Submission 2005

ಪುಸ್ತಕದ ಶೀರ್ಷಿಕೆ: ನನಗೊಂದು ಪತ್ನಿ ಬೇಕು

ಪುಸ್ತಕದ ಲೇಖಕರು: ಜುಡಿ ಬ್ರಾಡಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಿನಯ್.ಎಸ್.

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಕಾರ್ಯೇಷು ದಾಸಿ ಕರಣೆಷು ಮಂತ್ರಿ ಭೋಜೆಷು ಮಾತಾ ರೂಪೇಚ ಲಕ್ಷ್ಮಿ ಕ್ಷಮಯಾ ಧರಿತ್ರೀ ಶಯನೇಷು ರಂಭ ಎಂಬ ವಾಕ್ಯವಾಗಲಿ ಅಥವಾ ಮಾತುಗಳಾಗಲಿ ಪುರಾತನ ಕಾಲದಿಂದ ಕೇಳಿ ಬಂದರೂ ಇವುಗಳು ಇರುವುದು ಕೇವಲ ಹಾಡಿನಲ್ಲಿ ಆಡುವ ವಾಡಿಕೆಯಲ್ಲಿರುವ ರೂಢಿ ಮಾತುಗಳು. ಪ್ರಚಲಿತ ಸಮಾಜದಲ್ಲಿ ಇವು ಸ್ಥಿರವಾದ ನೆಲೆಯನ್ನು ಕಂಡಿಲ್ಲ, ನಿಜಾಂಶವೆಂದರೆ ಪುರುಷ ಪ್ರಧಾನ ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ಮಹಿಳೆಯು ಇಂದಿನ ದಿನಗಳಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾಳೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಅಪಾರವಾಗಿ ಎಂದರೆ ತಪ್ಪಿಲ್ಲ. ನಮ್ಮ ಪೂರ್ವಿಕರ ಹಿಂದಿನ ಸಂಸ್ಕೃತಿಯಲ್ಲಿ ಅವರ ಆಚಾರ, ವಿಚಾರ, ರೂಢಿ, ಸಂಪ್ರದಾಯ, ಕಟಿಬದ್ಧವಾಗಿದ್ದವು ಆದರೆ ಇಂದಿನ ಜಗತ್ತು ಹಬ್ಬ ಹರಿದಿನಗಳನ್ನು ಮಾಡುವುದು ಕೇವಲ ತೋರಿಕೆಗಾಗಿ ಮಾತ್ರ, ಆಚರಣೆ ಮಾಡುವುದು ನಿಜವೇ ಆದರೂ ಆಚರಣೆಯ ಹಿಂದಿನ ಉದ್ದೇಶ ಏನು? ಎಂಬುದನ್ನು ಯಾರೊಬ್ಬರೂ ಯೋಚಿಸುವುದಿಲ್ಲ ಅದೇ ನಿಟ್ಟಿನಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯು ಸಹ ಅಂತಹ ದಾರಿದ್ರ್ಯ ವ್ಯವಸ್ಥೆಗೆ ಸಿಲುಕಿ ಕಡೆಗಣನೆಗೂ ಒಳಗಾಗಿದ್ದಾಳೆ. ಆ ಒಂದು ವಿಷದ ಕುರಿತು ಇಲ್ಲಿ ಪ್ರಸ್ತಾಪಿಸಲಾಗಿದೆ. ಈ ಲೇಖನದಲ್ಲಿ ನಾನು ಹೇಳುವುದು ಇಷ್ಟೇ, ಸಮಾಜದ ಸಂಕೋಲೆಯಲ್ಲಿ ಬದುಕುತ್ತಿರುವ ಮಹಿಳೆಯೊಬ್ಬಳು ಮತ್ತೊಂದು ಮದುವೆಯಾಗಲು ಹೊರಟರೆ ಅವಳಿಗೆ ಎದುರಾಗುವ ಮುಖಗಳು ಹಲವಾರು ಹಾಗೂ ಸಂಪ್ರದಾಯ ಪದ್ಧತಿಗೆ ಅವಳನ್ನು ಒಳಪಡಿಸಿ ಕಬ್ಬಿನಂತೆ ಹಿಂಡಿದ್ದು ಉಂಟು! ಈ ಕಾರಣದಿಂದ ಅವಳು ಸಹ ಮರು ದಾಂಪತ್ಯಕ್ಕೆ ಅಣಿಯಾದರೆ, ಗಂಡು ಜಾತಿಗೆ ಯಾವೆಲ್ಲ ಸಂಕಷ್ಟಗಳು ಬರುತ್ತವೆ ಎಂದು ತಿಳಿಯಪಡಿಸಲು ಮುಂದಾಗುತ್ತಾಳೆ. ಅದೇ ಪುರುಷ ಮದುವೆಯಾಗಲು ಹೊರಟರೆ ಅವನಿಗೆ ಯಾವುದೇ ನಿಬಂಧನೆಗಳು ಇರುವುದಿಲ್ಲ ಏಕೆಂದರೆ ಸ್ತ್ರಿ ಮತ್ತು ಪುರುಷ ಲಿಂಗ ತಾರತಮ್ಯ ಸಮಾಜದಲ್ಲಿ ಎದ್ದು ಕಾಣುವುದು ಸರ್ವೆ ಸಾಮಾನ್ಯವಾಗಿದೆ. ಗಂಡು ಹುಟ್ಟಿದರೆ ಔತಣಕೂಟ ಏರ್ಪಡಿಸಿ ಸಂಭ್ರಮಿಸುವುದು, ಅದೇ ಹೆಣ್ಣು ಹುಟ್ಟಿದರೆ ಸಕ್ಕರೆ ಕೊಟ್ಟು ಸುಮ್ಮನಾಗುವ ನಮ್ಮ ಜನರ ಮನಸ್ಥಿತಿ ಊಟ, ಉಪಚಾರದಲ್ಲಿಯೇ ತಾರತಮ್ಯ ತೋರುವ ನಮ್ಮ ಕುಟುಂಬಗಳು ಸ್ತ್ರಿ ಮತ್ತು ಪುರುಷ ಎಂದು ತಾರತಮ್ಯ ತೂರದಿಹರೇ? ಹಾ! ನಿಜವಾಗಿಯೂ ತೋರುತ್ತಾರೆ. ಈ ಒಂದು ಪ್ರಧಾನ ಕಾರಣದಿಂದ ಹೆಣ್ಣು ತನ್ನನ್ನು ಹತ್ತಿಕ್ಕುವ ಜನರ ಮಧ್ಯೆ ತಾನೂ ನಿರ್ಭಯಳಾಗಿ ಬದುಕಲು ಕಟು ಧೈರ್ಯ ಮಾಡಿ ಮತ್ತೊಂದು ಮದುವೆಯಾಗಲು ಹೊರಡುತ್ತಾಳೆ. ಒಬ್ಬ ಸ್ತ್ರಿಯಾಗಿ ಅವಳು ಮಾಡುವ ಉದ್ದೇಶ ಇಷ್ಟೇ ,ಗಂಡು ಜಾತಿಗೆ ಕಷ್ಟ ಕೊಡಬೇಕು ಎಂದೇನಲ್ಲ ಬದಲಾಗಿ ತಾನೂ ಒಬ್ಬ ಮಹಿಳೆಯಾಗಿ ಅನುಭವಿಸಿದ ಎಲ್ಲಾ ಕಷ್ಟಗಳು ಪುರುಷ ಎಂಬುವನಿಗೆ ಅರ್ಥವಾಗಲಿ ಎಂಬ ಸಣ್ಣ ನಿಲುವಿಗಾಗಿ. ತಾಯಿಯಾಗಿ ಜಗತ್ತಿನ ದುಡಿಮೆ ಇಲ್ಲದ ಉದ್ಯೋಗಿಯಾಗಿ ಕುಟುಂಬವನ್ನು ನಡೆಸುವ ಸಾರಥಿಯಾಗಿ ಅವಳು ಮಾಡುವ ಕಾರ್ಯ ಸಾಧನೆ ಮತ್ತಾವ ವ್ಯಕ್ತಿಯು ಮಾಡಲು ಸಾಧ್ಯವಿಲ್ಲ. ಹೆಣ್ಣು ಪಶ್ಚಿಮಾತ್ಯ ಸಂಸ್ಕೃತಿ ಅನುಸರಿಸಿ ಕೆಟ್ಟು ಹೋಗಿದ್ದಾಳೆ ಎಂದು ಪಿಸುಗುಡುವ ನಮ್ಮ ಸಮಾಜ ನಮ್ಮ ಸಂಸ್ಕೃತಿಯ ಬೀಜವನ್ನು ಬಿತ್ತನೆ ಮಾಡದಿರುವುದೇ ದುರಂತದ ಸಂಗತಿ ಆಗಿರಬಹುದು, ಏಕೆಂದರೆ ರಾತ್ರಿ ಧರಿಸುವ ಪಶ್ಚಿಮಾತ್ಯ ಉಡುಪು ಆ ‘ನೈಟಿ’ ಇಂದು ಸಂತೆ, ಬೀದಿ, ಶಾಪ್, ದೇವ ಮಂದಿರ, ಮುಂತಾದ ಕಡೆಯಲ್ಲಿ ಧರಿಸಿ ವ್ಯವಹಾರ,ವ್ಯಾಪಾರ ಮಾಡುವುದು ನಮ್ಮ ಸಂಸ್ಕೃತಿಗೆ ಎಷ್ಟು ಶ್ರೇಯಸ್ಸು ಎಂಬುದನ್ನು ಅವರೇ ಚಿಂತಿಸಬೇಕು ಅಷ್ಟೇ. ಇಲ್ಲಿ ಹೆಣ್ಣಿನ ತಪ್ಪು ಮಾತ್ರ ಇಲ್ಲ ಬದಲಾಗಿ ಗಂಡಿನ ತಪ್ಪು ಇದೆ ಮನೆಯ ಯಜಮಾನನಾದ ಅವನು ಮನೆಯ ಎಲ್ಲ ಸದಸ್ಯರಿಗೂ ಸಂಸ್ಕೃತಿ, ರೂಢಿ, ಸಂಪ್ರದಾಯದ ಬಗ್ಗೆ ಅರಿವು ಮೂಡಿಸಬೇಕಾದುದು ಅವನ ಕರ್ತವ್ಯ. ಇಲ್ಲವಾದಲ್ಲಿ ಸಂಸಾರದಲ್ಲಿ ಕಲಹಗಳು ಮೂಡುವುದು ಖಂಡಿತ ಏಕೆಂದರೆ ‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ನಮ್ಮ ಹಿರಿಯರ ಮಾತು ನೆನಪಾಗುವುದು ಖಂಡಿತ. ನಿಬಂಧನೆಗಳು ಇದ್ದಾಗಲೇ ಸಂಸ್ಕೃತಿಯು ಬೆಳೆಯಲು ಸಹಕಾರಿಯಾಗುತ್ತದೆ ಮತ್ತು ನಡೆನುಡಿಯಲ್ಲಿಯೂ ಬದಲಾವಣೆ ಕಾಣಬಹುದು ಇಲ್ಲವಾದರೆ ಮುಂದಿನ ಪೀಳಿಗೆಗೆ ಸಂಸ್ಕೃತಿ ಹೀಗಿತ್ತು ಎಂಬುದನ್ನು ಹೇಳಿಕೊಡುವ ವಿಪರ್ಯಾಸವು ಬರಬಹುದು. ಇಲ್ಲಿ ಬರೆಯುತ್ತಿರುವ ನಾನು ಸ್ತ್ರಿ ಪರ ವಾದಿಯಲ್ಲ ಬದಲಾಗಿ ವಾಸ್ತವ ಪ್ರಪಂಚ ಅಥವಾ ವಾಸ್ತವ ಜಗತ್ತು ಏನಿದೆ ಎಂಬುದನ್ನು ಅರ್ಥ ಮಾಡಿಸುವುದು ಮುಖ್ಯವಾದ ಪ್ರಧಾನ ಅಂಶ. ಈ ಲೇಖನವನ್ನು ಬರೆಯಲು ಪ್ರಧಾನವಾಗಿ ನನಗೆ ಸ್ಪೂರ್ತಿದಾಯಕವಾದರು ಸ್ತ್ರೀ ಸಂವೇದನೆ ಸ್ತ್ರೀ ಶೋಷಣೆ ವಿರುದ್ಧ ನಿಂತು ಹೋರಾಡಿದ ಜ್ರುಡಿ ಬ್ರ್ಯಾಡಿ ಎಂಬ ಇಂಗ್ಲಿಷ್ ಲೇಖಕಿ ಇವರ WHY I WANT A WIFE ಎಂಬ ಲೇಖನದಲ್ಲಿ ಹೆಣ್ಣಿನ ಮೇಲೆ ಆಗುತ್ತಿರುವ ಶೋಷಣೆಯ ಕುರಿತು ಅವರು ಧ್ವನಿ ಎತ್ತಿದ್ದಾರೆ. ತಾನುಪಟ್ಟ ಕಷ್ಟ, ಅಸೂಯೆ,ಅಸಮಾಧಾನ, ಕಿರುಕುಳದಿಂದ ಮುಕ್ತಿ ಹೊಂದಲು ತಾನೂ ಇನ್ನೊಂದು ಮದುವೆಯಾಗಲು ಸಿದ್ಧವಾಗುತ್ತಾಳೆ ಇಲ್ಲಿ ಸಿದ್ಧವಾಗುವ ಪ್ರಕ್ರಿಯೆಗೆ ಒಂದು ಆಕ್ರಂದನವಿದೆ ಅಳುಕಿದೆ ಮನಸ್ಸಿನ ನಿವೇದನೆಗಳಿವೆ ಆ ನಿವೇದನೆಯ ಸ್ವರೂಪವೇ ಸ್ತ್ರೀ ಮತ್ತು ಪುರುಷ ಎಂಬ ನಮ್ಮ ತರತಮ್ಯ ವ್ಯವಸ್ಥೆ. ಇದರಿಂದ ತಾನೂ ಸಹ ಸಮಾನವಾದ ಅವಕಾಶಗಳನ್ನು ಪಡೆಯಲು ವಿವಾಹವಾದ ವ್ಯಕ್ತಿಯನ್ನು ಕೈ ಬಿಟ್ಟು ಇಲ್ಲವೇ ಅದೇ ವ್ಯಕ್ತಿಯನ್ನು ಪುರುಷ ದೃಷ್ಟಿಕೋನ ಇಟ್ಟುಕೊಂಡು ಮತ್ತೊಂದು ಮದುವೆಯಾಗಲು ನಿರ್ಧರಿಸುತ್ತಾಳೆ. ಇಲ್ಲಿ ಮದುವೆಯಾಗುವುದರ ನಿಲುವು ಒಂದೇ ಹೆಣ್ಣಿನ ಭಾವನೆಗಳಿಗೂ ಬೆಲೆ ಇದೆ ಕೇವಲ ಕೆಲಸಕ್ಕೆ ಬಳಸಿಕೊಂಡು ಬಿಸಾಡುವ ವಸ್ತುವಲ್ಲ ಅವಳು ಎಂಬುದನ್ನು ಮನುಕುಲ ಅರಿಯಬೇಕಾಗಿದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಲಭ್ಯವಿಲ್ಲ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಪ್ರಚಲಿತ ಸಮಾಜದಲ್ಲಿರುವ ಸ್ತ್ರೀ ಮತ್ತು ಪುರುಷರಿಗೆ ಹಾಗೂ ಸಮಾನ ಮನಸ್ಕರ ಉಳ್ಳ ಸಹು ಹೃದಯರಿಗೆ ಇಂತಹ ಲೇಖನಗಳು ಸರಿಯಾದ ಮಾಹಿತಿ ನೀಡಿ ಸಮಾಜದಲ್ಲಿರುವ ಅನಿಷ್ಟ ಪದ್ದತಿ ಪುರುಷ ಮೇಲು ಸ್ತ್ರೀ ಕನಿಷ್ಟ ಎಂಬ ಭಾವವನ್ನು ಕಡಿಮೆ ಮಾಡುತ್ತವೆ.ಮತ್ತು ಇತರ ರೀತಿಯಲ್ಲಿ ಕಂಡುಬರುವ ಮಹಿಳಾ ಶೋಷಣೆಯನ್ನು ನಿಯಂತ್ರಿಸಿ ಅವುಗಳನ್ನು ನಿವಾರಣೆ ಮಾಡುವ ಪರಿಹಾರೋಪಾಯವನ್ನು ಇಂತಹ ಕೃತಿಗಳಿಂದ ಸಮಗ್ರವಾಗಿ ತಿಳಿಯಲು ಅನುವು ಮಾಡಿ ಕೂಡುತ್ತವೆ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

7
Votes
206
Views
6 Months
Since posted

Voting Closed!

Scroll to Top