ಪುಸ್ತಕದ ಶೀರ್ಷಿಕೆ: ಕನ್ನಡದ ಕನ್ನಡಿ, ರಾಜರ್ಷಿ ನಾಲ್ವಡಿ
ಪುಸ್ತಕದ ಲೇಖಕರು: ಕನ್ನಡ ಕನ್ನಡಿ ರಾಜರ್ಷಿ ನಾಲ್ವಡಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ವರುಣ್ ಪಿ ಸಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಕರುನಾಡ ಕನ್ನಡಿ ರಾಜರ್ಷಿ ನಾಲ್ವಡಿ. ನನಗೆ ಸ್ಫೂರ್ತಿ ನಮ್ಮ ಮಹಾರಾಜರು ಮರೆಯೋದುಂಟೆ ಮೈಸೂರ ದೊರೆಯ ಶ್ರೀ ನಾಲ್ವಡಿ ಕೃಷ್ಣ ರಾಜ ಒಡೆಯ. ಮಹಾರಾಜ ಪ್ರತ್ಯಕ್ಷ ದೇವತಾ ನಮ್ಮ ಕರುನಾಡ ನೆಲದಲ್ಲಿ ನಿಸ್ವಾರ್ಥ ಜೀವಗಳು ಹೆಚ್ಚು ರಾಜರ ಆಳ್ವಿಕೆ ಕಾಲದಲ್ಲಿ ಅಷ್ಟೇ, ಅದು ಕಲಿಯುಗದ ಈ ದಿನಮಾನದಲ್ಲಿ ನಮ್ಮಗೆ ಸಿಕ್ಕ ದೇವತಾ ಮನುಷ್ಯ ನಮ್ಮ ಕಥಾನಾಯಕ ಶ್ರೀ ಮನ್ ಮಹಾರಾಜಾ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು, ನಮ್ಮ ಮನದಲ್ಲಿ ಭಾವನೆಯಾಗಿ ಉಳಿದ ಮಹಾ ಚೇತನ ನಾಲ್ವಡಿ ಪ್ರಭುಗಳು. ರಾಜ ನೀತಿ, ಪ್ರಜಾ ನಿಷ್ಠೆ, ಮಾದರಿ ರಾಜ್ಯದ ಕನಸು ಒತ್ತು ಅದನ್ನು ಪರಿಪೂರ್ಣಗೊಳಿಸಿದ ದೇವತಾ ಮನುಷ್ಯ, ನನ್ನ ಮನ್ಸಿಗೆ ನನ್ನ ಒಳಗೆ ಮಹಾರಾಜರ ಪ್ರವೇಶ ಈ ಪುಸ್ತಕ ನನ್ನ ಕೈ ಸೇರಿದಾಗಿಂದ ಶುರುವಾಹಿತಿ ನನ್ನ ಜೀವನ ಶೈಲಿ ಬದಲಾಹಿತು, ಅಂದ್ರೆ ಮಹಾರಾಜಾ ಅನುಸರಿಸೋದು ಕಷ್ಟ, ಆದ್ರೆ ಮನ್ಸಿಗೆ ಹಚ್ಚಿಕೊಂಡು ಪ್ರೀತಿಸಿದರೆ ಅವರಲ್ಲೊಂದು ಅಂಶ ವನ್ನಾದರೂ ಪಾಲಿಸಬವುದು. ಮಹಾರಾಜರಿಂದ ನಾನು ಕಲಿತಿದ್ದು ನಮ್ಮ ಮನಸಿಗ್ಗೆ ಹತ್ತಿರ ಆದವರಿಗೆ ಹೆಂಗೆ ನೆಡ್ಕೋ ಬೇಕು ಹಾಗೂ ನಮ್ಮ ದಿನಚರಿ ಹೇಗಿರಬೇಕು ಎಂದು ಮಹಾರಾಜರ ದಿನಚರಿಯನ್ನು ಪಾಲಿಸಿದರೆ ಅತ್ಯುತ್ತಮ ಮಾದರಿ ವ್ಯಕ್ತಿ ಆಗೋದು ಖಂಡಿತ ನಿದಾನವಾಗಿ ನಾನು ಪಾಲಿಸುತ್ತಿದ್ದೇನೆ, ಮಹಾರಾಜರು ಪ್ರಜೆ ಗಳಿಗೆ ನೀಡಿದ ಗೌರವ ಗಳನ್ನು ಪ್ರಜೆಗಳ ಜೊತೆ ಪ್ರಜೆಯಾಗಿ ನೆಡೆದು ಬೆರೆತು ಅವರ ಕಷ್ಟಗಳನ್ನು ಅರಿತು ಪರಿಹರಿಸುವ ಮನಸು ನನಗೆ ಸ್ಫೂರ್ತಿ, ಒಬ್ಬ ಮನುಷ್ಯ ತನ್ನ ಚಿಕ್ಕ ವಯಸಿಂದ ಕಷ್ಟಗಳಲ್ಲಿ ಬೇರೆತರೆ ಈಗೆ ಬೆಂದು ಬೆಂದು ಗಟ್ಟಿಯಾಗಿ ಸದೃಢರಾಗೋದು ಖಂಡಿತ ಆಗ ಮಹಾರಾಜರು ಇದನ್ನೆಲಾ ನಿಬಾಹಿಸಿದ್ದು ನೋಡಿ ನಾನು ನಮ್ಗೆ ಬಂದ ಕಷ್ಟಗಳೆಲ್ಲ ಏನೇನು ಅಲ್ಲ ಆಗ ಮನಸು ದೃಢ ವಾಹಿತು ಎಷ್ಟೇ ಕಷ್ಟ ಬಂದ್ರು ಸದೃಢ ವಾಗಿರಬೇಕು ಅಂತ ಕಲಿತೆ ನಿಸ್ವಾರ್ಥ ಮನ್ಸಿರಬೇಕು ಅಂತ ಏಕೆ ಹೇಳಿತೀನಿ ಅಂದ್ರೆ ಮಹಾರಾಜರ ಮನಸು ತುಂಬಾ ವಿಶಾಲವಾದ ಮನಸು ಏಕೆಂದ್ರೆ ಅವರು ಎಲ್ಲದಕ್ಕೂ ಪ್ರೋತ್ಸಹ ಕೊಡುತಿದ್ದರು ಕಲೆ, ಸಾಹಿತ್ಯ, ಸಂಸ್ಕೃತಿ, ಎಲ್ಲದಕ್ಕೂ ಅದುನ್ನ ನೋಡಿ ಮನಸ್ಸು ತುಂಬಿ ಬರುತ್ತೆ,ಪ್ರಜಾ ಪ್ರತಿನಿಧಿ ಸಭೆ ವಿಷಯಕ್ಕೆ ಬಂದರೆ ನಮ್ಮ ಮಹಾರಾಜಾ ಕಲ್ಪನೆ ಹಾಗೂ ಪ್ರಜೆಗಳ ಹಿತದೃಷ್ಟಿ ಇಂದ ಪ್ರಜೆಗಳಿಂದ ಬಂದ ಕಷ್ಟಗಳ ಕೇಳಿ ಅವುಗಳಿಗೆ ಪರಿಹಾರ ನೀಡುವ ಪರಿ ಅಂತೂ ಅದ್ಭುತ, ಮಹಾರಾಜರ ವಿಶಾಲವಾದ ಮನಸು ಅಭಿವೃದ್ಧಿ ಗೆಂದೆ ಅತೋರಿಯುತಿತ್ತು ಅದೆ ನಾವು ಕನ್ನಡಿಗರು ಹೆಮ್ಮೆಯ ಪಡುವಂತ ಪ್ರಪಂಚಕೆ ಕೆಲವು ಮೊದಲುಗಳನ್ನ ಅನ್ವೇಶಿಸಿ ಮೊದಲುಗಳನ್ನ ಕೊಡುಗೆಯಾಗಿ ನೀಡಿದ ಮಹಾ ಪುರುಷ ನಮ್ಮ ದೇವತಾ ಮನುಷ್ಯ, ಅಭಿವೃದ್ಧಿಯ ಹರಿಕಾರ ನಮ್ಮ ಮನದ ಒಡೆಯ ನಾಲ್ವಡಿ ಪ್ರಭುಗಳು ಇಲ್ಲಿ ಮಹಾರಾಜಾ ನೀಡಿದ ಕೊಡುಗೆಗಳನ್ನು ವಿವರಿಸುತ್ತಾ ಹೋದರೆ ಸಾಲಲ್ಲ ಪದಗಳು ಒಟ್ಟಾರೆ ಮಹಾರಾಜರು ವಿಮರ್ಶೆಗೆ ಜೀವಮಾನ ಸಾಲಲ್ಲ, ಕೊಂಡಾಡೋಕೆ ಪದಗಳ ಕೊರತೆ ಕೂಡ ಬರಬಹುದು, ನನ್ನ ಪ್ರಕಾರ ನನ್ನ ಹೀರೋ ಮಹಾರಾಜರು ನನ್ನ ಇನ್ಸ್ಪಿರೇಷನ್, ರೋಲ್ ಮಾಡೆಲ್ ನಮ್ಮ ಮಹಾರಾಜರು, ಈಗೆ ನಾನು ನಾಯಕತ್ವ ಗುಣ, ಯಾರಿಗೂ ಮೋಸ ಮಾಡಬಾರದು ಹಾಗೂ ಸಮಾಜದಲ್ಲಿ ಮಾದರಿ ವ್ಯಕ್ತಿ ಯಗಲು ಮಹಾರಾಜರಿಂದ ಕೆಲವು ಸೂತ್ರ ಗಳನ್ನು ಬಳಸಿದರೆ ಸಾಧ್ಯ ವೆಂಬುದನ್ನು ಈ ಪುಸ್ತಕ ದಿಂದ ತಿಳಿದೆ. ಮತ್ತೆ ಒಬ್ಬ ತಾಯಿಯ ಮಾರ್ಗದರ್ಶನ ಮಕ್ಕಳಿಗಿದ್ದಾರೆ ಅದು ಅವರನ್ನು ಎಲ್ಲಿನವರೆಗೆ ಬೆಳಸುತ್ತದೆ ಎಂಬುದನ್ನು ಮಾತೆ ಮಹಾರಾಣಿ ಮಹಾರಾಜರ ತಾಯಿ ಶ್ರೀ ವಾಣಿವಿಲಾಸ ಅಮ್ಮನವರ ಚರಿತ್ರೆ ಇಂದ ನೋಡಿದೆ ಕಂಡಿತಾ ಈ ಪುಸ್ತಕ ಇದು ಕೇವಲ ಚರಿತ್ರೆಯಲ್ಲ, ಚರಿತ್ರೆ ಸೃಷ್ಟಿಸುವವರಿಗಾಗಿ... ಕಂಡಿತಾ ನಾನು ನನ್ನ ಬದುಕನ್ನು ಹಸನು ಮಾಡಿಕೊಳ್ಳಲು ಹಾಗೂ ನನ್ನ ಗುರಿ ತಲುಪಲು ಒಂದು ಸ್ಪೂತಿಯ ಅದ್ಯಾಯ ಈ ಒಂದು ಪುಸ್ತಕ, ಕನ್ನಡದ ಕನ್ನಡಿ ರಾಜರ್ಷಿ ನಾಲ್ವಡಿ, ದೈವಾಂಶ ಸಂಭೂತ ಮಹಾರಾಜಾರಿಗೆ ನನ್ನ ಶತಕೋಟಿ ನಮನಗಳು. ಈ ಪುಸ್ತಕ ವನ್ನು ಬರೆದು ನಮ್ಮಗೆಲ್ಲ ಮಹಾರಾಜರ ವಿಶೇಷ ವನ್ನು ತಿಳಿಸಿದ ಕನ್ನಡದ ಕುವರ ವೈದ್ಯ ಶ್ರೀ ಗಣೇಶ್ ಪ್ರಸಾದ್ ಬಿ ಅವರಿಗೂ ಅಭಿನಂದನೆಗಳು.... ✨
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ನಮ್ಮ ಮನಸಿನಲ್ಲಿ ಮರೆಯಲಾಗದ ಕ್ಷಣಗಳನ್ನು ಈ ಪುಸ್ತಕದಲ್ಲಿ ಹೇಳುವುದು ಕಷ್ಟ ಏಕೆಂದರು ಪ್ರತಿಯೊಂದು ಅದ್ಭುತ ಕ್ಷಣಗಳು ಇದರಲ್ಲಿದೆ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಸಾಧನೆಯ ಶಿಖರವನ್ನೆರಲು ತಯಾರಾಗಿರುವ ಎಲ್ಲಾ ಯುವಕರಿಗೆ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.