರಾವರ್ತನೆ ಮಾಡದೆ, ಅದನ್ನು ಆಧುನಿಕ ಚಿಂತನೆಗಳಿಂದ ವಿಶ್ಲೇಷಿಸಿದ್ದಾರೆ. ಪ್ರತಿಯೊಂದು ಪಾತ್ರಗಳ ಮನೋಭಾವ, ವಿಚಿತ್ರ ಒಳಗಿನ ಹೋರಾಟ ಹಾಗೂ ನೈತಿಕ ಗೊಂದಲಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಈ ಕಾದಂಬರಿಯಲ್ಲಿ ಬರುವ ದೇವಯಾನಿ ಹಾಗೂ ಶರ್ಮಿಷ್ಠೆ ಇಬ್ಬರ ಪಾತ್ರಗಳು ಚೆನ್ನಾಗಿ ಮೂಡಿ ಬಂದಿವೆ. ದೇವಯಾನಿ ಕೋಪ, ಅಹಂಕಾರ, ನೋವುಗಳಿಂದ ಕೂಡಿದ ಗಟ್ಟಿಯಾದ ಪಾತ್ರವನ್ನು ಪ್ರತಿನಿಧಿಸಿದರೆ, ಶರ್ಮಿಷ್ಠೆಯ ಪಾತ್ರ ಸ್ವಾತಂತ್ರ್ಯದ ಹುಡುಕಾಟ, ಪ್ರೀತಿಯ ತಪಸ್ಸು, ತ್ಯಾಗದ ಸಂಕೇತವನ್ನು ಪ್ರತಿನಿಧಿಸುತ್ತದೆ. ಯಯಾತಿಯ ಮಗನಾದ ಪುರುವಿನ ಪಾತ್ರ ಅತಿ ಮಹತ್ವದ್ದು. ಅವನು ತನ್ನ ತಂದೆಗಾಗಿ ತನ್ನ ಯೌವನವನ್ನೇ ತ್ಯಾಗ ಮಾಡಿ, ತಪಸ್ಸಿಗಾಗಿ ತೆರಳುತ್ತಾನೆ. ಇಲ್ಲಿ ಪುರುವಿನ ಪಾತ್ರ ನಿಜವಾದ ಧರ್ಮ, ಕರ್ತವ್ಯಪರತೆ ಹಾಗೂ ನೈತಿಕ ಮೌಲ್ಯವನ್ನು ಹೇಳುತ್ತದೆ. ಈ ಕಾದಂಬರಿಯಲ್ಲಿ ಅತಿ ಸರಳವಾದ ಹಾಗೂ ಸಂಪನ್ನವಾದ ಭಾಷೆಯನ್ನು ಉಪಯೋಗಿಸಲಾಗಿದೆ. ಪ್ರತಿಯೊಂದು ಶಬ್ದ ಹಾಗೂ ವಾಕ್ಯವು ಅರ್ಥಪೂರ್ಣತೆಯಿಂದ ಕೂಡಿದೆ. ಇನ್ನು ಕನ್ನಡ ಅನುವಾದಕರಾದ ಶ್ರೀ. ವಿ.ಎಂ.ಇನಾಮದಾರ್ ಇವರು ಮೂಲ ಕಥೆಗೆ ಯಾವುದೇ ರೀತಿಯ ಚ್ಯುತಿ ಬಾರದ ಹಾಗೆ ಅತ್ಯಂತ ಸರಳ ಭಾಷೆಯಲ್ಲಿ ಸುಂದರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಭಾರತದ ಅತ್ಯುತ್ತಮ ಸಾಹಿತ್ಯ ಕೃತಿಗಳಲ್ಲಿ ಒಂದು.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಈ ಪುಸ್ತಕವನ್ನು ಪ್ರತಿಯೊಬ್ಬ ಸಾಹಿತಿ ಆಸಕ್ತರು ತಪ್ಪದೆ ಓದಲೇಬೇಕಾದ ಪೌರಾಣಿಕ ಕಥೆಯನ್ನಾಧರಿಸಿದ ಕಾದಂಬರಿಯಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಓದಬಹುದು.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.