ಪುಸ್ತಕದ ಶೀರ್ಷಿಕೆ: ಸ್ವಪ್ನ ಸಾರಸ್ವತ
ಪುಸ್ತಕದ ಲೇಖಕರು: ಗೋಪಾಲಕೃಷ್ಣ ಪೈ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸುಮರಂಗ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಪೋರ್ಚುಗೀಸರ ದಬ್ಬಾಳಿಕೆಯಿಂದಾಗಿ ಹಿಂದೂ ಧರ್ಮವನ್ನು ಉಳಿಸಿಕೊಳ್ಳುವುದಕ್ಕಾಗಿ ಗೌಡ ಸಾರಸ್ವತ ಜನಾಂಗದವರು ಗೋವೆಯಿಂದ ದಕ್ಷಿಣಕ್ಕೆ ವಲಸೆ ಬಂದು ನೆಲೆ ನಿಲ್ಲುವ ಕಥೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ರಾವುಳ ಕುಡಾವಿಯ ಮದುವೆಯ ದಿಬ್ಬಣಕ್ಕೆ ದಿಬ್ಬಣವೇ ಮತಾಂತರವಾದ ಘಟನೆ. ಅಲ್ವೇರಾಳೊಡನೇ ವಿಠು ಪೈಗೆ ಬೆಳೆದ ಸಖ್ಯ. ನಾಗ್ಡೋ ಬೇತಾಳನನ್ನು ಹುಡುಕಿ ಉತ್ತರ ಕಡೆ ಹೊರಟ ಘಟನೆ. ೪೪ಕುಟುಂಬಗಳು ಗೋವೆಯ ದಕ್ಷಿಣಕ್ಕೆ ತಮ್ಮ ಸಂಸ್ಕೃತಿ ಉಳಿಸಿಕೊಳ್ಳುವುದಕ್ಕೆಗೂಳೇ ಹೊರಟ ಸಂದರ್ಭ. ಬೇಳಂಬೀಡುವಿನಲ್ಲಿ ರಾಮಚಂದ್ರ ಜಮೀನು ಖರೀದಿಸಿದ ಕ್ಷಣ. ಆ ನಂತರದ ದಾಯಾದಿ ಮತ್ಸರದ ಹೊಗೆ. ಇವೆಲ್ಲವೂ ಕಾದಂಬರಿ ಮುಖ್ಯ ಘಟ್ಟಗಳು.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಯಾರಿಗೆ ತಮ್ಮ ಇತಿಹಾಸದ ಅರಿವು ಬೇಕು ಅವರೆಲ್ಲಗೂ ಬೇಕಾದ ಪುಸ್ತಕ. ಗೋವೆಯ ಮೂಲದಿಂದ ಬಂದು ಬದುಕಿ ಕಟ್ಟಿಕೊಂಡವರ ಕಥೆಯಿದು. ಹಾಗಾಗಿ ಅವರ ವಂಶಸ್ಥರೆಲ್ಲಾ ಓದಬೇಕಾದ ಅವರ ಪೂರ್ವಜರ ಕಥೆ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.