Submission 1724

ಪುಸ್ತಕದ ಶೀರ್ಷಿಕೆ: ಕಾರಂತರ ಚೋಮನ ದುಡಿ

ಪುಸ್ತಕದ ಲೇಖಕರು: ಶಿವರಾಮ ಕಾರಂತರು

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಹೇಮಂತ್ ಕೋಲಾರ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿ, ಶೋಷಿತ ಸಮುದಾಯಗಳ ಜೀವನದ ಅರ್ಥವನ್ನು ಪ್ರತಿಬಿಂಬಿಸುವ ಮಹತ್ವದ ಸಾಹಿತ್ಯಕ ಕೃತಿ. ಈ ಕಾದಂಬರಿ ಗ್ರಾಮೀಣ ಪರಿಸರದ ಕಠಿಣ ಬದುಕು, ಜಮೀನ್ದಾರರ ಶೋಷಣೆ, ಜಾತಿ ವ್ಯವಸ್ಥೆಯ ಅನ್ಯಾಯ ಮತ್ತು ಧಾರ್ಮಿಕ ನಂಬಿಕೆಗಳ ವ್ಯತಿರಿಕ್ತತೆಯನ್ನು ವೈಭವದಿಂದ ಚಿತ್ರಿಸುತ್ತದೆ. ಇದು ಕೇವಲ ಸಾಹಿತ್ಯಕ ಕೃತಿಯಲ್ಲ, ಇಡೀ ಸಮಾಜದ ಬದಲಾವಣೆಗೆ ಒತ್ತಾಯ ಮಾಡುವ ಪ್ರಬುದ್ಧ ಕೃತಿ. ಕಾದಂಬರಿಯ ಕೇಂದ್ರ ಪಾತ್ರ ಚೋಮ—ಒಬ್ಬ ಹೊಲೆಯ ಸಮುದಾಯದ ದುಡಿಯುವ ಕೃಷಿಕ. ಅವನಿಗೆ ದುಡಿಮೆಯೇ ದೇವರು; ಆದರೆ ಜಾತಿ ಹಾಗೂ ಆರ್ಥಿಕ ಅನ್ಯಾಯವು ಅವನ ಬದುಕನ್ನು ನಿರಂತರವಾಗಿ ಹಿಂಸೆಗೊಳಿಸುತ್ತದೆ. ಅವನಿಗೆ ಪ್ರೀತಿಯ ಹಾಡು, ಸಂತೋಷ, ದುಃಖ—ಎಲ್ಲವೂ ಅವನ ಡಮರುಗ ನಾದದ ಮೂಲಕ ವ್ಯಕ್ತವಾಗುತ್ತದೆ. ಭೂಮಿಯ ಅಭಾವ ಅವನ ಬದುಕಿನ ಕೇಂದ್ರ ಸಂಕಟ. ಜಮೀನ್ದಾರನ ಮುಂದೆ ಅವನ ಹೀನಜಾತಿ ಸ್ಥಿತಿ ಅವನ ಕನಸುಗಳನ್ನು ನುಚ್ಚುನೂರು ಮಾಡುತ್ತದೆ. ಚೋಮನು ಅವನ ಬಡತನ ಹಾಗೂ ಆರ್ಥಿಕ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಅವನ ಮಕ್ಕಳ ಸ್ಥಿತಿಗತಿಗಳು ಅದನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತವೆ. ಪಾಪದ ಮಾಯಾಜಾಲದಲ್ಲಿ ಸಿಕ್ಕಿ, ಅವನ ಮಕ್ಕಳು ಮಧ್ಯಪಾನ, ಮತಾಂತರ ಹಾಗೂ ದುರಾಡಳಿತದ ಬಲೆಗೆ ಸಿಲುಕುತ್ತಾರೆ. ಅವರ ಒಬ್ಬ ಮಗ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಸುಖ ಜೀವನ ನಡೆಸಿದರೆ, ಇನ್ನೊಬ್ಬನು ತಂದೆಯ ಆಧ್ಯಾತ್ಮಿಕ ನಂಬಿಕೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಾನೆ. ಇದು ಕೇವಲ ಕಥೆ ಮಾತ್ರವಲ್ಲ, ಇದರಲ್ಲಿ ಪ್ರತಿಬಿಂಬಿತವಾಗುವ ಸಮಾಜದ ಬೇಸರಕಾರಿ ಸ್ಥಿತಿಗತಿಗಳು ತುಂಬಾ ಮುಖ್ಯವಾಗಿ ಓದುಗರಿಗೆ ಮನಸ್ಸಿನೊಳಗೆ ಬೇರೂರುತ್ತವೆ. ಹೆಣ್ಣು ಮಕ್ಕಳ ಮೇಲೆ ಆಗುತ್ತಿದ್ದ ದೌರ್ಜನ್ಯ, ಕೆಳವರ್ಗದವರ ಮೇಲಿನ ಶೋಷಣೆ, ಜಾತಿ ತಾರತಮ್ಯ, ಮತಾಂತರದ ರಾಜಕೀಯ, ಬಡತನದ ದುಶ್ಚಕ್ರ, ಇವೆಲ್ಲವೂ ಚೋಮನ ಬದುಕನ್ನು ನಾಶ ಮಾಡುತ್ತವೆ. ಕೊನೆಗೆ, ಅವನ ಬದುಕಿನ ನಂಬಿಕೆಯೇ ಅವನಿಗೆ ದಿಕ್ಕು ತಪ್ಪಿಸುತ್ತದೆ. ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ನಂತರವೂ ಅವನು ತನ್ನ ದೈವವನ್ನು ತೊರೆಯಲು ಸಿದ್ಧನಾಗುವುದಿಲ್ಲ. ಆದರೆ, ಅದು ಅವನನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಕಾರಂತರ ಈ ಕೃತಿಯು ಕೇವಲ ಓದುವ ಕಾದಂಬರಿ ಅಲ್ಲ; ಇದು ಸಮಾಜದ ಯಥಾರ್ಥವನ್ನು ಮನಮುಟ್ಟುವಂತೆ ಕಟ್ಟಿಕೊಡುವ ದಿಗ್ಗಜರ ಸಾಹಿತ್ಯ. ಜಾತಿ ವ್ಯವಸ್ಥೆಯ ಕಪಟ, ಸಾಮಾಜಿಕ ಅನ್ಯಾಯ, ಶೋಷಿತರ ಸಂಕಟ. ಇವೆಲ್ಲವನ್ನು ತೀವ್ರ ಸಂಕಲನದ ಮೂಲಕ ಈ ಕಾದಂಬರಿಯಲ್ಲಿ ನಿರೂಪಿಸಲಾಗಿದೆ. ಇಂತಹ ಮಹತ್ವದ ಕೃತಿಯನ್ನು ಪ್ರತಿ ಓದುಗ ಓದಬೇಕು. ಈ ಶ್ರೇಷ್ಠ ಕೃತಿಯ ಸಂದೇಶ ಶೋಷಿತ ಸಮುದಾಯಗಳ ಕಟ್ಟುಪಾಡುಗಳು ನಮ್ಮೊಳಗೆ ಆಳವಾಗಿ ಬೇರೂರಬೇಕು, ನಮ್ಮ ಸಂವಿಧಾನದಲ್ಲಿ ಮೀಸಲಾತಿಯಾಕಿದೆ ಎಂಬುದು ಎಲ್ಲರ ಅರಿವಿಗೂ ಬರಬೇಕು.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಸ್ಮರಣೀಯ ಕ್ಷಣಗಳು ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿಯಲ್ಲಿ ಒಂದು ಘಟನೆ ಯಂತೂ ನನ್ನೊಳಗೆ ಆಳವಾಗಿ ಸ್ಮರಣೀಯವಾಗಿ ಉಳಿದುಬಿಟ್ಟಿದೆ. ಕೆರೆಯಲ್ಲಿ ಚೋಮನ ಮಗ ಕೆರೆಯ ನೀರಿಗೆ ಬಿದ್ದು ಈಜು ಬರದೇ ಒದ್ದಾಡುತ್ತಿರುದ್ದವಾಗ, ಅವನನ್ನು ಕಾಪಾಡಲು ನೀರಿಗಿಳಿದ ವ್ಯಕ್ತಿ ಅವನ ಜಾತಿ ತಿಳಿದು ಅವನನ್ನು ಮುಟ್ಟದೇ ಹಿಂತಿರುಗಿ ಬರುವಂತಹ ಒಂದು ದೃಶ್ಯ ಒಂದು ದುಃಖಕರವಾದಂತ ಒಂದು ಸಂಗತಿ. "ಚೋಮನ ದುಡಿ" ಒಂದು ದಲಿತರ ಜೀವನದ ಕತ್ತು ಪಾಡುಗಳನ್ನು ಓದುಗರ ಮನಮುಟ್ಟುವಂತೆ ಇರುವ ಒಂದು ಕಾದಂಬರಿ. ಇದರಲ್ಲಿ "ದುಡಿ" ಎಂಬುದು ಕೇವಲ ವಸ್ತುವಲ್ಲ ಅದು ಚೋಮನ ಭರವಸೆ ಆಗಿತ್ತು. ಪಾತ್ರಗಳು ಚೋಮ ಚೋಮನ ಮಕ್ಕಳಾದ ಕಾಳ,ನೀಳ,ಬೆಳ್ಳಿ , ಗುರುವ, ಚನೀಯ ಊರಿನ ಜಮೀನ್ದಾರರು ಇತರರು ಚೋಮನದುಡಿ ಕಾದಂಬರಿಯು ಸ್ವತಂತ್ರ ಪೂರ್ವದಲ್ಲಿ ಪ್ರಕಟವಾಗಿದ್ದು, ಇಂದು ನಮಗೆಲ್ಲಾ ಸ್ವಾತಂತ್ರ್ಯವಿದೆ, ಭಾರತದ ಪವಿತ್ರ ಗ್ರಂಥವಾದ ಸಂವಿಧಾನವಿದೆ. ಇಷ್ಟೆಲ್ಲಾ ಇದ್ದರೂ ಕೂಡ ದಲಿತರ ಮೇಲಿನ ಶೋಷಣೆಗಳು, ಜಾತಿ ತಾರತಮ್ಯ, ಅವರನ್ನು ನೋಡುವ ದೃಷ್ಟಿಕೋನ ಸಮಾಜದಲ್ಲಿ ನಿರಂತರವಾಗಿ ನಡೆಸುತ್ತಲೇ ಇದೆ. ಇರುವುದೊಂದೇ ಜಾತಿ‌, ಅದುವೇ ಮಾನವ ಜಾತಿ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ವಿದ್ಯಾರ್ಥಿಗಳಿಗಾಗಿ.. ಮೀಸಲಾತಿ ಏಕೆ ಎಂದು ಪ್ರಶ್ನಿಸುವುವವರಿಗಾಗಿ.. ಸಮಾಜದ ಓದುಗರಿಗಾಗಿ..

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

30
Votes
174
Views
5 Months
Since posted

Voting Closed!

Scroll to Top