ಪುಸ್ತಕದ ಶೀರ್ಷಿಕೆ: ಸಾಧ್ವಿಮಣಿ ಹೆಳವನಕಟ್ಟೆ ಗಿರಿಯಮ್ಮ
ಪುಸ್ತಕದ ಲೇಖಕರು: ಪ್ರೇಮ ಭಟ್
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಿಜಯ ಮೂರ್ತಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ನಾನು ಚಿಕ್ಕವಳಿದ್ದಾಗ, ನನ್ನ ತಂದೆಯವರು ಹತ್ತು ಚಿತ್ರಕಥೆ ಪುಸ್ತಕಗಳನ್ನು ತಂದಾಗ, ನಾನು ಆರಿಸಿಕೊಂಡದ್ದು "ಹೆಳವನಕಟ್ಟೆ ಗಿರಿಯಮ್ಮ" ಎಂಬ ಪುಸ್ತಕವನ್ನು. ಆ ಪುಸ್ತಕ ನನ್ನ ಮನಸೆಳೆದು ಗಿರಿಯಮ್ಮನವರ ಪಾತ್ರ ನನ್ನ ಮನಸ್ಸಿನಲ್ಲಿ ನೆಲೆಯೂರಿತು. ಪ್ರೇಮ ಭಟ್ ಅವರ ಕಾದಂಬರಿ "ಸಾದ್ವಿಮಣಿ ಹೆಳವನಕಟ್ಟೆ ಗಿರಿಯಮ್ಮ" ಓದಿದ ಮೇಲೆ ನಾನು ಕಂಡ ಅಂದಿನ ಚಿತ್ರ ಕಥೆ ಗಿರಿಯಮ್ಮ ನವರಿಗೂ ಕಾದಂಬರಿಯಲ್ಲಿ ಮೂಡಿ ಬಂದಿರುವ ಗಿರಿಯಮ್ಮನವರಿಗೂ ಅಂತರ ಕಂಡೆ. ಕೇವಲ ಭಕ್ತಿ ಪ್ರಧಾನವಾದ ಮುಖ ತಿಳಿದಿದ್ದವಳು ಇಲ್ಲಿ ಅವರ ಸಂಪೂರ್ಣ ಸಾಂಸಾರಿಕ ಜೀವನದ ಹಾದಿ ಕಂಡೆ. ಚಿಕ್ಕವಯಸ್ಸಿನಲ್ಲಿಯೇ ತನ್ನ ತಾಯಿಯನ್ನು ಕಳೆದುಕೊಂಡ ಗಿರಿಯಮ್ಮನಿಗೆ ತಂದೆಯೇ ಇಬ್ಬರ ಸ್ಥಾನ ತುಂಬಿದರು. ತಂದೆಯು ಮರೆಯಾದ ಮೇಲೆ, ಚಿಕ್ಕಪ್ಪ ಚಿಕ್ಕಮ್ಮನ ಆಶ್ರಯದಲ್ಲಿ ಬೆಳೆದರು. ಚಿಕ್ಕವರಿಂದಲೂ ಅವರಿಗೆ ಯಾವುದೋ ಶಕ... ವಿವರಣೆಗೊಂಡಿದೆ. ದೇವರಲ್ಲಿದ್ದ ನಂಬಿಕೆ ಭಕ್ತಿ ದೀನರ ಸೇವೆಗೆ ಅವಳನ್ನು ಇಳಿಸಿತ್ತು. ಅಲ್ಲದೇ ರೋಗಿಗಳಿಗೆ ಮದ್ದು ಕೊಡುವ ವಿದ್ಯೆ ಸಹ ಈ ಕೆಲಸಕ್ಕೆ ಸಹಕರಿಸಿತು. ಅವರ ಜನಾನುರಾಗ, ಸಮಾನತೆಯ ಮನೋಭಾವ, ಜನರಿಗೆ ನೀಡುತ್ತಿದ್ದ ಉಪದೇಶದ ಹಾದಿ ಲೇಖಕಿಯು ಮನ ಮೆಚ್ಚುವಂತೆ ನಿರೂಪಿಸಿದ್ದಾರೆ. ಅವರ ಧ್ಯಾನಾ, ಮೌನ, ಭಜನೆ ನಂಬಿದ ದೈವ ನಾಮ ಸಂಕೀರ್ತನೆಯ ಗಾಯನ, ಭಕ್ತಿ ಪರವಶತೆಯಿಂದ ನರ್ತನ, ಭಕ್ತಿ ಪಂಥದವರ ಜೊತೆ ಬೆರೆತಿದೆ. ಈ ಸಂದರ್ಭದಲ್ಲಿ ಮೀರಾಬಾಯಿ ಅವರನ್ನು ನೆನಪಿಗೆ ತರಿಸಿ ಭಕ್ತಿ ಪಂಥದ ಸತ್ಯತೆಯನ್ನು ಓದುಗರಿಗೆ ಅರಿವು ಮೂಡಿಸಿ ಗಿರಿಯಮ್ಮನವರ ಭಕ್ತಿಯ ಪರಾಕಾಷ್ಟತೆಗೆ ಕರೆದೊಯ್ಯುತ್ತದೆ ಎನ್ನಿಸುವ ಭಾವ ಮೂಡಿಸುತ್ತದೆ. ಅವರ ಚಿಕ್ಕಪ್ಪನಿಗೆ ಹೇಳಿದ ಒಂದುಮಾತು ತುಂಬಾ ಮನಸ್ಸಿಗೆ ಹಿಡಿಸಿತು "ಅಳುವುದಾದರೆ ದೇವರಿಗಾಗಿ ಆಳು, ನನಗಾಗಿ ಬೇಡ, ಶಾಶ್ವತ ಶಕ್ತಿಗೆ ಮಣಿ, ಅಶಾಶ್ವತ ಜೀವಕ್ಕೆ ಅಳಬೇಡ". ಗಂಡ ಹೆಂಡತಿಯ ನಿಷೇಕ ಶಾಸ್ತ್ರ ಎಂದಾಗ ತಿಪ್ಪರಸನ ಮನದಿ ಆ ಕ್ಷಣಕ್ಕಾಗಿ ಹಾತೊರೆಯುತ್ತಿದ್ದ ಆತುರ, ಗಿರಿಯಮ್ಮನಲ್ಲಿ ಗಂಡ ತನ್ನನ್ನು ಮುಟ್ಟದಂತೆ ಕಾಪಾಡು ಎ... ಮನವರಿಕೆ, ಸುಮತೀಂದ್ರ ಸ್ವಾಮಿಗಳು ಇವರಲ್ಲಿ ಕಂಡ ಯಶೋದೆಯ ಚಿತ್ರ, ರಾಮನಿಗಿಂತ ರಾಮನಾಮದ ಹಿರಿಮೆ ದೊಡ್ಡದೆಂಬ ನಾಮದ ಮಹಿಮೆ, ಅತ್ತೆ ಸೊಸೆಯ ಬಾಂಧವ್ಯ ಮಹೋನ್ನತವಾಗಿ ಮೂಡಿ ಬಂದಿದೆ. ಭಕ್ತಿ ರಸವು ಒಬ್ಬರಿಂದ ಒಬ್ಬರಿಗೆ ಹರಿಯುವ ಪರಿ, ಹೊನ್ನಾಳಿಯಲ್ಲಿ ನೆಲೆಯಾದ ಮಾರುತಿಯ ನೆಲೆಯಾದ ರೂಪ, ತನಗಾಗಿ ಏನನ್ನು ಬೇಡದ ತಾಯಿ ಗಿರಿಯಮ್ಮ, ತುಂಗಾ ನದಿಯ ದಡದಲ್ಲಿ ಮಾರುತಿಯನ್ನು ನೆಲೆಗೊಳಿಸಿ ಮತ್ತೆ ನದಿಯಲ್ಲಿ ಐಕ್ಯರಾದ ರೀತಿ ಕೊನೆಯಲ್ಲಿ ಗಿರಿಯಮ್ಮನವರು ಸಾಯಲಿಲ್ಲ ಸಚೇತನರಾಗಿದ್ದಾರೆ. ಮಹಾಸಾದ್ವಿಮಣಿ ಎಂಬ ಮಾತು ನನ್ನ ಅಂತರಂಗದಲ್ಲಿ ನೆಲೆಯಾಗಿ ನಿಂತಿದೆ ಎನ್ನುವುದಕ್ಕೆ ಪ್ರೇಮ ಭಟ್ ರವರ ಕಾದಂಬರಿಯೆ ಕಾರಣ ಎಂದರೆ ತಪ್ಪಾಗಲಾರದು. ಇದು ಅಪೂರ್ವ ಕಾದಂಬರಿ ಯಾಗಿದೆ ಎನ್ನುವುದಕ್ಕೆ ನನ್ನ ಅಂತರಂಗದಲ್ಲಿ ಗಿರಿಯಮ್ಮ ನೆಲೆಯಾಗಿ ನಿಂತಿರುವುದು
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಲಭ್ಯವಿಲ್ಲ
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಲಭ್ಯವಿಲ್ಲ
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.