ಪುಸ್ತಕದ ಶೀರ್ಷಿಕೆ: ಚಂದ್ರಗಿರಿಯ ತೀರದಲ್ಲಿ
ಪುಸ್ತಕದ ಲೇಖಕರು: ಸಾರಾ ಅಬೂಬಕ್ಕರ್
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅಂಜನಯ್ಯ ನಾಯಕ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
"ರಾಜ್ಯ ಭಾಷೆ ಧರ್ಮ ಯಾವುದೇ ಇರಲಿ ಹೆಣ್ಣಿನ ಮನದಲ್ಲಿರುವ ಭಾವನೆಯೊಂದೇ ಹಾಗೆಯೇ ಸಾರಾ ಅಬೂಬಕರ್ ಅವರು ಬರೆದ ಚಂದ್ರಗಿರಿಯ ತೀರದಲ್ಲಿ ಎಂಬ ನೈಜ ಕಥೆಯು ಒಂದು ಧರ್ಮದ ಹೆಸರಿನಲ್ಲಿ ಒಬ್ಬ ಹೆಣ್ಣು ಮಗಳ ಮಗಳ ಮೇಲೆ ನಡೆಯುವ ಮಾನಸಿಕ ಹಾಗೂ ಲೈಂಗಿಕ ದೌರ್ಜನ್ಯದ ನೋವಿ ಕಥೆಯನ್ನುದಕ್ಕಿಂತ ನಮ್ಮ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಆಚರಣೆ ಇರುವ ಧರ್ಮದ ಹೆಸರಿನಲ್ಲಿ ಹೆಣ್ಣುಮಕ್ಕಳ ಭಾವನೆಗಳ ಮೇಲೆ ನಡೆಯುತ್ತಿರುವ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಎಂದರೆ ತಪ್ಪಾಗಲಾರದು, ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಾಗಿ ಹೆಣ್ಣಿನ ಮೇಲೆ ಶೋಷಣೆ,ದೌರ್ಜನ್ಯವನ್ನು ನಡೆಸುತ್ತಿದ್ದೇವೆ ಉದಾಹರಣೆ ಹಿಂದೂ ಧರ್ಮದಲ್ಲಿ ದೇವದಾಸಿ ಪದಕ್ಕೆ ಮೂಲಕ ಮುಸ್ಲಿಂ ಧರ್ಮದಲ್ಲಿ ತಲಾ ಕೆಂಬ ಪದ್ಧತಿ ಮೂಲಕ ಹಾಗೆ ಹಲವಾರು ಜಾತಿ ಧರ್ಮಗಳಲ್ಲಿ ಮತ್ತೊಂದು ರೀತಿಯಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವನ್ನು ನಡೆಸುತ್ತಿದ್ದೇವೆ, ಎನ್ನುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ, ಅದರಂತೆ ಸಾರಾ ಅಬೂಬಕ್ಕರ ರವರು ಬರೆದ "ಚಂದ್ರಗಿರಿಯ ತೀರದಲ್ಲಿ "ಎಂಬ ಕಥೆಯು ಕೂಡ ಧರ್ಮದ ಹೆಸರಿನಲ್ಲಿ ಒಬ್ಬ ಅಮಾಯಕ ಹೆಣ್ಣು ಮಗಳ ಮೇಲೆ ನಡೆಯುವ ಮಾನಸಿಕ ಮತ್ತು ದೈಹಿಕ ದೌರ್ಜನದ ಕಥೆಯಾಗಿದೆ ಏಕತೆಯ ಪ್ರಾರಂಭವಾಗುವುದೆ ಒಂದು ಹೆಣ್ಣಿನ ಮೂಲಕ ಅವಳ ಹೆಸರು ಪಾತಿಮ ಕೇವಲ ಹನ್ನೊಂದು ವರ್ಷದವಳು ಇದ್ದಾಗಲೇ, ಸಾಂಸರಿಕ ಜೀವನದ ಬಗ್ಗೆ ಯಾವ ತಿಳುವಳಿಕೆಯು ಇಲ್ಲದ ಅವಳನ್ನು 28 ವರ್ಷದ ಮಹಮ್ಮದ್ ಖಾನ್ ಗೆ ಮದುವೆ ಮಾಡುತ್ತಾರೆ, ಹಾಗೆ ಮದುವೆ ಹೆಸರಿನಲ್ಲಿ ಅವಳ ಮೇಲೆ ಪ್ರಾರಂಭವಾಗುವ ದೌರ್ಜನ್ಯ ನಾದಿರ ಮತ್ತು ಜಮೀಲಾ ಎಂಬ ಎರಡು ಹೆಣ್ಣುಮಕ್ಕಳು ಜನಿಸಿದ ನಂತರ ಕೂಡ ತಪ್ಪುವುದಿಲ್ಲ ಅದೆಲ್ಲವನ್ನು ಸಹಿಸಿಕೊಳ್ಳುವ ಫಾತಿಮಾ ನಮ್ಮ ಮಕ್ಕಳ ಜೀವನ ನನಂತಾಗಬಾರದು ಎಂದು ತಿಳಿದು ಮಕ್ಕಳು ಸ್ವಾವಲಂಬಿಗಳಾಗಿ ಬದುಕುಲು ಜೀವನವನ್ನು ಕಲಿಸುತ್ತಾಳೆ ಹಾಗೆಯೇ ಗಂಡನ ವಿರುದ್ಧವಾಗಿ ತನ್ನ ಹಿರಿಯ ಮಗಳಾದ ನಾದಿರಳನ್ನು ಪಕ್ಕದ ಊರಿನವನಾದ ಒಳ್ಳೆಯ ಹುಡುಗನಾದ ರಶೀದ್ ಗೆ ಕೊಟ್ಟು ಮದುವೆ ಮಾಡುತ್ತಾಳೆ ಹಾಗೆ ಮದುವೆಯಾಗೋ ನಾದಿರ ತಾಯಿ ಜಯಂತೆ ಗಂಡನ ಜೊತೆಗೆ ಸುಖವಾಗಿ ಬಾಳುತ್ತಿರುತ್ತಾಳೆ, ಹೀಗೆ ಒಂದು ದಿನ ಅಳಿಯನ ಮನೆಗೆ ಬರುವ ಮಹಮದ್ ಖಾನರು ಅಳಿಯನ ಜೊತೆಗೆ ದುಡ್ಡಿನ ವಿಷಯದಲ್ಲಿ ತಕರಾರು ತೆಗೆದು ಜಗಳವಾಡಿ ಅವನ ಮೇಲಿನ ಕೋಪದ ಮೇಲೆ ಒಂದು ಮಗುವಿನ ತಾಯಿಯಾದ ನಾದಿರಾಳನ್ನ ಅವಳ ಗಂಡ ರಶೀದ್ ಇಲ್ಲದ ಸಮಯದಲ್ಲಿ ಅವಳನ್ನು ಬಲವಂತವಾಗಿ ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ, ನಂತರ ಅಳಿಯ ಮನೆಗೆ ಬಂದರು ಅವನನ್ನು ಅವಳಿಗೆ ಭೇಟಿಯಾಗದ ಹಾಗೆ ತಡೆದು ಅವಳಿಗೆ ಇಷ್ಟವಿಲ್ಲ ಎಂಬಂತೆ ಬಿಂಬಿಸಿ ಸುಳ್ಳು ಹೇಳಿ ರಶೀದ್ ಹಾಗೆ ನಾದಿರಾಳಿಗೆ ತಿಳಿಯದಂತೆ ಇಬ್ಬರಿಗೂ ಇಷ್ಟವಿದ್ದಂತೆ ಅವರಿಂದ ತಲಾಕ್ ನೀಡಿದರೆಂದು ನಂಬಿಸಿ ದುಡ್ಡಿನ ಆಸೆಗಾಗಿ ತಮ್ಮದೇ ಊರಿನ ಶ್ಶ್ರೀಮಂತ ವಯಸ್ಸಾದ ವ್ಯಕ್ತಿಯ ಜೊತೆಗೆ ನಾಧೀರಾ ಳನ್ನು ಮದುವೆ ಮಾಡಿಸಲು ಸಂಚು ಹೂಡುತ್ತಾನೆ ಅದಕ್ಕಾಗಿ ಮಗಳನ್ನ ಒಪ್ಪಿಸಲು ಹರಾಸಾಹಸ ಮಾಡಿದರು ಕೂಡ ನಾದಿರ ಗಂಡನ ಮೇಲಿನ ಪ್ರೀತಿಯನ್ನ ನೆನೆದು ಅದಕ್ಕೆ ಒಪ್ಪದೇ ಇದ್ದಾಗ ಕುಪಿತಾನಾಗುವ ತಂದೆ ಶಾಶ್ವತವಾಗಿ ಗಂಡನಿಂದ ಮಗುವಿನಿಂದ ನಾದಿರಾಳನ್ನು ದೂರ ಮಾಡುತ್ತಾನೆ, ನಂತರ ಗಂಡನ ಒಳ್ಳೆಯತನವನ್ನರೀತಿದ್ದ ನಾಧೀರ ಅವರಿವರ ಹತ್ತಿರ ಮಾತನಾಡಿ ತನ್ನ ತಂದೆ ಮೋಸ ಮಾಡಿ ತಲಾಕ್ ನೀಡಿಸಿದ ಕುರಿತು ತನ್ನ ಗಂಡನಿಗೆ ತಿಳಿಸಿ ಗಂಡನನ್ನು ಮರು ಸೇರಲು ಒಪ್ಪಿದಾಗ ಅದಕ್ಕೆ ಒಪ್ಪದ ಧರ್ಮದ ಕೆಲವು ನಿಯಮ ಮತ್ತು ಕೆಲವು ಕಟ್ಟುಪಾಡುಗಳ ಕುರಿತು ತಿಳಿಸಿ ಅವುಗಳನ್ನ ಪಾಲಿಸದೇ ಇದ್ದಲ್ಲಿ ತಲಾಕ ನೀಡಿದ ಗಂಡನನ್ನು ಸೇರಲು ಸಾಧ್ಯವೇ ಇಲ್ಲಾ ಎಂಬ ನಿಯಮವನ್ನು ಆ ಮುಗ್ದ ಹೆಣ್ಣು ಮಗಳು ನಾಧೀರಳ ಮೇಲೆ ಹೇರುತ್ತಾರೆ ಗಂಡನನ್ನು ಮತ್ತು ಮಗನನ್ನು ಮತ್ತೆ ಸೇರ ಬಯಸುವ ಮತ್ತೆ ಗಂಡನ ಪ್ರೀತಿಯನ್ನು ಸೇರಬಯಸುವ ಆ ಹೆಣ್ಣುಮಗಳು ಧರ್ಮದ ನಿಯಮದಂತೆ ತಲಾಕ್ ನೀಡಿದ ಮಹಿಳೆ ಮತ್ತೆ ಅದೇ ಗಂಡನನ್ನು ಸೇರಲು ಬೇರೊಬ್ಬರ ಜೊತೆಗೆ ಮರು ಮದುವೆಯಾಗಬೇಕು ಒಂದು ರಾತ್ರಿ ಆ ವ್ಯಕ್ತಿಯ ಜೊತೆಗೆ ಕಳೆಯಬೇಕು ಎಂಬ ನಿಯಮದಂತೆ ಒಲ್ಲದ ಮನಸ್ಸಿನಿಂದ ಒಪ್ಪಿ ಮದುವೆಯಾಗುತ್ತಾಳೆ ಆದರೆ ಸಂಜೆಯಾಗುತ್ತಲೇ ಬೇರೊಬ್ಬ ಗಂಡಸನ್ನು ಸೇರಬೇಕಾ ನನ್ನ ಪ್ರೀತಿಯ ಗಂಡನಿಗೆ ಮೋಸ ಮಾಡಬೇಕಾ ಇದು ಯಾವ ಧರ್ಮದ ಕಟ್ಟುಪಾಡುಗಳು ಎನ್ನುತ್ತಾ ತನ್ನೆಲ್ಲ ದೇಹ ಪ್ರೀತಿ ಸರ್ವಶ್ವವೆಲ್ಲವೂ ಗಂಡನಿಗೊಬ್ಬನಿಗೆ ಎಂದು ಯೋಚಿಸುತ್ತ ನಾದಿರ ಅಂತಹ ಸಂದರ್ಭ ಬಂದರೆ ನನ್ನ ಪ್ರಾಣವನ್ನು ಬಿಡುತ್ತೇನೆ ಹೊರತು ಬೇರೊಬ್ಬ ಗಂಡಸಿನ ಜೊತೆಗೆ ನನ್ನ ದೇಹವನ್ನು ಹಂಚಿಕೊಳ್ಳಲಾರೆ ಎಂಬ ದೃಢ ನಿರ್ಧಾರ ಹಾಗೆ ಗಂಡನ ಮೇಲಿನ ಪ್ರೀತಿಯಿಂದ, ನನ್ನ ಗಂಡನನ್ನು ಸೇರಲು ಕಟ್ಟುಪಾಡು ನಿಯಮಗಳನ್ನು ಮಾಡಿದ ನನ್ನ ಧರ್ಮದ ನಿಯಮವನ್ನು ಪಾಲಿಸಲು ನನ್ನ ಗಂಡನಿಗೆ ಮೋಸ ಮಾಡಲಾಗುವುದಿಲ್ಲ ಎಂದು ನಿರ್ಧರಿಸಿ ಶಾಂತವಾದ ಆ ಚಂದ್ರಗಿರಿಯ ತೀರದಲ್ಲಿನ ನದಿಗೆ ಹಾರಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ, ಇದು ಕೇವಲ ಒಂದು ಧರ್ಮದ ನಾಧೀರಾಳ ಜೀವನದ ಕಥೆಯಲ್ಲ ನಮ್ಮ ದೇಶದಲ್ಲಿ ಧರ್ಮದ ಹೆಸರಲ್ಲಿ ಶೋಷಣೆಗೆ ಒಳಗಾಗುತ್ತಿರುವ ನೂರಾರು ಹೆಣ್ಣು ಮಕ್ಕಳ ಕಥೆ 🧕🧕😔🥹
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ನೊಂದ ಹೆಣ್ಣುಮಕ್ಕಳಿಗಾಗಿ ಹಾಗೆ ಧರ್ಮದ ಹೆಸರಲ್ಲಿ ಹೆಣ್ಣನ್ನು ಶೋಷಣೆ ಮಾಡುತ್ತಿರುವ ಸಮಾಜ ಹಾಗೂ ಮೂರ್ಖ ಗಂಡಸರಿಗಾಗಿ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.