Submission 1692

ಪುಸ್ತಕದ ಶೀರ್ಷಿಕೆ: ಮಹಾಶ್ವೇತೆ

ಪುಸ್ತಕದ ಲೇಖಕರು: ಸುಧಾ ಮೂರ್ತಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸಂ ಸ ನಾಯ್ಕ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

"ಮಹಾಶ್ವೇತೆ" ಕಾದಂಬರಿ ಗಮನಾರ್ಹ ಮನೋಸ್ಥೈರ್ಯದ 'ಅನುಪಮಾ' ಎಂಬ ಸುಂದರ ಹುಡುಗಿಯ ಕಥೆ. ಬಡತನದಲ್ಲಿ ಬದುಕಿ ಶ್ರೀಮಂತಿಕೆ ತಾನಾಗೇ ಬಂದಾಗ ರಾಣಿಯಂತೆ ಇದ್ದರೂ ಬದುಕು ತಂದ ಬದಲಾವಣೆಯನ್ನು ಯಶಸ್ವಿಯಾಗಿ ದಾಟಿ ನಿಂತ ಧೀರೆ ಇಲ್ಲಿನ ಕಥಾ ನಾಯಕಿ. 'ಮಹಾಶ್ವೇತ' ಸಂಸ್ಕೃತ ನಾಟಕದಲ್ಲಿ ಬರುವ ಅನುಪಮಾ ಸುಂದರಿಯಂತೆ ನಾಯಕಿ ಅನುಪಮಾಳ ಸೌಂದರ್ಯ. ಡಾಕ್ಟರ್ ಆನಂದನ ಮನ ಸೆಳೆದ ರೂಪ ಅನುಪಮಾಳ ಜೀವನದಲ್ಲಿ ಹಗಲುಗನಸೊ ಎಂಬoತೆ ಮದುವೆ ನೆಡೆದು, ಗಂಡನ ಪ್ರೀತಿಯಲ್ಲಿ ಪ್ರಪಂಚ ಮರೆಯುತ್ತಾಳೆ. ನಿಜಾವಾಗಿಯೂ ಕನಸಿನ ಮದುವೆಯೇ ಎನಿಸುವ ಆನಂದ ಅನುಪಮಾರ ಮದುವೆ ದೇಹದ ಕಾಯಿಲೆಯಿಂದ ಮುರಿದು ಹೋಗುತ್ತದೆ. ಬಿಳುಪು ರೋಗ ವೈದ್ಯನ ಸಂಸಾರದಲ್ಲೂ ಅಲ್ಲೋಲ ಕಲ್ಲೋಲವಾಗಿಸುತ್ತೆ! ಯೋಚನಾ ಹೀನ ಸಮಾಜ, ಗಂಡ, ಅತ್ತೆ ಮತ್ತು ನಾದಿನಿಯಿಂದ ಹೊರದುಡಲ್ಪಡುತ್ತಾಳೆ. ಮತ್ತದೇ ಬಡತನ, ಮಲ ತಾಯಿಯ ತಾಸ್ಸಾರ ಅನುಪಮಾಳನ್ನು ಖಿನ್ನತೆಗೆ ನೂಕುತ್ತದೆ. ಖಿನ್ನತೆಯಿಂದ ಆತ್ಮಹತ್ಯೆವರೆಗೂ ಹೋಗುವ ವನಿತೆಯ ಜೀವನ ಹೊಸ ಮಜಲು ಪಡೆಯುತ್ತದೆ. ನಿಸ್ವಾರ್ಥ ಸ್ನೇಹಿತೆಯ ಸಹಾಯದಿಂದ ಹೊಸ ಪ್ರಪಂಚದಂತಿದ್ದ ಮುಂಬೈನಲ್ಲಿ ಬದುಕು ಕಟ್ಟಿಕೊಳ್ಳುತ್ತಾಳೆ. ಅಲ್ಲಿ ಬರುವ ಎಲ್ಲಾ ಸ್ನೇಹಿತರೂ ಅವಳ ಅಚಲ ನಿರ್ಧಾರ, ಬೇರೆಯವರ ಬಗ್ಗೆ ಅವಳ ಹೃದಯ ವೈಶಾಲತೆ,ಮಾನವೀಯತಯನ್ನು ತೋರಿಸುತ್ತಾ ಹೋಗುತ್ತಾರೆ. ತಪ್ಪಿನ ಅರಿವೋ, ಕಾಲದ ಮಹಿಮೆಯೋ ಪತಿಯೇ ಪತ್ನಿಯನ್ನು ಹುಡುಕಿ ಬರುತ್ತಾನೆ. ಅಷ್ಟ್ಟೇರಲ್ಲಿ ಆಗಲೇ ಅವಳ ಎಲ್ಲಾ ದೇಹ ಸೌಂದರ್ಯವ ನೋಡದೆ, ಮಾನವೀಯತೆಗೆ ಬೆಲೆ ಕೊಡುವ ಜೀವ ಅನುಪಮಾಲೋಡನೆ ಮದುವೆ ಒಪ್ಪಿಗೆಗೆ ಕಾಯುತ್ತಲಿರುತ್ತೆ. ಮುಂದೆ ಯಾವದನ್ನು ಸ್ವೀಕಾಸಿ ಬದುಕು ಕಾಣುತ್ತಾಳೆ ಎಂಬ ಕೌತುಕ ಕಡೆಯವರೆಗೂ ಪುಸ್ತಕ ಓದುವಲ್ಲಿ ನಮ್ಮನ್ನು ನೂಕುತ್ತದೆ. ಇಂದು ಲೇಖಕಿ ಸುಧಾ ಮೂರ್ತಿ ಮಕ್ಕಳ ಪಾಲಿನ 'ಸುಧಾ ಅಜ್ಜಿ' ಆಗಿ ಪ್ರಖ್ಯಾತಿ ಹೊಂದಿದವರು, "ಮಹಾಶ್ವೇತೆ"ಯಲ್ಲಿ ಅವರ ಬರವಣಿಗೆಯ ಪ್ರೌಢತೆ, ಓದುಗರನ್ನು ಮಕ್ಕಳಂತೆ ಕಥೆ ಓದಿಸಲು ಕೂರಿಸಿಬಿಡುತ್ತದೆ. ಸಾವಿರ ಸಮಸ್ಸೆ ಇದ್ದರು ಮುಂದೆ ನೆಡೆದರೆ ಪರಿಹಾರ ಸಿಗಬಹುದೇನೋ ಅನ್ನುವಂತೆ ಲೇಖಕಿ ಕಥೆಯನ್ನು ಹೆಣೆಯುತ್ತಾ ಸಾಗುತ್ತಾರೆ. ಸುಧಾ ಮೂರ್ತಿ ಖಿನ್ನತೆಯಿಂದ ಭಿನ್ನತೆಯ ಕಡೆ ಸಾಗುವ ಸಾಮಾನ್ಯ ಹೆಣ್ಣಿನ ಅಸಾಮಾನ್ಯ ತೋಡಕನ್ನು ಬಿಚ್ಚಿಡುತ್ತಾರೆ. ಆಸೆಯೇ ಕಾಣದೆ ಬೆಳೆದ ಜೀವ ಒಂದೂ ಜೀವನದ ಸವಾಲನ್ನು ಎದುರಿಸಿದ ಬಗೆ ನಮ್ಮನ್ನು ಸೆಳೆಯುತ್ತದೆ. ಬದುಕಿನ ಸಾರ್ಥಕತೆಗೆ, ಸುಧಾ ಮೂರ್ತಿಯವರ ಸರಳ ಬರವಣಿಗೆ, ಭಾಷಾ ಬಳಸುವಿಕೆ ಎಲ್ಲರೂ ಕಾದಂಬರಿಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಸುಮಿತ್ರ, ಡಾಕ್ಟರ್ ಸತ್ಯ, ಡಾಕ್ಟರ್ ವಸಂತ್ ಈ ಮೂರು ಪಾತ್ರಗಳು 'ಅನುಪಮಾ'ಳ ವ್ಯಕ್ತಿತ್ವವನ್ನು ಕಾದಂಬರಿ ಉದ್ದಕ್ಕೂ ತೋರಿಸುತ್ತದೆ. ಅಣ್ಣನೆಂದು ಕರೆದರೂ, ಅನ್ಯತಾ ಭಾವದಿಂದ ಕಂಡ ಸ್ನೇಹಿತೆಯ ಗಂಡ ಅವಳ ನಿಲುವನ್ನೇ ಬದಲಿಸುತ್ತಾನೆ. ಮುಂದೆ ಜೀವನದಲ್ಲಿ ಸಹೋದರಿ ಎಂದ ಡಾಕ್ಟರ್ಗೆ, ನಮ್ಮ ಸಂಬಂಧ ಸ್ನೇಹವಾಗೇ ಇರಲಿ ಎಂದು ನೇರವಾಗಿ ಹೇಳುವ ಅನುಪಮಾಳ ವಿಶಿಷ್ಟತೆ ಕಾದಂಬರಿಯಲ್ಲಿ ಕಾಣುತ್ತದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಮನುಷ್ಯನ ಜೀವನದ ಬದಲಾವಣೆ ವಿಧಿಗೆ ಹೆಚ್ಚಿನ ಸಮಯವಲ್ಲ, ವಿದ್ಯೆ ಇದ್ದರೂ ವಿವೇಕವಿಲ್ಲದ ಜೀವನದಲ್ಲಿ ಮುಖ್ಯವಾಗಿ ಎಲ್ಲರೂ ಓದಲೇ ಬೇಕು. ಎಲ್ಲಾ ಕಾದಂಬರಿಯೂ ಈಗ ಬೇರೆ-ಬೇರೆ ನಿಲುವಿನವರು ಓದುದು ಕಷ್ಟ, ಆದರೆ ಯಾವುದೇ ವಯಸ್ಸಿನ ಸಹೃದಯಿ ಓದುಗನೂ ಓದಬಹುದಾದ ಪುಸ್ತಕ ಇದು.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

8
Votes
97
Views
7 Months
Since posted

Voting Closed!

Scroll to Top