Submission 1879

ಪುಸ್ತಕದ ಶೀರ್ಷಿಕೆ: ವಿರಾಟ್ ರೂಪದ ಭಾರತೀಯ ಮಿಶನರಿ ಸಂಸ್ಥೆ

ಪುಸ್ತಕದ ಲೇಖಕರು: ಮಡಿಯಾಲ ನಾರಯಣ ಭಟ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಇರಸಂಗಪ್ಪ ಸಾಯಬಣ್ಣ ಬಡಿಗೇರ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಪುಸ್ತಕದ ಸಾರಾಂಶ: ಸ್ವತಂತ್ರ ಭಾರತದ ಭದ್ರತೆಗೆ ,ಐಕ್ಯತೆಗೆ,ಭವ್ಯತೆಗೆ ಮತ್ತು ಗಡಿ ರಕ್ಷಣೆಗೆ ಯಾವರೀತಿಯಾಗಿ ಯುವಪಿಳಿಗೆಯು ರಾಷ್ತ್ರಪ್ರೇಮವನ್ನು ಬೆಳೆಸಿಕೊಂಡು ದೇಶದ ಉಳಿವಿಗಾಗಿ ದೇಶದ ಪ್ರಗತಿಗಾಗಿ ಶ್ರಮಿಸಬೇಕೆಂಬವುದನ್ನು ಮತ್ತು “ವಿರಾಟ್ ರೂಪದ ಭಾರತೀಯ ಮಿಶನರಿ ಸಂಸ್ಥೆ “ಯ ಸ್ಥಾಪನೆಯು ಲೇಕಖರ ಚಿಂತನೆ ನನ್ನ ಮನಮುಟ್ಟಿದೆ . ಮಡಿಯಾಲ ನಾರಯಣ್ ಭಟ್ ರವರು ರಾಷ್ತ್ರಸೇವೆಗೆ ತಮ್ಮ ಜೀವನನ್ನ ಮುಡಿಪಾಗಿಸಿದಲ್ಲದೆ ಅವರ ವ್ಯಕ್ತಿತ್ವವು ಮತ್ತು ರಾಷ್ತ್ರಪ್ರೇಮದ ಜೀವನವು ದೇಶಸೇವೆಯ ಸ್ಪೂರ್ತಿಯ ಸಂದೇಶವಾಗಿ ಹಲವರಿಗೆ ದಾರಿದೀಪವಾಗಿ ತ್ಯಾಗಜೀವಿಗಳಾಗಿ ಹೊರಹೊಮ್ಮುವಂತೆ ಮಾಡಿದೆ. ಆಧ್ಯಾತ್ಮ್ನದ ತಳಹದಿಯಲ್ಲಿ ತ್ಯಾಗಜೀವಿಗಳ ವಿರಾಟ್ ಸಂಸ್ಥೆಯಯನ್ನು ರಚಿಸುವ ಮಹತ್ವಾಂಕ್ಷಿಯ ನಾರಾಯಣ ಭಟ್ ರವರ ಧ್ಯೇಯವು ಹಾಗೂ ಚಿಂತನೆಯು ಬರವಣಿಗೆಯ ಪುಸ್ತಕ ರೂಪದಲ್ಲಿ ಇಂದಿನ ಜನಾಂಗಕ್ಕೆ ಸ್ಪೂರ್ತಿಯ ಬೆಳಕಾಗಿ ಬಂದಿದೆ . ದೇಶಸೇವೆಗಾಗಿ ತ್ಯಾಗಜೀವಿಗಳ ಮಿಶನರಿ ಸಂಸ್ಥೆಯ ಸ್ಥಾಪಿಸುವುದರ ಉದ್ದೇಶ ಮತ್ತು ಅದರ ಅವಶ್ಯಕತೆಯನ್ನು ಸವಿವರವಾಗಿ ಹಾಗೂ ಮತ್ತು ತ್ಯಾಗಜೀವಿಗಳು ಯಾವ ರೀತಿಯ ಜೀವನವನ್ನು ನಡೆಸಬೇಕು ಮತ್ತು ತ್ಯಾಗಜೀವಿಗಳಾದ ನಂತರ ಅವರ ಬದುಕಿನಲ್ಲಿ ಬರುವ ಅಡೆತಡೆಗಳನ್ನು ಮತ್ತು ಸವಾಲುಗಳನ್ನು ಹೇಗೆ ಮೆಟ್ಟಿನಿಲ್ಲಬೇಕು ಎಂಬುವುದರ ಕುರಿತು ಈಗಿನ ಯುವಪಿಳಿಗೆಯು ಅತ್ಮಾವಲೋಕನ ಮಾಡಿಕೊಳ್ಳುವ ರೀತಿಯಲ್ಲಿ ವಿಚಾರವನ್ನು ಲೇಕಖರು ವ್ಯಕ್ತಪಡಿಸಿದ್ದಾರೆ . ಒಟ್ಟಾರೆಯಾಗಿ ವಿರಾಟ್ ರೂಪದ ಹಿಂದೂ ಮಿಶನರಿ ಸಂಸ್ಥೆಯ ರೂಪುರೇಷೆ ಹೇಗಿರಬೇಕು ಮತ್ತು ಹೇಗೆ ಕಟ್ಟಬೇಕು ಎಂಬುವ ರಾಷ್ತ್ರಪ್ರೇಮವ ಯುವಜನಾಂಗದಲ್ಲಿ ಬಿತ್ತರಿಸುವ ಹಲವು ಚಿಂತನೆಗಳು ಮತ್ತು ವಿಷಯಗಳು ನನ್ನನ್ನ ಮೂಕವಿಸ್ಮಿತಗೊಳಿಸಿವೆ.ಮತ್ತು ಓದುಗರಲ್ಲಿ ದೇಶದ ಪ್ರಗತಿಯಲ್ಲಿ ಅವರ ಕರ್ತವ್ಯಗಳೇನು ಮತ್ತು ಅವರು ಯಾವ ರೀತಿಯ ಬದುಕನ್ನು ಸಾಗಿಸಬೇಕೆಂಬ ಪ್ರಶ್ನೆಗಳನ್ನ ಅವರಲ್ಲಿ ಮೂಡಿಸಿವಂತೆ ಮತ್ತು ಪರಿಹಾರಕ್ಕಾಗಿ ಮತ್ತ್ತೆ ಮತ್ತೆ ಪುಸ್ತಕವ ಓದುವಂತೆ ಮಾಡುತ್ತದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಮಡಿಯಾಲ ನಾರಯಣ ಭಟ್ /ವಿರಾಟ್ ರೂಪದ ಭಾರತೀಯ ಮಿಶನರಿ ಸಂಸ್ಥೆ “ಯ ಸ್ಥಾಪನೆಯ /ವಿರಾಟ್ ರೂಪದ ಹಿಂದೂ ಮಿಶನರಿ ಸಂಸ್ಥೆಯ ರೂಪುರೇಷೆ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಯುವಕರು, ಎಲ್ಲಾ ವರ್ಗದ ಓದುಗರು

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

0
Votes
165
Views
7 Months
Since posted

Voting Closed!

Scroll to Top