Submission 1694

ಪುಸ್ತಕದ ಶೀರ್ಷಿಕೆ: ಮರಳಿ ಮಣ್ಣಿಗೆ

ಪುಸ್ತಕದ ಲೇಖಕರು: ಶಿವರಾಮ ಕಾರಂತ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅಭಿಜ್ಞಾ ಹೆಗ್ಡೆ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಶಿವರಾಮ ಕಾರಂತರು 1902 ರಲ್ಲಿ ಕೋಟದಲ್ಲಿ ಜನಿಸಿದರು. ಕನ್ನಡದ ಮಹಾನ್ ಸಾಹಿತ್ಯಿಕ,ಚಿಂತಕ ಬಹುಮುಖ ಪ್ರತಿಭೆಯ ವ್ಯಕ್ತಿತ್ವ.130 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ ಅವರ ಪ್ರಮುಖ ಕೃತಿಗಳಲ್ಲಿ ಮೂಕಜ್ಜಿಯ ಕನಸುಗಳು ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಮರಳಿ ಮಣ್ಣಿಗೆ ಕಾದಂಬರಿಯನ್ನು ನಾನು ಅದೆಷ್ಟೋ ಸಾರಿ ಓದಿಲ್ಲ , ಓದಿದೆಷ್ಟೋ ಬಾರಿ ಮೆಚ್ಚಿಲ್ಲ ಪ್ರತಿಬಾರಿ ಓದುವಾಗಲೂ ಆ ಕಾದಂಬರಿಯ ಕಥಾ ಲೋಕಕ್ಕೆ ನಾ ಹೊಸಬಳೇ. ಓದುತ್ತಾ ಹೋದಂತೆ ನನ್ನನ್ನು ಆವರಿಸಿಕೊಳ್ಳುವ ಒಂದೊಮ್ಮೆ ನಗಿಸುವ , ಅಳಿಸುವ, ಮತ್ತೊಮ್ಮೆ ಜೀವನದ ಸಾರ್ಥಕತೆಯನ್ನು ತಿಳಿಸುವ, ಮಗದೊಮ್ಮೆ ನಿರಾಶೆವಾದಿಗಳಿಗೆ ಧೈರ್ಯವನ್ನು ತುಂಬುವ ಪರಿವೆಯನ್ನು ಮೀರಿ ಸರ್ವಕಾಲಕ್ಕೂ ಸಲ್ಲುವ ಅಪರೂಪದ ಕಾದಂಬರಿ. ಕರಾವಳಿ ಪ್ರದೇಶದ ಕೋಡಿ ಗ್ರಾಮದ ಐತಾಳ ಕುಟುಂಬದ ಮೂರು ತಲೆಮಾರಿನ ಬದುಕಿನ ಕಥೆಯನ್ನು ವಿವರಿಸುತ್ತದೆ. ಜೀವನದ ಏಳು - ಬೀಳಿನ ಚಿತ್ರಣವನ್ನು ಚಿತ್ರಿಸಿ , ಓದುಗರಲ್ಲಿ ಬದುಕಿನ ಸಾರ್ಥಕತೆಯನ್ನು ಮೂಡಿಸುತ್ತದೆ. ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯು ಕನ್ನಡ ಸಾರಸ್ವತ ಲೋಕದಲ್ಲಿ ಮೆಚ್ಚುಗೆ ಪಡೆದ ಸಾಹಿತ್ಯದಾರಕಲ್ಲೊಂದು. ಈ ಕಾದಂಬರಿಯಲ್ಲಿ ಐತಾಳರು ಕರಾವಳಿ ಪ್ರದೇಶದ ಐತಾಳ ಕುಟುಂಬವನ್ನು ಕೇಂದ್ರವಾಗಿಟ್ಟುಕೊಂಡು, ಕಥೆಯನ್ನು ತುಂಬಾ ಸ್ವಾರಸ್ಯವಾಗಿ ಹೆಣೆದಿದ್ದಾರೆ. ಮೂರು ತಲೆಮಾರುಗಳ ಚಿತ್ರಣವಿದ್ದು, ಕಾಲ ಪ್ರವಾಹದಲ್ಲಿ ಸಿಲುಕಿ ಸಾಮಾಜಿಕ ಪರಿವರ್ತನೆ ಹೇಗೆ ನಡೆಯಬಹುದು ಎಂದು ದರ್ಶನವಾಗುತ್ತದೆ. ಕಾದಂಬರಿಯನ್ನು ಓದುತ್ತಾ ಹೋದರೆ ಕರಾವಳಿ ತೀರ ಪ್ರದೇಶಗಳಿಗೆ ನಮ್ಮನ್ನು ನಮಗರಿವಿಲ್ಲದೇ ಕರೆದೊಯ್ಯುತ್ತದೆ ಕೋದಂಡ ರಾಮ ಐತಾಳರ ಮಗ ರಾಮ ಐತಾಳರು ನಾರಾಯಣವಯ್ಯನವರ ಮಗಳು ಪಾರ್ವತಿಯನ್ನು ವಿವಾಹವಾಗುವುದರಿಂದ ಕಥೆಯು ಪ್ರಾರಂಭವಾಗುತ್ತದೆ. ಇವರ ಮದುವೆಯಾದ ಕೆಲವೇ ವರ್ಷಗಳಲ್ಲಿ ಇವರಿಬ್ಬರ ಬೀಗರು ಅಂದರೆ ಕೋದಂಡರಾಮ ಮತ್ತು ನಾರಾಯಣವಯ್ಯ ಕಾಲಾವಶವಾಗಿ ಬಿಡುತ್ತಾರೆ. ಮನೆಯ ಜವಾಬ್ದಾರಿ ಹಾಗೂ ಅಪ್ಪನಿಂದ ಬಂದ ಪೌರೋಹಿತ್ಯ ಕೆಲಸ ರಾವು ಐತಾಳರ ಹೆಗಲ ಮೇಲೆ ಬೀಳುತ್ತದೆ. ರಾಮ ಐತಾಳರು ಆಸೆ ಬುರುಕು ಸ್ವಭಾವದವರು. ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ರಾಮ ಐತಾಳರ ತಂಗಿ ಸರೋಸತಿ ತನ್ನ ತವರು ಮನೆಯಲ್ಲಿ ಇರುತ್ತಾಳೆ. ರಾಮ ಐತಾಳರು ಹಾಗೂ ಪಾರ್ವತಿ ದಂಪತಿಗಳಿಗೆ ಮಕ್ಕಳಿಲ್ಲದ ಕಾರಣ ಸತ್ಯಭಾಮೆ ಎನ್ನುವ ಕನ್ಯೆಯನ್ನು ವಿವಾಹ ವಾಗುತ್ತಾರೆ. ಈ ದಂಪತಿಗಳಿಗೆ ಜನಿಸಿದ ಮಗು ಲಚ್ಚಿ ಎಂಬ ಹೆಸರು ಇಡುತ್ತಾರೆ. "ಮರಳಿ ಮಣ್ಣಿಗೆ" ಕಾದಂಬರಿಯ ಪ್ರಮುಖ ಪಾತ್ರಧಾರಿ. ಇವನು ಐತಾಳ ಕುಟುಂಬಕ್ಕೆ ಕೀರ್ತಿ ತರುತ್ತಾನೋ ಅಥವಾ ಅಪಕೀರ್ತಿ ತರುತ್ತಾನೋ ಅಲ್ಲದೇ, ಅವನ ಹೆಂಡತಿಯಾಗಿ ಬರುವ ಸಂಸ್ಕೃತ ಸಂಪ್ರದಾಯದ ಹುಡುಗಿ ನಾಗವೇಣಿ ಗಂಡದ ಸ್ವಾರ್ಥ ತಮ್ಮುಪಾಡುಗಳಿಗೆ ಧೃತಿಗೆಡದೆ ನಿಂತ ಒಬ್ಬಂಟಿ ಮಹಿಳೆ. ಆ ಕಾಲಮಾನದಲ್ಲಿ ನಡೆದ ಪ್ರವಾಹ,ಬರಗಾಲ, ಊರು ಬಿಟ್ಟು ಹೋಗಿ ಪಟ್ಟಣ ಸೇರಿದ ಯುವಕರು , ಹಾಗೇ ಊರಲ್ಲಿ ಹಿಂದೆ ಬಿಟ್ಟು ಹೋದ ಮುದುಕನ ಸಂಕಟ ನೋವುಗಳು, ಕೃಷಿ ಬಗೆಗಿನ ಉದಾಸೀನ ಎಲ್ಲವೂ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಈ ಎಲ್ಲ ಪಾತ್ರಗಳ ನಡುವೆ ಕೋಟ ಸುತ್ತಲಿನ ಪರಿಸರ ವ್ಯವಸ್ಥೆಯ ಚಿತ್ರಣಗಳು ಹಾಸುಹೊಕ್ಕಾಗಿದೆ. ಸ್ತ್ರೀ ಸಂವೇದನೆ ಎತ್ತಿ ಹಿಡಿದಿದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

1
Votes
115
Views
9 Months
Since posted

Voting Closed!

Scroll to Top