Submission 1792

ಪುಸ್ತಕದ ಶೀರ್ಷಿಕೆ: ಶಿಕ್ಷಣದ ತತ್ವಗಳು

ಪುಸ್ತಕದ ಲೇಖಕರು: ಸ್ವಾಮೀ ವಿವೇಕಾನಂದ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಮುಸ್ಕಾನ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಶಿಕ್ಷಣವು ದೇಶದ ಭವಿಷ್ಯವನ್ನು ರೂಪಿಸುವ ಮಹತ್ವದ ಅಸ್ತಿಪಂಜರ. ಇಂತಹ ಶಿಕ್ಷಣ ಕ್ಷೇತ್ರದ ಬಗ್ಗೆ 19ನೇ ಶತಮಾನದ ಮಹಾನ್ ಯೋಗಿ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಸ್ವಾಮಿ ವಿವೇಕಾನಂದರು ಅತ್ಯಂತ ಆಳವಾದ ಮತ್ತು ಕಾಲಾತೀತವಾದ ತತ್ವಗಳನ್ನು ನೀಡಿದರು. ಅವರ ಪ್ರಕಾರ, “ಶಿಕ್ಷಣ ಎಂದರೆ ಪುಸ್ತಕದ ಮಾಹಿತಿ ತುಂಬುವುದು ಅಲ್ಲ, ಮನುಷ್ಯನ ಒಳಗೆ ಇರುವ ಶಕ್ತಿ ಮತ್ತು ಪರಿಪೂರ್ಣತೆಯನ್ನು ಹೊರತೆಗೆಯುವುದು.” ಸ್ವಾಮಿ ವಿವೇಕಾನಂದರ ಪ್ರಕಾರ, “ಶಿಕ್ಷಣವೆಂದರೆ ಮನುಷ್ಯನಲ್ಲಿರುವ ಪರಿಪೂರ್ಣತೆಯನ್ನು ಹೊರತೆಗೆದು ತರಬೇತಿ ನೀಡುವುದು.”ಮನುಷ್ಯನಲ್ಲಿರುವ ಜ್ಞಾನ, ಸಾಮರ್ಥ್ಯ, ಶಕ್ತಿ, ನೈತಿಕತಯನ್ನು ಶಿಕ್ಷಣದ ಮೂಲಕ ಬೆಳೆಯುತ್ತದೆ. ಅವರ ಮಾತು: “ನನ್ನ ದೇಶಕ್ಕೆ ಕೇವಲ ಬುದ್ಧಿಜೀವಿಗಳು ಬೇಡ; ಶಕ್ತಿಯುಳ್ಳ, ನೈತಿಕತೆ ಇರುವ ಯುವಕರೇ ಬೇಕು.” ಆದ್ದರಿಂದ ಅವರ ಶಿಕ್ಷಣದ ತತ್ವದಲ್ಲಿ ವ್ಯಕ್ತಿತ್ವ — ಮುಖ್ಯ. ಸ್ವಾಮಿ ವಿವೇಕಾನಂದರು ಯುವಕರಿಗೆ ಅತ್ಯಂತ ಮುಖ್ಯವಾದ ಸಂದೇಶ ನೀಡಿದರು— “ಧೈರ್ಯವಾಗಿರಿ! ನಿರ್ಭಯರಾಗಿರಿ! ದುರ್ಬಲತೆ ಪಾಪ.”ಯುವಕರಿಗೆ ಅವರ ಸಂದೇಶ: “ಉಯ್ಯಾಲೆ ಬಡಿಯುವಂತಹ ಹೃದಯವಿಲ್ಲದೆ, ಪುಸ್ತಕ ಓದಿದ ವಿದ್ಯೆಗೇನು ಅರ್ಥ?” ವಿವೇಕಾನಂದರು ಶಕ್ತಿಶಾಲಿ ವ್ಯಕ್ತಿತ್ವವನ್ನು ನಿರ್ಮಿಸಲು ದೇಹದ ಬಲಕ್ಕೂ ಮಹತ್ವ ನೀಡಿದರು. ಅವರ ಪ್ರಸಿದ್ಧ ಮಾತು: “ಶ್ರೀಮದ್ಭಗವದ್ಗೀತೆಯನ್ನು ಓದುವುದಕ್ಕಿಂತ ಫುಟ್ಬಾಲ್ ಆಡಿದರೆ ಹೆಚ್ಚು ಬಲವಾಗುವಿರಿ.” ಸ್ವಾಮಿ ವಿವೇಕಾನಂದರು ಮಹಿಳಾ ಶಿಕ್ಷಣಕ್ಕೆ ವಿಶೇಷ ಸ್ಥಾನ ನೀಡಿದರು. ಅವರ ಮಾತು: “ಮಹಿಳೆಯನ್ನು ಬಲಿಷ್ಠಳನ್ನಾಗಿ ಮಾಡಿದರೆ ಒಂದು ಪೀಳಿಗೆಯೇ ಉದ್ಧಾರ.” ಶಿಕ್ಷಣವು ಉದ್ಯೋಗಕ್ಕಾಗಲಿ, ಬದುಕಿಕ ಕೌಶಲ್ಯಕ್ಕಾಗಿ, ಸಮಾಜಿಕ ಜವಾಬ್ದಾರಿಗಾಗಿ , ಅಥವಾ ಮಾನವೀಯ ಸಂಬಂಧಗಳಿಗಾಗಿ,ಸೇವಾಭಾವಕ್ಕಾಗಿ ಬಳಕೆಯಾಗಬೇಕು ಎಂದು ಹೇಳಿದ್ದಾರೆ. ಸ್ವಾಮಿ ವಿವೇಕಾನಂದರು: ಜಾತಿ, ಧರ್ಮ, ಲಿಂಗ, ಆರ್ಥಿಕ ಪರಿಸ್ಥಿತಿ ನೋಡದೇ ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕು ಇರಬೇಕು ಎಂದು ಹೇಳಿದರು. ಅವರು ಉಪದೇಶಿಸಿದ ಮಂತ್ರ: “ಎಲ್ಲಾ ಮನುಷ್ಯರೂ ದೇವರ ಮಕ್ಕಳು—ಅವರಿಗೆ ಶಿಕ್ಷಣದ ಅವಕಾಶ ಕೊಡಬೇಕು.” ಶಿಕ್ಷಣವು ಯುವಕರಲ್ಲಿ ಸೇವಾಭಾವನೆ ಹುಟ್ಟಿಸಬೇಕು ದೇಶಕ್ಕೆ ಸಮರ್ಪಣೆ ಮಾಡಬೇಕೆಂಬ ಮನೋಭಾವ ಮೂಡಿಸಬೇಕು ದೇಶಭಕ್ತಿ, ಸಾಂಸ್ಕೃತಿಕ ಗೌರವ, ಮಾನವೀಯತೆ—ಇವೆಲ್ಲವನ್ನೂ ಬೋಧಿಸಬೇಕು. ಅವರ ಘೋಷಣೆ: “ಉತ್ತಮ ಶಿಕ್ಷಣ ಪಡೆದ ಯುವಕರು – ದೇಶದ ಭವಿಷ್ಯ.” ವಿವೇಕಾನಂದರ ಶಿಕ್ಷಣ ತತ್ವಗಳ ವೈಶಿಷ್ಟ್ಯಗಳು:- ಆತ್ಮವಿಶ್ವಾಸ ಅಭಿವೃದ್ಧಿ ನೈತಿಕ ಜೀವನ ಆಧ್ಯಾತ್ಮಿಕತೆ ರಾಷ್ಟ್ರಪ್ರೇಮ ಕೌಶಲ್ಯ ಕೇಂದ್ರಿತ ಶಿಕ್ಷಣ ವ್ಯಕ್ತಿತ್ವ ನಿರ್ಮಾಣ ಸೇವಾಭಾವ ಧೈರ್ಯ ಮತ್ತು ನಿರ್ಭಯತೆ ಮಹಿಳಾ ಗ್ರಾಮೀಣ ಸ್ವಾಮಿ ವಿವೇಕಾನಂದರ “ಶಿಕ್ಷಣದ ತತ್ವಗಳು” ಪುಸ್ತಕವು ಕೇವಲ ಶಿಕ್ಷಣದ ವಿಚಾರಗಳ ಸಂಕಲನ ಮಾತ್ರವಲ್ಲ; ಅದು ಭವಿಷ್ಯದ ದೃಷ್ಟಿಕೋನ, ಮನುಷ್ಯತ್ವದ ಘೋಷಣೆ, ನೈತಿಕ ಜೀವನದ ಪಾಠ, ಯುವಕರಿಗೆ ಮಾರ್ಗದರ್ಶನ, ಮತ್ತು ರಾಷ್ಟ್ರೋತ್ಥಾನದ ಸಂದೇಶ. ವಿವೇಕಾನಂದರ ಶಿಕ್ಷಣದ ತತ್ವಗಳು ಮಾನವೀಯತೆಯ ಮೇಲೆ ಆಧಾರಿತವಾಗಿದ್ದು, ಇಂದಿನ ಕಾಲದಲ್ಲೂ ಸಮಾನವಾಗಿ ಅನ್ವಯಿಸುವಂತಹ ಶಾಶ್ವತ ಮೌಲ್ಯಗಳನ್ನು ಹೊಂದಿದೆ. ಅವರ ಮಾತುಗಳನ್ನು ಒಂದೇ ವಾಕ್ಯದಲ್ಲಿ ಸಾರಬೇಕಾಗಿದರೆ— “ಶಿಕ್ಷಣವು ಮನುಷ್ಯನ ಹೃದಯ ಮತ್ತು ಬುದ್ಧಿಯನ್ನು ಒಂದಾಗಿ ಬೆಳಸುವ ಮಹೋನ್ನತ ಪ್ರಯತ್ನ.”

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

“ಶಿಕ್ಷಣದ ತತ್ವಗಳು” ಪುಸ್ತಕದಲ್ಲಿ ಕವಿ ಶಿಕ್ಷಣದ ನಿಜಸ್ವರೂಪದ ಕುರಿತು ತನ್ನ ಆಳವಾದ ಚಿಂತನೆಗಳನ್ನು ವ್ಯಕ್ತಪಡಿಸಿದ್ದಾನೆ. ಕವಿಯ ಆಶಯವೆಂದರೆ — ಶಿಕ್ಷಣವು ಕೇವಲ ಪಾಠಪುಸ್ತಕಗಳ ಜ್ಞಾನವಲ್ಲ; ಮನುಷ್ಯನ ಒಳಗಿನ ಶಕ್ತಿ, ಗುಣ, ಸಾಮರ್ಥ್ಯ ಮತ್ತು ಮನುಷ್ಯತ್ವವನ್ನು ಹೊರತೆಗೆಯುವ ಮಹೋದ್ದೇಶ ಹೊಂದಿರಬೇಕು. ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ. ಮನುಷ್ಯನ ಒಳಗಿನ ದೈವಿಕ ಶಕ್ತಿಯನ್ನು ಜಾಗೃತಗೊಳಿಸುವ ಶಕ್ತಿ ಶಿಕ್ಷಣದಲ್ಲಿದೆ. ಶಿಕ್ಷಣವು ಯುವಕರಲ್ಲಿ ನಿರ್ಭಯತೆ, ಶ್ರಮ, ಜವಾಬ್ದಾರಿ ಮತ್ತು ರಾಷ್ಟ್ರಪ್ರೇಮವನ್ನು ಹೆಚ್ಚಿಸಬೇಕು ಎಂದು ಕವಿ ಒತ್ತಿ ಹೇಳುತ್ತಾನೆ. ನೈತಿಕ ಮೌಲ್ಯಗಳು, ದಯೆ, ಸೇವೆ, ಸತ್ಯ, ಧೈರ್ಯ, ಆತ್ಮವಿಶ್ವಾಸ — ಇವುಗಳನ್ನು ಬೆಳೆಸುವುದೇ ನಿಜವಾದ ವಿದ್ಯೆ. ಕವಿ ಪ್ರಕಾರ, ಶಾಲೆಯ ಶಿಕ್ಷಣಕ್ಕಿಂತ ಜೀವನದ ಶಿಕ್ಷಣ ಮುಖ್ಯ. ಜೀವನವನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿಸದ ಶಿಕ್ಷಣ ಅಪೂರ್ಣ. ಸಮಾಜಕ್ಕೆ ಉಪಯೋಗವಾಗುವ ಉತ್ತಮ ಮನುಷ್ಯರನ್ನು ರೂಪಿಸಬೇಕು.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಈ ಪುಸ್ತಕ ವಿದ್ಯಾರ್ಥಿಗಳು – ಜೀವನದ ಗುರಿ, ಶಿಸ್ತು, ಆತ್ಮವಿಶ್ವಾಸ ಮತ್ತು ನೈತಿಕತೆ ತಿಳಿಯಲು. ಶಿಕ್ಷಕರು – ಉತ್ತಮ ಮಾರ್ಗದರ್ಶನ ಮತ್ತು ಮೌಲ್ಯಾಧಾರಿತ ಬೋಧನೆಗಾಗಿ. ಯುವಕರು – ವ್ಯಕ್ತಿತ್ವ ನಿರ್ಮಾಣ, ನಾಯಕತ್ವ ಮತ್ತು ಜೀವನದ ದಿಕ್ಕು ಪಡೆಯಲು. ಪೋಷಕರು – ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಬೇಕು ಎಂಬ ಅರಿವು ಪಡೆಯಲು. ಶಿಕ್ಷಣ ಕ್ಷೇತ್ರದ ಸಂಶೋಧಕರು ಮತ್ತು ಆಸಕ್ತರು – ಶಿಕ್ಷಣದ ತತ್ವಶಾಸ್ತ್ರ ತಿಳಿಯುವವರಿಗೆ. ಮಾನವೀಯ ಮೌಲ್ಯಗಳನ್ನು ಅರಸುವ ಓದುಗರು – ಪ್ರೇರಣಾದಾಯಕ, ಧಾರ್ಮಿಕ-ಆಧ್ಯಾತ್ಮಿಕ ಚಿಂತನೆಗಳನ್ನು ಅರ್ಥಮಾಡಿಕೊಳ್ಳಲು.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

46
Votes
401
Views
7 Months
Since posted

Voting Closed!

Scroll to Top