Submission 1931

ಪುಸ್ತಕದ ಶೀರ್ಷಿಕೆ: ಸಿರಿವಂತಿಕೆಗೆ ಸರಳ ಸೂತ್ರಗಳು

ಪುಸ್ತಕದ ಲೇಖಕರು: ರಂಗಸ್ವಾಮಿ ಮೂಕನಹಳ್ಳಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶ್ರಾವಂತಿ ಸಿರಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಸಿರಿವಂತಿಕೆಗೆ ಸರಳ ಸೂತ್ರಗಳು - ರಂಗಸ್ವಾಮಿ ಮೂಕನಹಳ್ಳಿ ಮೊದಲಿಗೆ ಈ ಪುಸ್ತಕವನ್ನು ಬರೆದಿರುವ ಲೇಖಕರಾದ ರಂಗಸ್ವಾಮಿ ಮೂಕನಹಳ್ಳಿ ಸರ್ ಅವರಿಗೆ ಧನ್ಯವಾದ. ಸಾಮಾನ್ಯವಾಗಿ ನಾವು ಓದುವ ಪುಸ್ತಕವು, ನಮ್ಮನ್ನು ಓದಿಸಿಕೊಂಡು ಹೋಗಲಿಕ್ಕೆ, ಬರವಣಿಗೆಯ ಸರಳತೆ ಮತ್ತದರ ಶೈಲಿ ಮುಖ್ಯವಾಗುತ್ತದೆ ಎಂದು ನಾನು ಭಾವಿಸುವೆ. ಅಂತಹ ಸರಳ ವಾಕ್ಯ ಹಾಗೂ ಪ್ರಬಲ ಬರವಣಿಗೆ ಇದರಲ್ಲುಂಟು; ಅದರಲ್ಲೂ 'ಹಣಕಾಸು' ಎಂಬ ನಿರ್ಧಿಷ್ಟ ವಿಷಯದ ಕುರಿತಾಗಿ ಪುಸ್ತಕದಲ್ಲಿ ಸುಲಲಿತವಾಗಿ ಅರ್ಥೈಸಿಕೊಟ್ಟಿದ್ದಾರೆ ಲೇಖಕರು. ಈ ಬಗ್ಗೆ ನಾನು ವಿಮರ್ಶಿಸುವಷ್ಟು ಪಾಂಡಿತ್ಯ ಹೊಂದಿಲ್ಲವಾದರೂ, ಈ ಪುಸ್ತಕದ ದಿವ್ಯತೆ ಕುರಿತಾಗಿ ಹೇಳಬಯಸುತ್ತೇನೆ. ಈ ಪುಸ್ತಕವು ಎಲ್ಲರಿಗೂ ಸಹಾಯ ಮಾಡುತ್ತದೆ. ದುಡಿಮೆ ಹಾಗೂ ಹಣ ಸಂಪಾದನೆಯ ಬಗ್ಗೆ ಇರುವ ಪೂರ್ವಾಗ್ರಹವನ್ನು ತೊಡೆದು ಹಾಕುತ್ತದೆ. ಶ್ರೀಮಂತರಾಗಲು ಆಸೆ ಯಾರಿಗಿರುವುದಿಲ್ಲ? ಆದರೆ, ಕನಸು ಕಾಣುವುದಷ್ಟೇ ಅಲ್ಲ, ಅದನ್ನು ನನಸಾಗಿಸಲು ನಮ್ಮ ಬಗ್ಗೆ ನಮಗೆ ಅಚಲ ನಂಬಿಕೆ ಹಾಗೂ ದೃಢತೆ ಇರಬೇಕಾಗುತ್ತದೆ. ಸಿರಿವಂತಿಕೆ ಎನ್ನುವುದು ಬದುಕಿನ ಸರಳತೆಯಲ್ಲಿದೆ. ನಾವು ನಮ್ಮ ಪರಿಶ್ರಮದಿಂದ ಕೆಲಸ ಮಾಡುವುದು, ನಿರಂತರ ಕಲಿಕೆ, ಧನ ಸಂಪತ್ತಿನ ಬಗ್ಗೆ ಹೊಂದಿರುವ ಮನಸ್ಥಿತಿ ಹಾಗೂ ಮನೋದೃಷ್ಟಿಯನ್ನು ವೃದ್ಧಿಸಿಕೊಳ್ಳದ ಹೊರತು ಸಿರಿತನ ದಕ್ಕುವುದಿಲ್ಲ. ಇದನ್ನು ಬಲಪಡಿಸಿಕೊಳ್ಳುವುದು ಹಾಗೂ ಅರ್ಥೈಸಿಕೊಳ್ಳುವ ಬಗ್ಗೆ ಪುಸ್ತಕವು ತಿಳಿಯಪಡಿಸುತ್ತದೆ. ಎಲ್ಲಕ್ಕೂ ಮೊದಲು ನಾವ್ಯಾರು ಎಂಬುದನ್ನು ನಿರ್ಧರಿಸಬೇಕು, ನಮ್ಮ ಬಗ್ಗೆ ನಿಖರವಾದ ನಿಲುವನ್ನು ಅರಿತಿರಬೇಕು. ಅನಂತರ ಉದ್ಯಮ ಕಟ್ಟುವುದು, ಹಣಗಳಿಕೆ, ಹೂಡಿಕೆ ಪ್ಲಾನ್ ಮಾಡುವುದು ಸೂಕ್ತ ಎಂದಿದ್ದಾರೆ. ಹಣಕಾಸಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಮಾಹಿತಿಯನ್ನು ಸರಳವಾಗಿ ವಿವರಿಸಿದ್ದಾರೆ. ಮುಖ್ಯವಾಗಿ ನಾವು ಶೈಕ್ಷಣಿಕ ಪಠ್ಯಗಳಲ್ಲಿ ಕಲಿತ financial literacy ಬೇರೆ. Actual financial literacy ಅನ್ನುವ ಪರಿಕಲ್ಪನೆ financial freedom ಅಂದರೆ ಹಣಕಾಸಿನ ಸಾಕ್ಷರತೆಯ ಮುಕ್ತತೆಯಲ್ಲಿದೆ. ಏಕೆಂದರೆ, ಎಲ್ಲಕ್ಕೂ ಮೊದಲುಗೊಳ್ಳುವುದು ಮುಖ್ಯವಾಗಿರುತ್ತದೆ. ಒಂದು ಸಂಸ್ಥೆ ಕಟ್ಟಲು, ಒಂದು ಸಂಸ್ಥೆಯಲ್ಲಿ ಹೂಡಿಕೆ ಮಾಡಲು; ಹೀಗೆ ಇಲ್ಲಿ ನಾವು ಆರಂಭಿಕ ತಯಾರಿಗೆ ಉತ್ತಮ ಮಾರ್ಗವನ್ನು ಕಂಡುಕೊಳ್ಳಬೇಕಿದೆ. ಇಲ್ಲಿ ಮನುಷ್ಯನ ಬದುಕಿಗೆ ಸಾಮ್ಯವಾಗಿ ಹಣದ ಜೊತೆಗೆ, ನಮ್ಮ ಬುದ್ಧಿ, ಜೀವನಶೈಲಿ, ಯೋಚನಾ ಲಹರಿ, ಚಿಂತನೆಗಳಂತ ವಿಚಾರಗಳನ್ನು ಸಮೀಕರಿಸಿ ಹಣಕಾಸು ವಿಷಯದ ಬಗ್ಗೆ ಮಂಡಿಸುತ್ತಾರೆ. ರಿಸ್ಕ್ ಫ್ಯಾಕ್ಟರ್ಸ್, ಸಾಲದ ಹೊಣೆಗಾರಿಕೆ, ಆದಾಯ ಮೂಲಗಳು, ಹಣದುಬ್ಬರದ ಪರಿಣಾಮ, ಮಾರುಕಟ್ಟೆ ಮಾರ್ಗಗಳು ಮತ್ತದಕ್ಕೆ ಸೂಕ್ತವಾಗುವಂತೆ ಉದಾಹರಣೆ ಸಹಿತವಾಗಿ ತಿಳಿಸಿದ್ದಾರೆ. ವ್ಯಕ್ತಿಯಾಗಿ ನಮಗೆ ಒಳ್ಳೆಯ ಜೀವನ ನಡೆಸಲು ಹಣದ ಅವಶ್ಯಕತೆ ಹಾಗೂ ಅದನ್ನು ನಿರ್ವಹಿಸಿಕೊಳ್ಳುವ ಜಾಣ್ಮೆಯನ್ನು ಬಹಳ ಉಪಯುಕ್ತವಾದ ರೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ. ಇದರೊಟ್ಟಿಗೆ, ಅನೇಕ ಕಷ್ಟಕೋಟಲೆಗಳನ್ನು ದಾಟಿ ಜೀವನದಲ್ಲಿ ಯಶಸ್ಸು ಕಂಡ ಸಿರಿವಂತರ ದಾರ್ಶನಿಕ ಉವಾಚಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ನನಗೆ ಇಲ್ಲಿ ಪ್ರಿಯವಾದ ಸಾಲುಗಳೆಂದರೆ - “ಯಾವುದನ್ನೂ ನಕಲು ಮಾಡುವುದು ಬೇಡ. ಅದೆಷ್ಟೇ ಲಾಭದಾಯಕವೇ ಆದರೂ, ಸ್ವಂತಿಕೆ ಮೆರೆಯೋಣ, ಪ್ರೇರಣೆ ಹೊಂದಿ ಸ್ಥಿತಿವಂತರಾಗೋಣ, ಕೆಲಸ ಮಾಡುತ್ತಿರಬೇಕು” ಎನ್ನುವುದು. ಹಣವಿಲ್ಲ ಎನ್ನುವ ಒಣ ಗೋಳಾಟ, ಇನ್ನೊಬ್ಬರ ಸಿರಿವಂತಿಕೆ ನೋಡಿ ಅಸೂಯೆ ಪಡುವುದಾಗಲಿ, ಹೋಲಿಕೆಗಳು ಸಲ್ಲದು; ಸಮಯದ ಪ್ರಾಮುಖ್ಯತೆ ಎಷ್ಟಿದೆ ಎನ್ನುವ ವಿಚಾರದಿಂದ ಹಿಡಿದು ಇವತ್ತಿನ ಜಾಗತಿಕ ಸ್ಥಿತ್ಯಂತರದ ಕುರಿತಾಗಿ ಲೇಖಕರು ವ್ಯಕ್ತಪಡಿಸಿದ ಅಭಿಪ್ರಾಯ, ಸಲಹೆಗಳು ಕಣ್ತೆರೆಸುವಂಥವು. ಇಂತಹ ಪುಸ್ತಕವನ್ನು ಓದುತ್ತಾ, ನಾನು ಕೊಂಡುಕೊಂಡ ಈ ಪುಸ್ತಕವು ನನಗೆ ಒಂದು opportunity cost ಅನ್ನುವ ಭಾವನೆ ಹುಟ್ಟಿಸಿತು. ಇದರಲ್ಲಿ, ಅಸೆಟ್ ಮತ್ತು ಲಿಯಾಬಿಲಿಟಿ ಕ್ಲಾಸಿಫಿಕೇಶನ್ ಬಗ್ಗೆ ಹೇಳುವಾಗ ಯಾವುದು ನಮ್ಮ ಖುಷಿಗೆ ಕಾರಣವಾಗುತ್ತದೆ ಅದು ಅಸೆಟ್; ಯಾವುದು ನಮಗೆ ನೋವುಂಟು ಮಾಡುತ್ತದೋ ಅದೇ ಲಿಯಾಬಿಲಿಟಿ ಎನ್ನುತ್ತಾರೆ. ಇದೊಂದು ಉತ್ತಮ ನಿದರ್ಶನ ನಮ್ಮೆಲ್ಲರ ಜೀವನ ಕ್ಷಣಿಕ ಜೀವನ ಎನ್ನಲಿಕ್ಕೆ!. ನಿಜ, ನಮನ್ನು ಹಗುರಾಗಿಸುವ ಹಣ ನಮ್ಮ ಆಸ್ತಿ, ಹೊರೆಯಾಗಿಸುವ ಹಣ ನಮ್ಮ ಸಾಲ. ಹಣವನ್ನು ಮಾನಸಿಕ ತೂಗಳತೆಯಾಗಿ ಇಲ್ಲಿ ಹೇಳಲಾಗಿದೆ. ಈವರೆಗೂ ಬದಲಾಗಿರುವ ಕಾಲಾವಧಿಗೆ ತಕ್ಕಂತೆ ಹಣದ ವಿಷಯದಲ್ಲಿ ನಮ್ಮ ಆಲೋಚನಾ ಕ್ರಮ, ಉಳಿತಾಯ, ಹೂಡಿಕೆ, ಖರ್ಚು, ಸಾಲ, ಇವೆಲ್ಲದರ ಕುರಿತು ಇರುವ ವ್ಯಾಖ್ಯಾನಗಳನ್ನು ಬದಲಿಸಿಕೊಳ್ಳುವ ಸರಳ ಸೂತ್ರಗಳು ಇದಾಗಿವೆ. ನಿಜವಾಗಿಯೂ ಓದುಗರಿಗೆ ಹಣಕಾಸು ನಿರ್ವಹಣೆಗಷ್ಟೇ ಅಲ್ಲದೇ, ಅತ್ಯವಶ್ಯಕ ಜೀವನ ಮೌಲ್ಯಗಳನ್ನು ಅರಿಯುವಲ್ಲಿ ಅನುಕೂಲ ಮಾಡಿಕೊಡುವ ಒಳ್ಳೆಯ ಪುಸ್ತಕವಿದಾಗಿದೆ. ಸದಾ motivation ಗಾಗಿ ಪರಿತಪಿಸದೆ, ಇಂತಹ ಪುಸ್ತಕ ಓದು, ಓದಿದ ನಂತರದಲ್ಲಿ ಅದರಲ್ಲಿನ ಹೊಸ ವಿಧಾನಗಳನ್ನು ಅಳವಡಿಸಿಕೊಂಡರೆ, ದಿಟ್ಟ ಮನಸ್ಸು ಮಾಡಿದರೆ ಖಂಡಿತ ಎಲ್ಲವೂ ಸಾಧ್ಯವೆನ್ನುವ ಪಾಠ ಕಲಿಸಿಕೊಡುತ್ತದೆ ಈ ಪುಸ್ತಕ. ಇದನ್ನು ಮತ್ತೆ ಮತ್ತೆ ಓದಿದಷ್ಟೂ ಲಾಭಾಂಶ ನಮ್ಮ ಚೈತನ್ಯದ ಅಂತರಾತ್ಮಕ್ಕೇ!.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಕೆಲಸವನ್ನು ಮಾಡುತ್ತಿರುವವರು, ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳಿಗೆ,

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

1
Votes
166
Views
7 Months
Since posted

Voting Closed!

Scroll to Top