Submission 1718

ಪುಸ್ತಕದ ಶೀರ್ಷಿಕೆ: ನಿತ್ಯೋತ್ಸವ

ಪುಸ್ತಕದ ಲೇಖಕರು: ಕೆ.ಎಸ್.ನಿಸ್ಸಾರ್ ಅಹಮದ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶರಣ್ ಎಮ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ನಿತ್ಯೋತ್ಸವ ಕವನ” ಕೆ .ಎಸ್ .ನಿಸ್ಸಾರ್ ಅಹಮದ್ ಅವರ ನಿತ್ಯೋತ್ಸವ ಕವನವು ಇಡೀ ಕರ್ನಾಟಕದ ಜನರ ಮನಸ್ಸಿನಲ್ಲಿ ಶಾಶ್ವತವಾದ ನೆಲೆಯನ್ನು ಗೊಂಡಿದ್ದು ಕನ್ನಡಿಗರ ಮನ ಮನಗಳಲ್ಲಿ ನೆಲೆಸಿದೆ. ಕನ್ನಡಿಗರ ನಾಡು ,ನುಡಿ, ನೆಲ,ಜಲ, ಸಂಸ್ಕೃತಿ ,ಪರಂಪರೆಯ ಬಗ್ಗೆ ತುಂಬಾ ಸೊಗಸಾಗಿ ಎಲ್ಲರ ಹೃದಯದ ಮುಟ್ಟುವ ಹಾಗೆ ಕನ್ನಡಿಗರಿಗೆ ನಿತ್ಯೋತ್ಸವವನ್ನ ಉಂಟು ಮಾಡುತ್ತದೆ. ಅವರು ಮೊದಲನೇ ಪ್ಯಾರದಲ್ಲಿ ಹೇಳುವ ಹಾಗೆ ನೈಸರ್ಗಿಕ ಸೌಂದರ್ಯವನ್ನು ಆಳವಾಗಿ ಹೇಳಿದ್ದಾರೆ ಬೆಟ್ಟಗಳು ,ಕಾಡುಗಳು , ನದಿಗಳು , ಜೋಗ ಜಲಪಾತ, ಹಸಿರು ತಾಣಗಳು ಮತ್ತು ಈ ತೇಗ ಮತ್ತು ಗಂಧ ಅನ್ನುವಂಥದ್ದು ಮಹತ್ವವಾದದ್ದು ,ಪ್ರಸಿದ್ಧವಾದದ್ದು ಅದು ಈ ಕನ್ನಡ ನಾಡಿನಲ್ಲಿ ಜೀವವಿದೆ ‌ ವಜ್ರ ,ಮುತ್ತು ಗಳಂತಹ ಕನ್ನಡಿಗರ ಒಂದು ಪ್ರೀತಿ ಅದರಲ್ಲಿದೆ. ಅವುಗಳೆಲ್ಲ ನೀನು ಕೊಟ್ಟಿದ್ದಿಯ ತಾಯಿ ನಾನು ಯಾವಾಗಲೂ ನಿನಗೆ ಧನ್ಯ ಚಿರುಮಣಿ ಅಂತ ತಾಯಿಗೆ ನಮನವನ್ನು ಸಲ್ಲಿಸುತ್ತಾರೆ. ಎರಡನೇ ಪ್ಯಾರದಲ್ಲಿ ಹೇಳುತ್ತಾರೆ. ಇತಿಹಾಸದಲ್ಲಿರುವಂತಹ ರೈತರು, ಹೊಲ ,ಉಸಿರಾಡುತ್ತಿರುವಂತಹ ಹಸಿರು ಬೆಳೆ ,ಬೀಜ ಬಿತ್ತನೆ ,ಹರಿಯುತ್ತಿರುವಂತಹ ನೀರು, ಪ್ರಾಣಿ ಪಕ್ಷಿಗಳು, ಇವುಗಳೆಲ್ಲ ಕನ್ನಡ ನಾಡಿನ ಬಾಳಿನ ಉತ್ಸವ ಅಂತ ಹೇಳುತ್ತಾರೆ ಹಬ್ಬಗಳು, ಹರಿದಿನಗಳು, ಕೂಟಗಳು ಜೊತೆಗೆ ನಲಿವು ಪ್ರೀತಿ ಜನರ ಸ್ನೇಹ ವಾತ್ಸಲ್ಯ ಎಲ್ಲವೂ ಜೀವನಕ್ಕೆ ನಮ್ಮ ಆತ್ಮಕ್ಕೆ ಒಂದು ಸುಂದರ ನೆನಪುಗಳು ಕೊಡುತ್ತದೆ ಇಂತಹ ನೆನಪುಗಳು ಶಾಶ್ವತವಾಗಿ ಕನ್ನಡಿಗರ ಮನಸಿನಲ್ಲಿ ಸದಾ ಉಳಿಯುತ್ತದೆ. ಅದೇ ರೀತಿಯಲ್ಲಿ ಮೂರನೇ ಪ್ಯಾರದಲ್ಲಿ ಹೇಳುತ್ತಾರೆ ಕವಿ, ಜನರ ಮನಸ್ಸು ,ಬದುಕಿನ ಶೈಲಿ, ಹೋಗುವ ದಾರಿ ಉತ್ತಮವಾಗಿರಬೇಕು ಬದುಕಿನ ಅರ್ಥತೆಯನ್ನ ಇವೆಲ್ಲವೂ ಕೂಡ ಉತ್ಸವದಿಂದ ನಲಿದಾಡಬೇಕು ಕುಣಿದಾಡಬೇಕು. ನಮ್ಮ ಧೈರ್ಯ, ಸತ್ಯದ ದಾರಿ, ನಮ್ಮ ಆತ್ಮಕ್ಕೆ ಗೌರವ, ಕನ್ನಡಿಗರಲ್ಲಿ ಒಗ್ಗಟ್ಟು, ಕನ್ನಡಿಗರ ಹೆಜ್ಜೆ ಗುರುತು ಶಾಶ್ವತವಾಗಿ ಉಸಿರಾಡುತಿರಬೇಕು ಅದು ಸದಾ ಜೀವಂತವಾಗಿರಬೇಕು ಇದರ ಜೊತೆಗೆ ಜನರ ಮುಖದಲ್ಲಿ ಸದಾ ನಗು ಹರಿದಾಡುತ್ತಿರಬೇಕು ಆತ್ಮೀಯತೆಯ ಮನಸ್ಸು ಒಂದು ಸರಳ ಬದುಕು ಇವುಗಳೆಲ್ಲಾ ಸಹ ಕನ್ನಡ ನಾಡಿನ ಹೆಮ್ಮೆಯ ಗೌರವ. ಇಲ್ಲಿ ಬದುಕುವಂತಹದು ಹಬ್ಬವಾಗಿರಲಿ ಇಲ್ಲಿ ಸದಾ ನಿತ್ಯೋತ್ಸವ ಉಸಿರಾಡುವುದೇ ನಿಜವಾದ ಉತ್ಸವ ನಿತ್ಯೋತ್ಸವ ಇದು ಕನ್ನಡಿಗರ ಪ್ರೀತಿ, ನಂಬಿಕೆ ವಿಶ್ವಾಸ ಅಪಾರವಾದದ್ದು. ಅಷ್ಟೇ ಅಲ್ಲದೆ ಇವರ ಈ ಒಂದು ನಿತ್ಯೋತ್ಸವ ಅನ್ನುವಂತಹ ಕವನ ಇದೆ ಅಲ್ವಾ ಇದು ಕನ್ನಡಿಗರ ಮನಸ್ಸಿನಲ್ಲಿ ನೆಲೆಗೊಂಡಿದ್ದು ಜನರ ಜೀವನ ಅನ್ನುವಂತದ್ದು ಸದಾ ಉತ್ಸವದಿಂದ ಇರಬೇಕು ಎಲ್ಲರನ್ನೂ ಪ್ರೀತಿಸಬೇಕು ಎಲ್ಲವನ್ನು ನಮ್ಮದಾಗಿಸಿಕೊಳ್ಳಬೇಕು ಇದು ಕನ್ನಡಿಗರ ಒಂದು ನಿಜವಾದ ಪ್ರೀತಿ, ವಾತ್ಸಲ್ಯ ಅನ್ನುವಂತದ್ದನ್ನ ಹೇಳುತ್ತಾ ಹೋಗುತ್ತಾರೆ.. ಹಾಗೆಯೇ ಅವರ ಕನ್ನಡವೆಂದರೆ ಬರಿ ನುಡಿಯಲ್ಲ ಈ ಒಂದು ಕವನವು ಎಲ್ಲರ ಮನಸ್ಸನ್ನು ಗೆದ್ದಿದ್ದು ,ಅಲ್ಲದೆ ಕನ್ನಡದ ನಿಜವಾದ ಅರ್ಥವನ್ನು ಕೊಟ್ಟಂತಹ ಇವೆಲ್ಲವೂ ಕೂಡ ನಾವು ಕನ್ನಡಿಗರು ಓದಿದಾಗ ನಮ್ಮ ಮನಸ್ಸಿನಲ್ಲಿ ಕನ್ನಡದ ಭಾವೈಕ್ಯತೆ ಸದಾ ನಮ್ಮಲ್ಲಿ ಉಳಿಯುವುದಕ್ಕೆ ಸಾಧ್ಯ ಆಗುತ್ತದೆ. ಅವರ ನನ್ನ ನುಡಿ ಎನ್ನುವಂಥದ್ದು ಇರಬಹುದು ಇವೆಲ್ಲವೂ ಕೂಡ ಕನ್ನಡಿಗರಿಗೂ ಕನ್ನಡದ ಒಲವನ್ನು ಹೆಚ್ಚಾಗಿ ಮಾಡುವುದಕ್ಕೆ ಕಾರಣವಾಗುತ್ತದೆ. , ಸಂಜೆ ಇದರ ಮಳೆ ಇರಬಹುದು ,ನಿಮ್ಮೊಂದಿಗಿದ್ದೆ ನಿಮ್ಮಂತಾಗದೆ ಈ ಕವನವು ಕೂಡ ಓದಿದಾಗ ನನಗೆ ಅರ್ಥ ಆಗಿದಿಷ್ಟೇ .. ಸಾಹಿತ್ಯ ಪ್ರೇಮದ ಒಲವು ಹೇಗಿದೆ ಅದನ್ನ ಅದನ್ನ ಹಾಗೆ ಮುಂದುವರಿಸಿಕೊಂಡು ಹೋಗಬೇಕು ಬರಿಯಬೇಕು, ಓದಬೇಕು ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕು ಎನ್ನುವಂತಹ ಉತ್ಸಾಹ ಏನಿತ್ತು ಅದು ಹಾಗೆ ಇರಬೇಕು ಅಂತ ಅರ್ಥವನ್ನು ಕೂಡ ಕೊಡುತ್ತದೆ ಅದೇ ರೀತಿಯಲ್ಲಿ ನಮ್ಮ ಪ್ರತಿಭೆಗಳು ಏನಿರುತ್ತದೆ ಅದನ್ನು ಉತ್ಸಾಹದಿಂದ ಉತ್ಸವದಿಂದ ನಾವು ಮಾಡಿಕೊಂಡು ಹೋಗಬೇಕು ಎನ್ನುವಂತದ್ದು. ನಮ್ಮ ಪ್ರತಿಭೆಗಳನ್ನು ಹಿಂಬಾಲಿಸಿಕೊಂಡು ಎಂತಹ ಜನರ ಒಟ್ಟಿಗೆ ಇದ್ದರೂ ಕೂಡ ನಾವು ನಮ್ಮತನವನ್ನು ಬಿಟ್ಟು ಕೊಡಬಾರದು ಎನ್ನುವಂತದನ್ನ ಆ ಕವನ ಹೇಳುತ್ತದೆ ಹೀಗೆ ಇವರ ಒಂದು ನಿತ್ಯೋತ್ಸವ ಅನ್ನುವಂತಹ ಕವನವು ಜನರ ಮನಸ್ಸಿನಲ್ಲಿ ಆಳವಾಗಿ ಕೂತಿದ್ದಲ್ಲದೆ ಇಂದಿಗೂ ಉಸಿರಾಡುತ್ತಿದೆ. ಆ ಉಸಿರು ನಿಲ್ಲುವುದಿಲ್ಲ ಕನ್ನಡಿಗರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಕೂಡ ಆ ನಿತ್ಯೋತ್ಸವ ಉಸಿರಾಡುತ್ತಿರುತ್ತದೆ ಎಲ್ಲಿವರೆಗೂ ಅಂದರೆ ಸೂರ್ಯ ಚಂದ್ರ ಇರುವವರೆಗೂ ನಿತ್ಯೋತ್ಸವ ಅನ್ನುವಂತಹ ಕವನವು ನಿತ್ಯವೂ ಇರುತ್ತದೆ...ಹಾಗಾಗಿ ಅವರನ್ನು ನಿಸರ್ಗದ ಜೊತೆ ಮಾತನಾಡುವಂತಹ ಕವಿ ಅಂತಾನೂ ಕೂಡ ಕರೆಯುತ್ತಾರೆ ಅವರಿಗೆ ಇದ್ದಂತಹ ನಿಸರ್ಗದ ಮೇಲೆ ಇರುವಂತಹ ಪ್ರೀತಿ, ಒಲವು ಕನ್ನಡದ ಸಾಹಿತ್ಯ ಲೋಕವನ್ನು ಪ್ರೀತಿಸಿದವರು . ಹಾಗೆಯೇ ಕನ್ನಡ ಪ್ರಕೃತಿಯ ಮಡಿಲಲ್ಲಿ ಸಾಗುತ ಕನ್ನಡವನ್ನು ಇನ್ನಷ್ಟು ಶ್ರೀಮಂತ ಗೊಳಿಸಿದ ಅವರ ಈ ಕವನ ನಿತ್ಯೋತ್ಸವ...

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ನಮ್ಮ ಮನಸ್ಸಿನಲ್ಲಿ ಉಳಿದಂತಹ ಕ್ಷಣಗಳು ಯಾವುದು ಅಂತ ಹೇಳಿದ್ರೆ ಅದು ಅಲ್ಲಿ ಕವನದಲ್ಲಿ ಪಾತ್ರವಿಸುವಂತಹ ಎಲ್ಲ ವಿಷಯಗಳು ತುಂಬಾ ಮುಖ್ಯ ಕಾರಣ ವಹಿಸಿದೆ ಪಾತ್ರ ವಹಿಸುತ್ತದೆ ಆ ಕ್ಷಣಗಳೇ ಅಲ್ಲಿ ಮೂಡುವಂತಹ ಕನ್ನಡದ ಪ್ರೀತಿಯ ಮುಖ್ಯ ಪಾತ್ರಗಳು ವಹಿಸುತ್ತದೆ ಅಲ್ಲಿ ಮೂಡುವಂತಹ ಕಲ್ಪನೆಗಳೆ ನಮಗೆ ಆ ಓದುಗರಿಗೆ ಅಲ್ಲೇ ಒಂದು ಹೊಸ ಕಥೆಯನ್ನ ನಮ್ಮ ಮನದಲ್ಲಿ ನಿರ್ಮಾಣವಾಗುತ್ತದೆ...

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಈ ಪುಸ್ತಕವು ಕನ್ನಡಿಗರಿಗೆ ಸಾಹಿತ್ಯ ಪ್ರೇಮಿಗಳಿಗೆ ಕವಿ ಮನಸ್ಸುಗಳಿಗೆ ಕವನ ಲೇಖನ ಕಾದಂಬರಿಗಳನ್ನು ಓದುವವರಿಗೆ ಅಲ್ಲದೆ ಅದನ್ನ ತಿಳಿದುಕೊಳ್ಳುವಂತಹ ಕುತೂಹಲ ಇರುವವರೆಗೂ ಕೂಡ ತುಂಬಾ ಸೂಕ್ತವಾದಂತಹ ಒಂದು ಪುಸ್ತಕ .. ಕನ್ನಡ ಪ್ರೇಮವನ್ನು ಇನ್ನಷ್ಟು ಹೆಚ್ಚಿನ ಹೆಚ್ಚು ಮಾಡಿಕೊಳ್ಳುವುದಕ್ಕೆ ಇಂತಹ ಕವನ ಸಂಕಲನಗಳೆ ಮುಖ್ಯ ಕಾರಣವಾಗುತ್ತದೆ..

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

9
Votes
107
Views
4 Months
Since posted

Voting Closed!

Scroll to Top