Submission 1816

ಪುಸ್ತಕದ ಶೀರ್ಷಿಕೆ: ಅಮ್ಮ ಹೇಳಿದ ಎಂಟು ಸುಳ್ಳುಗಳು

ಪುಸ್ತಕದ ಲೇಖಕರು: ಎ.ಆರ್.ಮಣಿಕಾಂತ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಿನಯಗೌರಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಅಮ್ಮ ಹೇಳಿದ ಎಂಟು ಸುಳ್ಳುಗಳು ಹೆಸರು ಕೇಳುವುದಕ್ಕೆ ಒಂದು ರೀತಿಯಲ್ಲಿ ವಿಶೇಷ ಅನಿಸುತ್ತದೆ... ಕೆಟ್ಟ ಮಕ್ಕಳಾದರು ಇರಬಹುದು ಆದರೆ ಕೆಟ್ಟ ಅಮ್ಮಂದಿರು ಇರಲು ಸಾಧ್ಯವೇ ಇಲ್ಲ ಎನ್ನುವುದು ಹಿರಿಯರು ಹೇಳುವ ಮಾತು.. ಯಾಕೆಂದರೆ ತಾಯಿಗೆ ನಮ್ಮ ಸಂಸ್ಕೃತಿಯಲ್ಲಿ ಅಷ್ಟು ಬೆಲೆ ಇದೆ.. ಈ ಕತೆ ಅನ್ನುವುದಕ್ಕಿಂತ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕವಾಗುವ ಕತೆಯ ಸಾಲುಗಳು ಹೇಳುವುದು ಹತ್ತು ಹಲವು ಜೀವನದ ನೈಜ ಚಿತ್ರಣದ ಬಗ್ಗೆ.. ಉಗ್ರರ ದಾಳಿಯಿಂದ ತನ್ನ ಪ್ರಾಣ ಮುಡಿಪಾಗಿಟ್ಟು ನೂರೈವತ್ತು ಜನರನ್ನು ಕಾಪಾಡಿದ ಒಬ್ಬ ವ್ಯಕ್ತಿಯ ಬಗ್ಗೆ ಆಗಿರಬಹುದು ಅಥವಾ ಗುಡಿಸಲಲ್ಲಿ ಬದುಕುತ್ತಿದ್ದ ಕೋಟ್ಯಾಧಿಪತಿ ಬಗ್ಗೆ ಆಗಿರಬಹುದು ,ತೊಂಬತೊಂಬತ್ತು ಪ್ರತಿಶತ ಸುಟ್ಟು ಹೋದ ರೂಪ ಕಳೆದುಕೊಂಡು ಕುರೂಪವಾಗಿ ಬದುಕಿದ ಹೆಣ್ಣು ಮಗಳ ಬಗ್ಗೆ ಆಗಿರಬಹುದು ,ಕೈ ಕಾಲುಗಳಲ್ಲಿ ಅಥವಾ ದೇಹದ ಯಾವುದೋ ಮುಖ್ಯ ಅಂಗವೇ ಇಲ್ಲದೆ ಬದುಕಿದ ವ್ಯಕ್ತಿಗಳ ಬಗ್ಗೆ ಆಗಿರಬಹುದು . ಒಟ್ಟಿನಲ್ಲಿ ಇದು ಒಂದು ಜೀವನದ ಬಗ್ಗೆ ವಿಶ್ವಾಸ ಪ್ರೀತಿ ಹುಟ್ಟಿಸುವ ಕತೆಗಳ ಪೆಟ್ಟಿಗೆ ಎಂದರು ತಪ್ಪೇನಿಲ್ಲ.. ಕೆಲವು ಕತೆಗಳು ನಂಬಿಕೆಗೂ ಮೀರಿದ್ದು.. ಇನ್ನು ಕೆಲವು ಭಾವನೆಗಳಿಗೆ ಸಂಬಂಧ ಪಟ್ಟದ್ದು.. ಹೆಣ್ಣು ಭ್ರೂಣ ಹತ್ಯೆ,ಮಕ್ಕಳಿಗೆ ಸೂಕ್ಷ್ಮ ಪ್ರದೇಶಗಳಿಗೆ ಏಟು ಕೊಡಬಾರದು, ಕಿವುಡಿ ಅಮ್ಮನ ಆಸೆ ತೀರಿಸುವ ಮಗನ ಭಾವನೆಗಳು.. ಅದೆಷ್ಟು ಕತೆಗಳು.. ಓದುತ್ತಾ ಹೋದರೆ ನಿಲ್ಲಿಸಬೇಕು ಅನ್ನಿಸುವುದೇ ಇಲ್ಲ..

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಇಲ್ಲಿ ಮುಖ್ಯವಾದ ಪಾತ್ರ ಅಮ್ಮ..ಜೊತೆಗೆ ಅಂಗವೈಕಲ್ಯ ಹೊಂದಿದ್ದ ಎಲ್ಲ ಬದುಕಿನ ನೈಜ ಪಾತ್ರಗಳು..

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಬದುಕಿನಲ್ಲಿ ಸೋತು ಕುಳಿತವರಿಗೆ ಒಳ್ಳೆಯ ಆತ್ಮವಿಶ್ವಾಸ ತುಂಬಿಸುವ ಪುಸ್ತಕ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

6
Votes
90
Views
5 Months
Since posted

Voting Closed!

Scroll to Top