ಪುಸ್ತಕದ ಶೀರ್ಷಿಕೆ: ಕರ್ವಾಲೋ
ಪುಸ್ತಕದ ಲೇಖಕರು: ಕೆ ಪಿ ಪೂರ್ಣಚಂದ್ರ ತೇಜಸ್ವಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಕಾವ್ಯ ಸುರೇಶ್ ಕಾಂಬ್ಳೆ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರು ಮಲೆನಾಡಿನ ಕಾಡು , ಮಳೆ, ಅಲ್ಲಿನ ಜೇನು ಸಾಕಾಣಿಕೆ, ಹಾಗೂ ವಿವಿಧ ರೀತಿಯ ಜೇನು ಹುಳುಗಳ ಬಗ್ಗೆ ಹೇಳುತ್ತಾ, ಅಲ್ಲಿ ಅವರಿಗಾದ ಅನುಭವ ದ ಬಗ್ಗೆ ಹಂಚಿಕೊಂಡಿದ್ದಾರೆ. ಅವರಿಗೆ ಪರಿಚಯ ವಾದ ಮಂದಣ್ಣ, ಲಕ್ಷ್ಮಣ, ಪ್ರಭಾಕರ ಇವರ ಜೊತೆಗಿನ ಒಡನಾಟ, ಎಲ್ಲರಿಂದಲೂ ಒಂದೊಂದು ವಿಷಯ ತಿಳಿಯುವಿಕೆ, ಹಾಗೇನೇ ಮುಖ್ಯಪಾತ್ರ ದಲ್ಲಿದ್ದ ಕಾಲಜ್ಞಾನಿ ಕರ್ವಾಲೋ, ಅವರ ಅಪಾರ ತಿಳುವಳಿಕೆ, ಅವರ ಶಾಂತ ಸ್ವಭಾವ, ಅವರ ಒಡನಾಟ ಇದೆರೆಲ್ಲ ಬಗ್ಗೆ ಅಚ್ಚುಕಟ್ಟಾಗಿ ತಿಳಿಸಿದ್ದಾರೆ. ಅಲ್ಲಿ ನಡೆದ ಪ್ರತಿ ಸನ್ನಿವೇಶದಲ್ಲೂ ಮಂದಣ್ಣನ ಕೈವಾಡ, ತುಂಟಾಟ ನೋಡಬಹುದು. ಮಂದಣ್ಣನ ಪುoಡಾಟಿಕೆಗೆ ಬೇಸತ್ತು ಹೋಗಿದ್ದ ಊರಿನ ಜನ,ಕರ್ವಲೋ ಅವನಿಗೆ ನೀಡುವ ಮಹತ್ವವನ್ನು ನೋಡಿ, ಅವನ ಜೊತೆ ಅವರಿಗೂ ಬೈದು ಏನೇನು ಕಥೆ ಕಟ್ಟಿದ್ದರು. ಷರಾಬು ವಿಷಯಕ್ಕೆ ಮಂದಣ್ಣನನ್ನು ಬಿಡಿಸುವ ಕರ್ವಾಲೋ ಅವರ ಪ್ರಯತ್ನ ಪೂರ್ಣಚಂದ್ರ ತೇಜಸ್ವಿ ಅವರ ಕುತೂಹಲ ಹೆಚ್ಚಾಗಲು ಕಾರಣ ವಾಗಿತ್ತು.ಅವನನ್ನು ಬಿಡಿಸುವ ಹಿಂದಿನ ರಹಸ್ಯ ತಿಳಿದುಕೊಂಡ ಕವಿ ಕೂಡ ಕರ್ವಾಲೋ ಅವರ ಜೊತೆ ಕೈ ಜೋಡಿಸುತ್ತಾರೆ. ಇದರಿಂದ ಕವಿ ಅವರಿಗಿರುವ ಪರಿಸರ ದ ಬಗ್ಗೆ ತಿಳಿದುಕೊಳ್ಳುವ ಉತ್ಸಾಹ ಎದ್ದು ತೋರುತ್ತದೆ. ಮೂರರ ಮುಂದೆ ಏಳು ಸೊನ್ನೆ ಯಷ್ಟು ಹಿಂದಿನ ಒಂದು ಜೀವಿಯ ಹುಡುಕಾಟಕ್ಕೆ ಮಂದಣ್ಣ, ಪ್ರಭಾಕರ, ಕರಿಯಪ್ಪ, ಕಿವಿ ಹಾಗೂ ಇನ್ನಿತರರು ಹಚ್ಚಹಸಿರು ತುಂಬಿದ ಕಾಡಿನಲ್ಲಿ ಹುಡುಕಾಟ, ಕೊನೆಗೂ ಕವಿಯ ಕಣ್ಣಿಗೆ ಬಿದ್ದ ಆ ಹಾರುವ ಓತಿಕಾಟ, ಅವರೆಲ್ಲರ ಪರಿಶ್ರಮ ಸಾರ್ಥಕ ಎನ್ನಿಸಿತು.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಈ ಕಾದಂಬರಿಯಲ್ಲಿ ಇಷ್ಟವಾದ ಪಾತ್ರ ಮಂದಣ್ಣ. ಸ್ಮರಣಿಯ ಕ್ಷಣ : ಷರಾಬು ವಿಷಯಕ್ಕೆ ಪೊಲೀಸ್ ಅವರು ಮಂದಣ್ಣನನ್ನ ಕರೆದುಕೊಂಡು ಹೋಗಿದ್ದಾಗಿ ಹಾಗೆ ಅದಕ್ಕೆ ನಾನು ಜಾಮೀನು ಕೊಟ್ಟರುವುದಾಗಿ ಪೂರ್ಣಚಂದ್ರ ತೇಜಸ್ವಿ ಅವರು ಕರ್ವಾಲೋ ಅವರಿಗೆ ಹೇಳಿ ಮಂದಣ್ಣನ ಬಗ್ಗೆ ಮನಸ್ತಾಪ ವ್ಯಕ್ತಪಡಿಸಿದ ನಂತರ ಕರ್ವಾಲೋ ಅವರು, ನೀವು ಅವನಿಗೆ ಜಾಮೀನು ಕೊಟ್ಟು ಉಪಕಾರ ಮಾಡಿದಿರಿ ಎಂದು ಹೇಳುತ್ತಾರೆ. ಹೇಗಾದರೂ ಮಾಡಿ ಅವನನ್ನು ಇದರಿಂದ ಪಾರು ಮಾಡಬೇಕೆಂದು ಹೇಳುತ್ತಾರೆ. ಆಗ ಅನಿಸಿದ್ದು ಕಾಲಜ್ಞಾನಿ ಆಗಿರುವ ಕರ್ವಾಲೋ ಅವರಿಗೆ ಅಷ್ಟು ಬೇಕಾಗಿರುವ ಮಂದಣ್ಣನಲ್ಲಿ ಅಂತದ್ದೇನು ವಿಶೇಷತೆ ಎಂದು ತಿಳಿಯಲು ಇಡಿ ಪುಸ್ತಕ್ ಓದಬೇಕೆಂಬ ಕುತೂಹಲ ಹೆಚ್ಚಾಗಿದ್ದು.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.