Submission 2262

ಪುಸ್ತಕದ ಶೀರ್ಷಿಕೆ: ಜೈನ ರಾಮಾಯಣ (ಸಂಕ್ಷಿಪ್ತ ಪದ್ಮ ಪುರಾಣ)

ಪುಸ್ತಕದ ಲೇಖಕರು: ಆಚಾರ್ಯ ರವಿಷೇಣರು

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅನೂಷ ನೀಲೇಶ್ ಅತಿಕಾರಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಜೈನ ರಾಮಾಯಣ (ಸಂಕ್ಷಿಪ್ತ ಪದ್ಮ ಪುರಾಣ) ಈ ಜೈನ ರಾಮಾಯಣ ಗ್ರಂಥವು ಆಚಾರ್ಯ ರವಿಷೇಣರು ಬರೆದ ಪದ್ಮಪುರಾಣವಾಗಿದೆ. ಇದು 26 ಸಾವಿರ ಶ್ಲೋಕಗಳಿಂದ ಕೂಡಿದ ದೀರ್ಘ ಕಾವ್ಯವಾಗಿದೆ. ಸರಳ ರಾಮಾಯಣದ ಅನ್ವೇಷಣೆ ಮಾಡಿದಾಗ ಉತ್ತರ ಭಾರತದ ಪುಸ್ತಕಾಲಯದಲ್ಲಿ ಏಲಾಚಾರ್ಯ ಮುನಿ ಮಹಾರಾಜರಾದ ವಸುನಂದಿಯವರು ಬರೆದ 'ರಾಮಚರಿತ್ರ' ಹಾಗು ಕ್ಷಮಾಸಾಗರ ಮುನಿ ಮಹಾರಾಜರಿಂದ ಬರೆಯಲ್ಪಟ್ಟ 'ಕೌಶಲ್ಯಾ ಕೆ ರಾಮ್' ಈ ಪುಸ್ತಕಗಳನ್ನು ಆಧಾರವಾಗಿರಿಸಿ ಇನ್ನಷ್ಟು ಸರಳಗೊಳಿಸಿ ಪುಸ್ತಕವನ್ನು ಹಿಂದಿಯಿಂದ ಕನ್ನಡಕ್ಕೆ ತರಲಾಗಿದೆ. ಇದನ್ನು ಓರ್ವ ಶ್ರಾವಕರು 2024ನೇ ಇಸವಿಯಲ್ಲಿ ಈ ಜೈನ ರಾಮಾಯಣವನ್ನು ಮುದ್ರಿಸಿ ವೇಣೂರು ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಈ ಪುಸ್ತಕವನ್ನು ಹೊರತಂದು ಎಲ್ಲರಿಗೂ ಉಚಿತವಾಗಿ ಹಂಚಿದ್ದಾರೆ. ನಾನು ಪುಸ್ತಕ ವಿಮರ್ಶೆಗಾಗಿ ಹುಡುಕುತ್ತಿರುವಾಗ ನನ್ನ ಕಣ್ಣಿಗೆ ಬಿದ್ದಿದ್ದೇ ಈ ಪುಸ್ತಕ "ಜೈನ ರಾಮಾಯಣ". ಈ ಕಥೆಯು 12 ಲಕ್ಷ ವರ್ಷಗಳ ಹಿಂದೆ ಶ್ರೀ ಮುನಿಸುವ್ರತ ತೀರ್ಥಂಕರರ ಕಾಲದಲ್ಲಿ ನಡೆದ ಸತ್ಯ ಘಟನೆಯಾಗಿದೆ. ಆ ಬಳಿಕ 18 ರಾಮಾಯಣಗಳು ಬರೆಯಲ್ಪಟ್ಟವು ಎಂಬ ಮಾಹಿತಿಯಿದೆ. ನಮಗೆ ದೊಡ್ಡ ದೊಡ್ಡ ಗ್ರಂಥಗಳನ್ನು ಓದಲಾಗದು ಆದರೆ ಸಹಸ್ರಾರು ವರ್ಷಗಳ ಹಿಂದೆ ನಡೆದ ಈ ಸತ್ಯ ಘಟನೆ ಇಂದಿಗೂ ಮನೆ ಮನಗಳಲ್ಲಿ ಅಚ್ಚಳಿಯದೆ ಉಳಿದಿದೆ. ಜೈನ ಧರ್ಮ ಗ್ರಂಥದ ಪ್ರಕಾರ ರಾಮಾಯಣ ಇತರ ರಾಮಾಯಣಗಳಿಗಿಂತ ಸ್ವಲ್ಪ ವಿಭಿನ್ನವಾಗಿದೆ ಜೈನ ರಾಮಾಯಣ. ಇದರಲ್ಲಿ 112 ಚಿಕ್ಕ ಚಿಕ್ಕ ಅಧ್ಯಾಯಗಳು ಇದ್ದು ಓದಲು ಸುಲಭವಾಗಿದೆ. ಕೆಲವು ಮುಖ್ಯ ವ್ಯತ್ಯಾಸಗಳು ರಾವಣನು ರಾಕ್ಷಸನಲ್ಲ. ಕುಂಭಕರ್ಣ ಎಲ್ಲರಂತೆ ನಿದ್ರಿಸುತ್ತಿದ್ದ. ಹನುಮಂತನು ಕಪಿಯಲ್ಲ. ಸೀತೆ - ರಾಜ ಜನಕನ ರಾಣಿ ವಿದೇಹಳ ಗರ್ಭದಲ್ಲಿ ಜನಿಸಿದವಳು. ರಾಮನ ಆಯುಷ್ಯ 17 ಸಾವಿರ ವರ್ಷಗಳು ಹಾಗೂ ಎತ್ತರ 16 ಧನುಸ್ಸು ಅಂದರೆ 96 ಅಡಿಗಳು. ರಾವಣನನ್ನು ವಧಿಸಿದ್ದು ಲಕ್ಷ್ಮಣ, ರಾಮನಲ್ಲ. ಲಕ್ಷ್ಮಣನ ಆಯುಷ್ಯ 12 ಸಾವಿರ ವರ್ಷಗಳು ಹಾಗೂ ಎತ್ತರ 96 ಅಡಿಗಳು. ಇನ್ನು ಮಾನವರನ್ನು ವಿದ್ಯಾಧರರೆಂದು ಕರೆಯುತ್ತಿದ್ದರು. ಇವರಿಗೆ ಅನೇಕ ವಿದ್ಯೆಗಳು ತಿಳಿದಿದ್ದವು. ಇವರನ್ನು ಉತ್ಕೃಷ್ಟ ಜಾತಿಯ ಮಾನವರೆನ್ನಬಹುದು. ಅವರು ಮನುಷ್ಯರಂತೆ ತಮ್ಮ ವಿದ್ಯೆಗಳನ್ನು ತ್ಯಾಗ ಮಾಡಿ ಮುನಿಗಳಾಗಿ ಮೋಕ್ಷವನ್ನು ಪಡೆಯುತ್ತಿದ್ದರು. ಜೈನ ರಾಮಾಯಣ ಯಾವುದೇ ಅಸಹಜ ಘಟನೆಗಳಿಂದ ಕೂಡಿಲ್ಲ. ಯಾವುದೇ ನಂಬಲಾಗದೆ ಘಟನೆಗಳು ಇದರಲ್ಲಿಲ್ಲ. ಚತುರ್ಥ ಕಾಲವಾದುದರಿಂದ ಜನರನ್ನು ನೋಡಿ ಅವರ ಪೂರ್ವಜನ್ಮವನ್ನು ಹೇಳುವ ಅವಧಿ ಜ್ಞಾನಿ ಮುನಿಗಳು ಆಗ ಇದ್ದರು. ಆಧ್ಯಾತ್ಮಿಕವಾಗಿ ನಮಗೆ ಇಂತಹ ಕಥೆಗಳಲ್ಲಿ ಕುತೂಹಲ ಮತ್ತು ಆಸಕ್ತಿ ಹೆಚ್ಚುತ್ತದೆ ಹಾಗಾಗಿ ಪ್ರತಿಯೊಬ್ಬರೂ ಈ ಪುಸ್ತಕವನ್ನು ಓದಿದಾಗ ಜ್ಞಾನ ವೃದ್ಧಿಯಾಗುತ್ತದೆ. ಹೊಸದೊಂದನ್ನು ತಿಳಿದುಕೊಂಡಂತೆ ಆಗುತ್ತದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ನನಗೆ ಈ ಪುಸ್ತಕವನ್ನು ಓದಿದಾಗ ಅನಿಸಿದ್ದು ನಾವು ಮನುಕುಲದವರು ನಾವ್ಯಾರೂ ಸಾಮಾನ್ಯರಲ್ಲ, ಅಸಾಮಾನ್ಯರು ದೇವಮಾನವರು. ಅಂತಹಾ ಅದ್ಬುತವಾದ ಶಕ್ತಿ ನಮ್ಮಲ್ಲೂ ಇದೆ. ಅದು ನಮಗೆ ಆಗಾಗ ಅರಿವಿಗೆ ಬರುತ್ತದೆ, ಆದರೆ ನಾವು ಅದನೆಲ್ಲಾ ಸಹಸ್ರಾರು ವರ್ಷಗಳ ಹಿಂದೆಯೇ ಎಲ್ಲಾ ಶಕ್ತಿಯನ್ನು ತ್ಯಾಗ ಮಾಡಿ ಸಾಮಾನ್ಯ ಮಾನವರಂತೆ ಬುದುಕುತ್ತಿದೇವೆ. ನಮ್ಮ ಆತ್ಮ ಒಂದೇ ನಾವು ಕಾಲದಲ್ಲೂ ಇದ್ವಿ, ಈ ಕಾಲದಲ್ಲೂ ಇದ್ದೇವೆ. ಮೋಕ್ಷ ಪಡೆಯಬೇಕೆಂದರೆ ನಾವು ಕರ್ಮಭೂಮಿಯಲ್ಲಿ ನಮ್ಮನಮ್ಮ ಕರ್ಮಾನುಸಾರ ಹುಟ್ಟಲೇ ಬೇಕು. ಸೀತೆ ಹಿಂದಿನ ಜನ್ಮದ ಕರ್ಮ ಫಲವನ್ನು ಹೇಗೆ ಅನುಭವಿಸಿದರು. ರಾಮ-ಲಕ್ಷ್ಮಣರ ಬಾಂಧವ್ಯ ಮೋಹ, ಸೀತೆಯ ಅಗ್ನಿಪರೀಕ್ಷೆ. ವೈರಾಗ್ಯದ ಸನ್ನಿವೇಶಗಳು. ಹೀಗೆ ಇನ್ನೂ ಸಾಕಷ್ಟು ಅಂಶಗಳು ಮನಮುಟ್ಟುವಂತೆ ಇದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಜೈನ ರಾಮಾಯಣವನ್ನು ಓದಿದಾಗ ನಮ್ಮ ದೃಷ್ಟಿಕೋನ ಬೇರೆಯೇ ರೀತಿಯಲ್ಲಿ ತಿರುಗುತ್ತದೆ ಹೀಗೂ ಇರಬಹುದು ಎಂದು. ಜೈನ ತತ್ವವೇ ಕರ್ಮ ಸಿದ್ಧಾಂತ. ಇದರಲ್ಲಿ ಪ್ರತಿಯೊಬ್ಬರ ಪಾತ್ರವನ್ನು ಚಿಕ್ಕದಾಗಿ ಚೊಕ್ಕವಾಗಿ ಸರಳವಾಗಿ ವಿವರಿಸಿದ್ದಾರೆ. ಅವರು ಎಲ್ಲರೂ ಹೇಗೆ ತಮ್ಮತಮ್ಮ ಹಿಂದಿನ ಜನ್ಮದ ಕರ್ಮಫಲವನ್ನು ಅನುಭವಿಸಿದರು ಎಂಬುವುದನ್ನು ಕೂಡ ಉಲ್ಲೇಖಿಸಲಾಗಿದೆ. 12ಲಕ್ಷ ವರ್ಷ ಹಿಂದಿನ ಘಟನೆಯಾದರೂ ಭಾರತ ದೇಶದಲ್ಲಿ ಈ ಘಟನೆಗಳು ಶಾಶ್ವತ ಸಾಕ್ಷ್ಯಗಳನ್ನು ಬಿಟ್ಟು ಹೋಗಿವೆ. ಇನ್ನು ಸಾಕಷ್ಟು ವಿಷಯಗಳಿವೆ ಅದನ್ನು ಪುಸ್ತಕ ಓದಿಯೇ ತಿಳಿದುಕೊಳ್ಳಬೇಕು. ಪ್ರತಿಯೊಬ್ಬರೂ ಓದಬಹುದಾದ ಪುಸ್ತಕವಿದು. ಆಧ್ಯಾತ್ಮಿಕವಾಗಿ ಜ್ಞಾನ ಮಾರ್ಗದಲ್ಲಿ ಹೊಸದೇನೂ ಕಲಿಯಲು ಸಿಗಬಹುದು.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

0
Votes
55
Views
2 Months
Since posted

Voting Closed!

Scroll to Top