ಪುಸ್ತಕದ ಶೀರ್ಷಿಕೆ: ಗೃಹಭಂಗ
ಪುಸ್ತಕದ ಲೇಖಕರು: ಎಸ್ ಎಲ್ ಭೈರಪ್ಪ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಲಕ್ಷ್ಮಿ ಗೌಡ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಒಂದು ಕಥೆ ಎಷ್ಟು ಬಾರಿ ಕಣ್ಣಲ್ಲಿ ನೀರು ತರಿಸಬಹುದು.? ಒಂದು ಕಥೆಯ ಪಾತ್ರಗಳು ಸನ್ನಿವೇಶಗಳು ಎಷ್ಟರಮಟ್ಟಿಗೆ ಮನ ಕಲಕಬಹುದು.? ಎಂಬ ಪ್ರಶ್ನೆಗಳಿಗೆ ಒಂದೊಂದು ಕಾದಂಬರಿ, ಒಂದೊಂದು ಉತ್ತರ ಕೊಡುತ್ತದೆ. ಆದರೆ, ಭೈರಪ್ಪನವರ 'ಗೃಹಭಂಗ ಸದಾ ನೆನಪಿನಲ್ಲಿ ಉಳಿಯುವಂತಹ ಕಥೆ.. ಸ್ವತಂತ್ರ ಪೂರ್ವದಲ್ಲಿ ತುಮಕೂರು, ರಾಮಸಂದ್ರ ಆಸುಪಾಸಿನ ಹಳ್ಳಿಗಳಲ್ಲಿನ ಜನರ ಜೀವನವನ್ನು ಮನಕಲಕುವಂತೆ ಕಟ್ಟಿಕೊಡುವ ಕಥೆ. ಗಟ್ಟಿಗಿತ್ತಿ ನಂಜಮ್ಮ, ಬಜಾರಿ ಗಂಗಮ್ಮ ಹುಲಿಯಂತಹ ಗುಂಡಿಗೆಯ ಕಂಠಿ ಜೋಯಿಸರು, ಹೊಟ್ಟೆಬಾಕ, ಸೋಮಾರಿ ಚೆನ್ನಿಗರಾಯ ಮತ್ತು ಅಪ್ಪಣ್ಣದೇವರಂತಹ ಮಾದೇವಯ್ಯನವರು, ನರಸಿ, ದುರಂತ ಅಂತ್ಯ ಕಂಡ ಪಾರ್ವತಿ ಹಾಗು ರಾಮಣ್ಣ, ತುಂಟ ವಿಶ್ವ, ಅಮ್ಮನಂತಹ ಅಕಮ್ಮ. ಹೀಗೆ ಒಂದೊಂದು ಪಾತ್ರವೂ ಓದುಗರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತುಬಿಡುತ್ತದೆ. ಈ ಕಥೆಗೆ ಪ್ಲೇಗ್ ರೋಗವೇ ಒಂದು ವಿಲನ್ ಇದ್ದಂತೆ, ಗಟ್ಟಿಗಿತ್ತಿ ನಂಜಮ್ಮ ಕೆಲಸಕ್ಕೆ ಬಾರದ ಗಂಡನೊಡನೆ ಜೀವೆಸಲು ಆಗದೆ, ಮುತ್ತಗದ ಎಲೆಗಳನ್ನು ಮಾರಿತನ್ನ ಮಕ್ಕಳನ್ನು ಸಲಹುತ್ತಾಳೆ. ನಂತರ ಮಗಳು ಪಾರ್ವತಿಯ ಮದುವೆ ಮಾಡಿಸಿ ಮುಂದೊಂದು ದಿನ ಆ ಮಗಳು ಹಾಗೆ ಮಗ ರಾಮಣ್ಣ ಇಬ್ಬರೂ ಒಂದೇ ದಿನ ಪ್ಲೇಗ್ಗ್ಗೆ ತುತ್ತಾಗುವ ಸಂದರ್ಭವನ್ನು ಓದುವಾಗ ಆಗುವ ನೋವನ್ನು ಓದುಗರೂ ಅನುಭವಿಸುವುದು ಖಂಡಿತ. ಈ ಕಥೆಯಲ್ಲಿ ಬರುವ ಕೆಲವು ಘಟನೆಗಳು, ಪಾತ್ರಗಳ ಮೇಲೆ ಸಿಟ್ಟು ಬರುವಂತೆ ಮಾಡುತ್ತವೆ. - * ಅಣ್ಣಾ ಜೋಯಿಸರು, ಧರ್ಮಪಾಲನೆ ಹೆಸರಿನಲ್ಲಿ ನಂಬಿಸಿ ಜನರಿಂದ ದುಡ್ಡು ಕೇಳುವುದು ಮತ್ತೊಬ್ಬರ ಸಂಸಾರ ಹಾಳು ಮಾಡುವುದು. * ರೇವಣ ಶೆಟ್ಟಿ, ಕಾಸಿಂಬಡ್ಡಿಯ ಬಳಿ ಹಣ ಪಡೆದು ತನ್ನ ಮಗಳನ್ನು ಮಾರಿ ಆಕೆ ಗರ್ಭಧರಿಸಿ ಸಾವನ್ನಪ್ಪುವ ಸಂದರ್ಭವನ್ನು ಊಹಿಸಲು ಅಸಾಧ್ಯ.. * ದಿನಸಿ ಸಾಮಾನಿನ ವಿಷಯಗಳಿಗಾಗಿ ಊರಿನ ಜಾತಿ-ಜಾತಿಗಳ ನಡುವೆ ಸಂಘರ್ಷ ಏರ್ಪಡಿಸುವ ಸಂದರ್ಭಗಳು. * ಚೆನ್ನಿಗರಾಯ, ತನ್ನ ಮಗಳು ಪಾರ್ವತಿಯ ಮದುವೆಯಲ್ಲಿ ಮಾಡುವ ವರ್ತನೆ ಸಹೃದಯದಲ್ಲಿ ಹೇಳತೀರದ ಕೋಪವನ್ನು ಉಂಟುಮಾಡುತ್ತದೆ. ಯಾವುದೇ ಕಷ್ಟಪಡದೇ ಜೀವನವನ್ನು ನಡೆಸಲಾಗದು, ಕಷ್ಟ ಬಂದಾಗ ಹೇಡಿಯಂತೆ ಹೆದರದೆ, ಏನೇ ಬಂದರೂ ಅದನ್ನು ಧೈರ್ಯವಾಗಿ ಎದುರಿಸಿ ನಿಂತು ಗೆಲ್ಲಬೇಕೆಂಬುದನ್ನು ಈ ಕಥೆಯ ಕೆಲವು ಪಾತ್ರಗಳು ನಮಗೆ ತಿಳಿಸುತ್ತವೆ. ಒಟ್ಟಾರೆಯಾಗಿ ಭೈರಪ್ಪನವರ ಗೃಹಭಂಗ ಓದುಗರ ಮನಸ್ಸಿನಲ್ಲಿ ಸದಾಕಾಲ ಉಳಿಯುವ ಕಥೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.