ಪುಸ್ತಕದ ಶೀರ್ಷಿಕೆ: ಸಾವು ( The Art Of Dying )
ಪುಸ್ತಕದ ಲೇಖಕರು: ಜೋಗಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಬಸಯ್ಯ ಹಿರೇಮಠ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
"ಸಾವು" The Art Of Dying. 'ಸಾವು' ನಾ ಕಂಡ ಅಪ್ರತಿಮ ಅನುಭವ ಇದು ಹುಟ್ಟಿದ ಪ್ರತಿಯೊಬ್ಬರಿಗೂ ಕಟ್ಟಿಟ ಬುತ್ತಿ ಇದು, ಇದು ಬರುವುದಿಲ್ಲ ಬಂದರೆ ಹೇಳಲು ನಾವು ಇರುವುದಿಲ್ಲ, ಕೇಳಲು ಕಿವಿಗಳು ಇರುವುದಿಲ್ಲ, ನೋಡಲು ಕಣ್ಣುಗಳು ಇರುವುದಿಲ್ಲ, ಹೇಳಲು ಬಾಯಿ ಬರುವುದಿಲ್ಲ, ಮುಟ್ಟಲು ಹೋದರೆ ಆಗುವುದಿಲ್ಲ, ಆಗ ಈ ಜೀವ ಅನ್ನೋ ಮಾಯೆ ಪರಮಾತ್ಮನ ಪಾದದಡಿಯಲ್ಲಿ ಒಂದು ಕಣದಷ್ಟು ಜಾಗ ಮಾಡಿಕೊಂಡು ಮುಕ್ತಿ ಹೊಂದುವುದೇ ಸಾವು. ಈ ಮರಣದಲ್ಲಿ ಒಬ್ಬ ವ್ಯಕ್ತಿ ಸತ್ತ ನಂತರ ಅವನು ಎಲ್ಲಿ ಹೋಗುತ್ತಾನೆ ಹೇಗೆ ಇರುತ್ತಾನೆ. ಅವನ ದೇಹ, ಅವನ ಅಸ್ತಿ, ಅವನ ಅಂತರಾತ್ಮ ಯಾವ ಮಾಯದಲ್ಲಿ, ಯಾವ ರೂಪದಲ್ಲಿ ಎಷ್ಟು ವಿಧವಾಗಿ ಯಾವ ಯಾವ ರೀತಿಯಲ್ಲಿ ಆತ್ಮ ಪರಮಾತ್ಮನಲ್ಲಿ ಹೇಗೆ ಲೀನವಾಗುತ್ತದೆ ಎನ್ನುವುದೇ ಈ ಸಾವು ಬುಕ್ಕಿನ ರಹಸ್ಯ. ಜೋಗಿ ಅವರು ಬರೆದಿರುವ 'ಸಾವು' ( ದ ಆರ್ಟ್ ಆಫ್ ಡೈಯಿಂಗ್ ) ಎಂಬ ಪುಸ್ತಕವು ಸುಮಾರು ರೀತಿಯ ಕಥೆಗಳನ್ನು ಹೇಳುತ್ತದೆ ಪ್ರಮುಖವಾಗಿ ಗರುಡ ಪುರಾಣದಲ್ಲಿ ಬರುವಂತಹ ಸಾವು ಆತ್ಮವಲೋಕನ ಶರೀರ ದಹನ ಅಂತ್ಯಕ್ರಿಯೆ, ಶಾಂತಿಕ್ರಿಯೆ, ದೇಹದ ಶರೀರ ಮುಕ್ತ ಹೀಗೆ ಹಲವಾರು ರೀತಿಯ ಮಾಹಿತಿಗಳನ್ನು ಇಲ್ಲಿ ಕಂಡಕೊಳ್ಳಬಹುದು. ಈ ಪುಸ್ತಕದ ಬಗ್ಗೆ ಸುಮಾರು ರೀತಿಯ ಅಭಿಪ್ರಾಯಗಳು ಉಂಟು ಆದರೆ ಹೇಳಲು 500 ಪದಗಳು ಸಾಲದು. ಒಬ್ಬ ವ್ಯಕ್ತಿ ಬದುಕಿದ ಜೀವನವನ್ನು ಹೇಗೆ ಅನುಭವಿಸಿರುತ್ತಾನೋ ಹಾಗೆ ಸಾವನ್ನು ಸಂಭ್ರಮದಿಂದ ಸ್ವಾಗತಿಸುವಂತಿರಬೇಕು, ಜೀವಂತವಿದ್ದಾಗ ಸಂಭ್ರಮಿಸಿದಷ್ಟು ವ್ಯಕ್ತಿಯು ಸಾವನ್ನು ಸಂಭ್ರಮಿಸುವಂತಿರಬೇಕು,ಆದ್ರೆ ವ್ಯಕ್ತಿಯು ತನ್ನ ಬದುಕಿನ ಸಂಭ್ರಮಗಳನ್ನು ಆನಂದಿಸಿದಷ್ಟು, ಸಾವನ್ನು ಸಂಭ್ರಮಿಸಲಾರ ಯಾಕಂದರೆ ಈ ಶರೀರದ ಜೀವವು ಅಥವಾ ಪ್ರಾಣ ವಾಯು ಒಮ್ಮೆ ಈ ಶರೀರವನ್ನು ಬಿಟ್ಟು ಹೋದರೆ ಮತ್ತೆ ಅದು ಸೇರುವುದು ಬೇರೊಂದು ಜೀವವನ್ನೇ ಎಂದು ಅದು ಬಂದ ದೇಹವನ್ನು ಎಂದು ಸ್ವೀಕರಿಸಲಾಗದು. ಆದ್ದರಿಂದ ಮನುಷ್ಯನ ದೇಹಕ್ಕೆ ಸಾವು ಖಚಿತ ಆದರೆ ಮನುಷ್ಯನ ಆತ್ಮಕ್ಕೆ ಅಳಿವು ಇಲ್ಲ ಹೀಗಾಗಿ ಆತ್ಮವೂ ಪರಮಾತ್ಮನಲ್ಲಿ ಲೀನವಾದ ಬಳಿಕ ಮರು ಜನ್ಮವು ಯಾವುದು ಒಂದು ರೀತಿಯ ಜೀವಿಯಾಗಿ ಭೂಮಿ ಅಥವಾ ಅನ್ಯಗ್ರಹ ಪ್ರಾಣಿ ಪಕ್ಷಿ ಹೀಗೆ ನಾನಾ ರೀತಿಯ ಮರುಜನ್ಮವನ್ನು ಪಡೆದು ಮತ್ತೊಂದು ರೀತಿಯ ಹೊಸ ಬದುಕನ್ನು ಪ್ರಾರಂಭಿಸುತ್ತವೆ ಆಗ ಹಿಂದಿನ ಜನ್ಮ ಮರುಜನ್ಮ ಮತ್ತೊಂದು ಜನ್ಮ ಅನ್ನೋ ಹಾಗೆ ಆತ್ಮವೂ ಬದಲಾಗುತ್ತಾ ಶರೀರದಿಂದ ಶರೀರಕ್ಕೆ ಅಥವಾ ಜೀವಿಯಿಂದ ಜೀವಿಕ್ಕೆ ಹಾರುತ್ತ ಹೋಗುತ್ತದೆ ಆದರೆ ಮೊದಲ ಮರಣ ಹೊಂದಿದ ವ್ಯಕ್ತಿ ಯಾವುದೇ ಕಾರಣಕ್ಕೂ ಮೊದಲಿನ ದೇಹವನ್ನು ಸೇರಲಾರ ಹೀಗಾಗಿ ಸಾವು ಎಂಬ ಪುಸ್ತಕವು ಕೆಲವು ಗರುಡ ಪುರಾಣದಲ್ಲಿ ಬರುವಂತಹ ಅಧ್ಯಯಗಳನ್ನು ಆಧರಿಸಿ ಅನುಕರಿಸಿ ಕೆಲವು ಹಾಗೂ ತಿಳುವಳಿಕೆಯ ಮಟ್ಟಕ್ಕಾಗಿ ಮರಣದ ಬಗ್ಗೆ ಭಯ ಬರದಂತೆ ಒಂದು ಸಾಮಾನ್ಯ ಜ್ಞಾನವಾಗಿ ಹೊರಹೊಮ್ಮುವುದಕ್ಕಾಗಿ ಈ ಪುಸ್ತಕವು ತುಂಬಾ ಸಹಾಯಕವಾಗಿದೆ. ನಾನು ಓದಿರುವ ಪ್ರಕಾರ ನನಗೆ ತಿಳುವಳಿಕೆ ಇರುವ ಪ್ರಕಾರ ಈ ಒಂದು ಪುಸ್ತಕವು ಮಾನಸಿಕವಾಗಿ ಯಾವುದೇ ತೊಂದರೆ ಇಲ್ಲದೆ ಯಾವುದೇ ಕಾರಣಕ್ಕೂ ಮನಸ್ಸಿಗೆ ತೆಗೆದುಕೊಳ್ಳದೆ ಓದಿದರೆ ಮರಣದ ಭಯ ಇರುವುದಿಲ್ಲ ಮರಣದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಪುಸ್ತಕದಲ್ಲಿ ನೀಡಲಾಗಿದೆ. ಜೋಗಿ ಅವರು ಬರೆದಿರುವಂತಹ ಸಾವು ಪುಸ್ತಕವು ಗರುಡ ಪುರಾಣದ ಕೆಲವು ಆಯ್ದ ಭಾಗಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ಅನುಭವಕ್ಕೆ ಇರುವಂತೆ ಈ ಪುಸ್ತಕದಲ್ಲಿ ಬರೆದಿರುತ್ತಾರೆ. ನನ್ನ ಮನಸ್ಸಿಗೆ ನನ್ನ ಮಸ್ತಕಕ್ಕೆ ಹಾಗೂ ನನ್ನ ಮುಂದಿನ ಜೀವನಕ್ಕೆ ಈ ಪುಸ್ತಕವು ಒಂದು ರೀತಿಯಲ್ಲಿ ಸಹಾಯಕ ಹಾಗೂ ಹೆಚ್ಚಿನ ತಿಳುವಳಿಕೆಗಾಗಿ ಈ ಪುಸ್ತಕವು ನಮಗೆ ಉಪಯೋಗವಾಗಿದೆ ಧನ್ಯವಾದಗಳು.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಇಲ್ಲಿ ಯಾವುದೇ ರೀತಿಯ ಪಾತ್ರಗಳು ಕಂಡು ಬಂದಿಲ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಸಾವಿನ ಬಗ್ಗೆ ಭಯ ಇರುವವರಿಗೆ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.