ಪುಸ್ತಕದ ಶೀರ್ಷಿಕೆ: ಒಲುಮೆ ಒಚ್ಚತವಾಗಿ
ಪುಸ್ತಕದ ಲೇಖಕರು: O L ನಾಗಭೂಷಣ ಸ್ವಾಮಿ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ರೇಷ್ಮಾ ಗುಲೇದ್ಗುಡ್ಡಕರ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಕನ್ನಡದ ಮೊದಲ ಕವಿಯತ್ರಿ, ಶಿವ ಶರಣರಲ್ಲಿ ಮೊದಲ ಸಾಲಿಗೆ ಬಂದು ನಿಲ್ಲುವ ಅಕ್ಕಮಹಾದೇವಿ ಶತಶತಮಾನಗಳು ಕಳೆದರೂ ಅಕ್ಕನಾಗಿಯೇ ಉಳಿದ ಪರಿ ಅನನ್ಯ, ಈ ಅಕ್ಕನ ವಚನಗಳನ್ನು ಇಂದು ಹಿರಿಯ ಲೇಖಕರಾದ ಓ ಎಲ್ ನಾಗಭೂಷಣ ಸ್ವಾಮಿಯವರು ಹೊಸ ಭಾಷೆಯಲ್ಲಿ ಒಲುಮೆವಚ್ಚತವಾಗಿ ಎಂಬ ಕೃತಿಯನ್ನು ಹೊರತಂದಿದ್ದಾರೆ ಈ ಕೃತಿ ಅಕ್ಕನ ಆಯ್ದ ವಚನಗಳ ಸಂಗ್ರಹ ಸಾರ ಕೃತಿ ಈ ಕೃತಿ ನಾವು ಓದಿರುವ ಕೃತಿಗಳಂತೆ ಅಕ್ಕನ ವಚನಗಳನ್ನು ವ್ಯಾಕರಣ ಸಹಾಯದಿಂದ ಓದಿಕೊಂಡು ಸಂಕ್ಷಿಪ್ತವಾಗಿ ಅದರ ಸಾರವನ್ನು ತಿಳಿದುಕೊಳ್ಳುವಂತೆ ಇಲ್ಲ, ಬದಲಾಗಿ ಇಲ್ಲಿ ಅಕ್ಕನ ವಚನಗಳನ್ನು ವಾಸ್ತವದ ನೆಲಗಟ್ಟಿನಲ್ಲಿ ಲೇಖಕರು ವಿವರಣೆ ನೀಡಿದ್ದಾರೆ ಇಲ್ಲಿರುವ ವಚನಗಳು ಅರಳಿಮರ ಎಂಬ ಜಾಲತಾಣದಲ್ಲಿ ಪ್ರಕಟವಾಗಿ ಹೆಚ್ಚು ಗಮನ ಸೆಳೆದಿದ್ದವು, ವಚನಗಳ ಸಾರ ಹಾಗೂ ಅಲ್ಲಿನ ಅಕ್ಕಮಹಾದೇವಿಯ ಸೃಜನಾತ್ಮಕ ಚಿತ್ರಗಳು ಮತ್ತಷ್ಟು ಓದುಗರ ಗಮನ ಸೆಳೆದಿದ್ದವು. ಲೇಖಕರು ಇಲ್ಲಿ ಅಕ್ಕನ ವಿವಿಧ ವಚನಗಳನ್ನು ಜೀವ ಭಾವದ ವಚನಗಳನ್ನಾಗಿ ವಿಂಗಡಿಸಿ ಅವುಗಳನ್ನು ಆರು ವಿಭಾಗಗಳನ್ನಾಗಿ ಮಾಡಿ ಆ ವಿಭಾಗಗಳಿಗೆ ಸರಿಹೊಂದುವಂತ ವಚನಗಳನ್ನು ಜೋಡಿಸಿ.ಕೃತಿಯನ್ನು ಹೆಣೆಯಲಾಗಿದೆ . ಹಾಗೆ ಈ ಪ್ರಯತ್ನದಲ್ಲಿ ತಮಗೆ ಅರ್ಥವಾದದ್ದು ಮಾತ್ರ ಸತ್ಯವಲ್ಲ , ಈ ವಚನಗಳನ್ನು ಓದಿದಾಗ ಓದುಗರಿಗೂ ವಿಭಿನ್ನ ಅರ್ಥಗಳು ಹಳೆಯಬಹುದು ಹೀಗಾಗಿ ಇಲ್ಲಿರುವ ವಿಶ್ಲೇಷಣೆ ಅಥವಾ ವಿವರಣೆಗಳನ್ನು ಒಪ್ಪಿಕೊಳ್ಳಬೇಕು ಎಂದು ಅವರು ನಾನು ಹೇಳಲಾಗುವುದಿಲ್ಲ ಎಂದು ಲೇಖಕರು ಮೊದಲೇ ಹೇಳಿದ್ದಾರೆ. ಜೊತೆಗೆ ಇದು ಕನ್ನಡ ಓದುಗರ ಓದಿನ ಹಿರಿಮೆಯನ್ನು ಹೆಚ್ಚಿಸಬೇಕು ಮತ್ತು ಇಲ್ಲಿರುವ ಪದಗಳ ಬಳಕೆಯನ್ನು ಅವರು ಮಾಡಬೇಕು,ವಿಚಾರಶೀಲತೆಯನ್ನು ಬೆಳೆಸಬೇಕು ಎಂಬುದು ಈ ಕೃತಿಯ ಆಶಯವಾಗಿದೆ. ಅಕ್ಕ ಈ ಶತಮಾನದ ಸೆಳೆತವಲ್ಲ ಆಕೆ ಶತಶತಮಾನಗಳ ಸೆಳೆತವು ಹೌದು.... ಕಾಲ, ನೀತಿಗಳು , ದೇಶ,ಸಮುದಾಯ ಎಲ್ಲವನ್ನು ದಾಟಿ ನಿರಂತರವಾಗಿ ಹರಿದು ಬರುತ್ತಿದ್ದಾಳೆ ತನ್ನ ವಚನಗಳ ಮೂಲಕ. ಹೆಣ್ಣಿಗೆ ಸಂಕೋಲೆಗಳು , ಸಂಘರ್ಷಗಳು ಅವಳ ಬಾಳನ್ನು ಬಿಡುವುದೇ ಇಲ್ಲ .ಆದರೆ ಅಕ್ಕ ತೆಗೆದುಕೊಂಡ ನಿರ್ಧಾರವಿದೆಯಲ್ಲ ಅದು 12ನೇ ಶತಮಾನವಾ ದರೂ ಅಥವಾ ಇಂದಿನ 21ನೇ ಶತಮಾನಕಾದರೂ ನಿಬ್ಬೆರಗಾಗುವಂತಹ ನಿರ್ಧಾರಗಳು. ಇಂದಿಗೂ ಸಹ ಹೆಣ್ಣನ್ನು ಬೌದ್ಧಿಕತೆಯ ಅಂಗಳದಿಂದ ದೂರವಿರಿಸಲಾಗುತ್ತದೆ ಹಾಗೂ ಆಕೆಯ ನಡೆ ನುಡಿಗಳನ್ನು ಬಹಳಷ್ಟು ಟೀಕಿಸಲಾಗುತ್ತದೆ ಆದರೆ ಇವೆಲ್ಲವನ್ನು 12ನೇ ಶತಮಾನದಲ್ಲಿ ಮೆಟ್ಟಿ ನಿಂತು ತನ್ನ ವ್ಯಕ್ತಿತ್ವವನ್ನು ತಾನೇ ನಿರ್ಮಿಸಿಕೊಂಡು ಜಗತ್ತಿನಿಂದ ತಾನು ಅನನ್ಯವಾಗಿ ನೋಡಿಕೊಳ್ಳದೆ, ಲೋಕವೇ ತಾನಾದ ಬಳಿಕ ಏಕಾಂತದ ಹಂಗು ಯಾಕಯ್ಯ ಎಂದು ಕೇಳಿದ ದಿಟ್ಟೆ ನಮ್ಮ ಅಕ್ಕ . ಹಾಗೂ ಶಿವಶರಣರ ವಚನಗಳನ್ನು ನೋಡಿದಾಗ ವಚನಕಾರರಿಗೆ ಸಿಕ್ಕಷ್ಟು ಸ್ಪಷ್ಟ ಚಿತ್ರಣಗಳು ಅವರ ಬದುಕಿನ ಬಗ್ಗೆ ಶಿವಶರಣೆಯ ಬಗ್ಗೆ ಅಷ್ಟಾಗಿ ಸಿಗುವುದಿಲ್ಲ . ಶಿವಶರಣೆಯರ ಹಲವು ವಚನಗಳ ಪೈಕಿ ಹೆಚ್ಚು ಮುಂಚೂಣಿಗೆ ಬರುವುದು ಅಕ್ಕಮಹಾದೇವಿಯ ವಚನಗಳು. Bold and tuff . ಹಾಗೆ ಕಾಣಿಸಿಕೊಳ್ಳುವ ಈ ವಚನಗಳು ಹೆಣ್ಣಿನ ಭಾವಲೋಕದ ವಿಭಿನ್ನತೆಯನ್ನು ತೆರೆದಿಡುವುದಲ್ಲದೆ, ಅಕ್ಕನ ವಚನಗಳು ಸಮಕಾಲಿನ ಯೋಚನೆಗಳಿಗೆ ತಕ್ಕಂತೆ ಇರುವುದು ಸಹ ಒಂದು ಅಚ್ಚರಿಯನ್ನು ಮೂಡಿಸುತ್ತೇವೆ. . ಯಾವ ಹೆಣ್ಣೇ ಆಗಲಿ ಪ್ರತಿ ಹೆಣ್ಣಿನ ಮನದಲ್ಲಿಯೂ ಅಕ್ಕ ಹಾದು ಹೋಗುತ್ತಾಳೆ ಎಂಬುದಕ್ಕೆ ಸಾಕ್ಷಿಯಾಗಿವೆ ಅವಳ ವಚನಗಳು . ಲೇಖಕರು ವಿವಿಧ ವಚನಗಳ ಮುಖಾಂತರ ಹೆಣ್ಣಿನ ಭಾವ ಲೋಕವನ್ನು ಅನಾವರಣಗೊಳಿಸಿದಂತೆ ಇಲ್ಲಿರುವ ವಚನ ಸಾರ, ಜೀವ ಭಾವದ ಹಾದಿಯಾಗಿದೆ. ಭಾವವೆಂದರೆ ವಾಸ್ತವದ ಚಿತ್ರಣಗಳನ್ನು ವಚನ ಸಾರವು ಕಟ್ಟಿಕೊಡುತ್ತದೆ. ಲೇಖಕರು ಇಲ್ಲಿ ಹೆಣ್ಣಿನ ಭಾವ ತೋರಣವನ್ನು ಅನಾವರಣಗೊಳಿಸುವಾಗ ಅವರು ಸಹ ಹೆಣ್ಮನವ ಹೊಕ್ಕಿ ಬಂದಂತೆ ಕೆಲವು ವಚನಗಳ ಸಾರವು ಧ್ವನಿಸುತ್ತದೆ.ಮತ್ತೆ ಕೆಲವು ವಚಗಳು ಅಕ್ಕನೆ ನೇರವಾಗಿ ಓದುಗರಿಗೆ ಹೇಳುವಂತೆ ಸಂಭಾಷಿಸುವಂತೆ ಭಾಸವಾಗುತ್ತವೆ ಅಕ್ಕನ ವಚನಗಳು ಗ್ರಾಂಥಿಕವಾಗಿ ನೆಲೆಯಾಗಿರುವುದಕ್ಕಿಂತ ನಿತ್ಯದ ಬದುಕಿನಲ್ಲಿ ಹೆಣ್ಣಿನ ಲೋಕದೊಳಗಡೆ ನುಡಿಗಟ್ಟುಗಳಂತೆ ಜನಮಾನಸದಲ್ಲಿ ಬೆರೆತು ಅವಳಿಗೆ ಸಾಂತ್ವಾನವನ್ನು ಅವಳ ಪ್ರಶ್ನೆಗೆ ಉತ್ತರಗಳನ್ನು ನೀಡಿರುವುದನ್ನು ನಾವು ಕಾಣ ಬಹುದು ಅಂತಹ ಸಾಲಿಗೆ ನಿಲ್ಲುವ ವಚನಗಳು ತರಣಿಯ ಹುಳು, ಬೆಟ್ಟದ ಮೇಲೊಂದು ಮನೆಯ ಮಾಡಿ, ಇನ್ನು ಅಕ್ಕನಳ್ಳಿಯು ತಳಮಳಗಳು ಒದ್ದಾಟಗಳು ಇವು ಎಂಬುದು ಕಾಣಸಿಗುತ್ತವೆ ಆಲಿಸು ,ಲಾಲಿ ಸು ,ಪಾಲಿಸು ಎಂಬ ಒಂದು ವಚನ, ಹಾಗೂ ಅಕ್ಕನಗಿರುವ ಅಸಾಧ್ಯ ಧೈರ್ಯವನ್ನು ಏನಾದರೂ ಕೊಳ್ಳೆದೆ ಎಂಬ ವಚನದಲ್ಲಿ ನಾವು ಕಾಣಬಹುದು ಹಾಗೂ ನಮ್ಮೊಳಗಿನ ಒಳಗನ್ನು ಗೆದ್ದರೆ ಜಗವನ್ನು ಗೆಲ್ಲಬಹುದೇನೋ ಎಂಬಂತೆ ನನ್ನ ಕಾರ್ಯಕ್ಕೆ ನಾನು ಅಡ್ಡಿಯಾಗಬಾರದು ಎಂಬ ವಚನ ಸಾಲು ಮನಸೆಳೆಯುತ್ತವೆ. ಜೊತೆಗೆ ಲೇಖಕರು ಇಲ್ಲಿ ಗಮನಿಸಿರುವ ವಿಚಾರಗಳು ಚಿಂತನಾರ್ಹವಾಗಿ ಓದುಗರ ಮನಸ್ಸಿನಲ್ಲಿಯೂ ಸಹ ಮತ್ತಷ್ಟು ಪ್ರಶ್ನೆಗಳು ಮೂಡುತ್ತವೆ. ಅಕ್ಕನೇ ವಚನವನ್ನು ಬರೆದಿದ್ದಾಳೆಂಬ ಕುರುಹು ,ಇಲ್ಲ ಅಕ್ಕ ಹೇಗೆ ವಚನ ಬರೆದವಳು ಎಂಬ ಸಾಕ್ಷಿ ಇಲ್ಲ ,ಆದರೆ ಅಕ್ಕನ ವಚನಗಳು ಮಾತ್ರ ಬಾಯಿಂದ ಬಾಯಿಗೆ, ಮನದಿಂದ ಮನಕ್ಕೆ ಯುಗದಿಂದ ಯುಗಕ್ಕೆ ಸಾಗುತ್ತಲೇ ಇವೆ. ತನ್ನದೇ ಆದ ಯೋಚನಾ ಬಳಗವನ್ನೇ ಅಕ್ಕ ತನ್ನ ಶರಣ ತತ್ವವನ್ನು ಮೀರಿ ಕಟ್ಟಿಕೊಳ್ಳುತ್ತಿದ್ದಾಳೆ ಏಕೆಂದರೆ ಈ ವಚನಗಳು ಇಂದಿನ ಮಕ್ಕಳ ಬಾಯಲ್ಲಿಯೂ ಅವರ ಮನದಲ್ಲಿಯೂ ಮೊಳಗಿ ಅವರದ್ದೆ ಆದ ಒಂದು ಲೋಕವನ್ನು ಅಕ್ಕ ಪ್ರತಿಧ್ವನಿಸುವಂತೆ ಮಾಡುತ್ತಿರುವುದು ಸುಳ್ಳಲ್ಲ. ಲೇಖಕರು ಎತ್ತಿದ ಪ್ರಶ್ನೆಗಳಿಗೆ ಸಂಶೋಧನೆ ಆಗಬೇಕಾಗಿದೆ. ಅದೇ ಈ ಕೃತಿಯಲ್ಲಿರುವ ಅಕ್ಕನ ಚಿತ್ರಗಳು ಅಕ್ಕನನ್ನು ಉತ್ಸಾಹಿ ಯುವತಿಯಂತೆ ಚಿತ್ರಿಸಲಾಗಿದೆ. ಶತಮಾನಗಳು ಕಳೆದರೂ ಹಕ್ಕನ್ನು ಉತ್ಸಾಹಿ ಇವುಗಳಂತೆ ನಮಗೆ ಕಾಣುತ್ತಿರುವುದು ಸಹ ಸುಳ್ಳಲ್ಲ. ಪುಟ ತೆರೆಯುತ್ತಿದ್ದಂತೆ ಚಿತ್ರಗಳು ಕ್ಷಣ ಕಾಲ ನಮ್ಮನ್ನು ಅಲ್ಲೇ ಇರುವಂತೆ ತಡೆಹಿಡಿಯುತ್ತವೆ. ವಚನದ ಸಾರ ಏನಿದೆ ಎಂಬುದನ್ನು ಚಿತ್ರಗಳೆ ಕೆಲವೊಮ್ಮೆ ಅರ್ಥ ಮಾಡಿಸುವಲ್ಲಿಯೂ ಸಹ ಯಶಸ್ವಿಯಾಗಿವೆ ಹೀಗಾಗಿ ಚಿತ್ರಕಲಾವಿದರಿಗೆ ನಮನ ಮತ್ತು ಅಭಿನಂದನೆಗಳು. ವಿನೂತನ ವಿನ್ಯಾಸದ ಮೂಲಕ ಅವರ ಬಂದಿರುವ ಅಕ್ಕನ ಈ ಕೃತಿ ಅಕ್ಕನ ಆಶಯದಂತೆ ಹಾಗೂ ಲೇಖಕರ ಆಶಯದಂತೆ ಹೊಸ ಬೆಳಕನ್ನು ನೀಡುತ್ತಿದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಕೃತಿಯ ವಿಶ್ಲೇಷಣೆ ಬಹಳ ಸರಳವಾಗಿದ್ದು ಎಂತಹವರನ್ನು ಓದಿನಲ್ಲಿ ಮುಳುಗುವಂತೆ ಮಾಡುತ್ತದೆ ಮತ್ತೆ ಅಕ್ಕಮಹಾದೇವಿಯನ್ನು ನೆನೆಸುವ ವಚನಗಳು ಹಾಗೂ ವಾಸ್ತವದ ನೆಲಗಟ್ಟಿನಲ್ಲಿ ವಿಮರ್ಶೆಗೊಂಡಿರುವುದು ಹೆಚ್ಚು ಅರ್ಥಪೂರ್ಣವಾಗಿದೆ.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ವಚನಗಳನ್ನು ಓದುವ ವೈಚಾರಿಕ ವಿಚಾರಗಳನ್ನು ತಿಳಿದುಕೊಳ್ಳುವ ಎಲ್ಲಾ ವಯೋಮಾನದವರು ಸಹ ಈ ಕೃತಿಯನ್ನು ಓದಬಹುದು ಹೆಚ್ಚಾಗಿ ಯುವಕ ಮತ್ತು ಯುವತಿಯರಿಗೆ ಇದು ಸೂಕ್ತವಾದ ಕೃತಿ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.