ಪುಸ್ತಕದ ಶೀರ್ಷಿಕೆ: ಹೇಳಿ ಹೋಗು ಕಾರಣ
ಪುಸ್ತಕದ ಲೇಖಕರು: ರವಿ ಬೆಳಗೆರೆ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಿದ್ಯಾ. ಹೆಚ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ರವಿ ಬೆಳಗೆರೆಯವರ 'ಹೇಳಿ ಹೋಗು ಕಾರಣ' ಪುಸ್ತಕವು ಪ್ರೀತಿ, ಪ್ರಣಯ, ಯೌವ್ವನದ ಚಂಚಲತೆಗಳ ಉನ್ಮಾದವನ್ನು ಓದುಗರಿಗೆ ಸೇವಿಸುತ್ತಾ ಹೋಗುತ್ತದೆ. ಕಥಾ ನಾಯಕ ಹಿಮವಂತ, ಸರಳ ವ್ಯಕ್ತಿ, ನಂಬಿಕಸ್ಥ, ಏನ್ನನಾದರು ಸಾಧಿಸುವ ಛಲಗಾರ ಹಾಗೂ ಮುಖ್ಯವಾಗಿ ಕಥಾ ನಾಯಕಿ 'ಪ್ರಾರ್ಥನಾ'ಳ ಪ್ರೇಮಿ ಹಾಗೂ ಸಂಗಾತಿ. ಇಬ್ಬರು ಶಿವಮೊಗ್ಗದ ಶಿವಮೂರ್ತಿ ಸರ್ಕಲ್ನ ಪುಟ್ಟ ಮನೆಯಲ್ಲಿ ವಾಸಿಸುತ್ತಿರುತ್ತಾರೆ. ಅವಳಿಗೆ ಡಾಕ್ಟರ್ ಆಗುವ ಕನಸು, ಆ ಕನಸನ್ನು ಈಡೇರಿಸುವುದು ಹಿಮವಂತನ ಕನಸು ಹಾಗೂ ಜವಾಬ್ದಾರಿ. ಅವನು, ಮೊದಲೇ ಹೇಳಿದಂತೆ ನಂಬಿಕಸ್ಥನಾದ್ದರಿಂದ, ಅವನು ಮನೆಯ ಮಾಲಿಕರು ಹಿಮವಂತನಿಗೆ ಕೆಲಸ ಕೊಟ್ಟರು. ಅದರಿಂದ ಬಂದ ಹಣದಲ್ಲಿ ಪ್ರಾರ್ಥನಾಳನ್ನು ಕಾಲೇಜಿಗೆ ಸೇರಿಸುತ್ತಾನೆ. ಕಾಲೇಜಿನಲ್ಲಿ ಅವಳಿಗೆ 'ಊರ್ಮಿಳ' ಹಾಗೂ 'ದೇಬ್ನಾಥ್' ಎಂಬ ಇಬ್ಬರ ಸ್ನೇಹವಾಗುತ್ತದೆ. 'ಊರ್ಮಿಳೆ'ಯು ಸಿಟಿ ಹುಡುಗಿ, ಪ್ರಾರ್ಥನಾಳ ವಿರುದ್ಧ ಸ್ವಭಾವದವಳು. ಅವಳಿಗೆ ಯಾರ ಮೇಲು ಪ್ರೀತಿ ಎನ್ನುವುದಾಗಲಿ, ಭಾವನೆ ಎನ್ನುವುದಾಗಲಿ ಇಲ್ಲ. ಇನ್ನೂ 'ದೇಬ್ನಾಥ್' ಶ್ರೀಮಂತ, ಮೂಲತಃ ಪಶ್ಚಿಮ ಬಂಗಾಳದವ. ಅವನಿಗೆ ದಿನಕ್ಕೊಬ್ಬರ ಮೇಲೆ ಮೋಹವಾಗುತ್ತಿರುತ್ತದೆ. ಆ ಮೋಹದ ಬಲೆಗೆ ಪ್ರಾರ್ಥನಾ ಹೊರತಾಗಲಿಲ್ಲ. 'ದೇಬ್ನಾಥ್'ನ ಜೊತೆಗೆ ಒಡನಾಟ ಹೆಚ್ಚಾಗಿ ಸ್ನೇಹವಾಗಿದ್ದ ಸಂಬಂಧ ಪ್ರೇಮವಾಗಿ ಮಾರ್ಪಾಡಾಗಿ ಎಲ್ಲಾ ಎಲ್ಲೆಗಳನ್ನು ಮೀರಿತ್ತು. ಈ ಮಧ್ಯೆ ಪ್ರಾರ್ಥನಾಳಿಗೆ ಹಿಮವಂತನಿಗೆ ಮೋಸ ಮಾಡುತ್ತಿರುವ ಪಾಪಪ್ರಜ್ಞೆ ಕಾಡಲು ಶುರುವಾಗಿ ಹಿಮವಂತನಿಗೆ ಎಲ್ಲಾ ವಿಷಯವನ್ನು ಹೇಳಲು ಮುಂದಾದಳು. ಅವನನ್ನು ಭೇಟಿ ಮಾಡಿ 'ಹಿಮೂ, ನೀನು ದೇವರು, ನಾನು ದೇವರನ್ನು ಪ್ರೀತಿಸಲು ಅಥವಾ ಮದುವೆಯಾಗಲು ಸಾಧ್ಯವಿಲ್ಲ, ಭಕ್ತಿಯಿಂದ ಆರಾಧಿಸಲಷ್ಟೆ ಆಗುವುದು' ಎಂದು ಹೇಳಿ ಹಿಮವಂತನ ಜೊತೆ ಸಂಬಂಧ ಕಳಚಿ, ದೇಬೂವಿನ ತೆಕ್ಕೆಗೆ ಬಿದ್ದಳು. ಹಿಮವಂತನು ಪ್ರಾರ್ಥನಾಳಿಗೋಸ್ಕರವೇ ಒಂದು ಪ್ರಪಂಚವನ್ನು ನಿರ್ಮಿಸಿ ಅವಳನ್ನು ರಾಣಿಯಂತೆ ನೋಡಿಕೊಂಡಿದಕ್ಕೆ ಅವನಿಗೆ ಸಿಕ್ಕ ಉಡುಗೊರೆ 'ವಂಚನೆ'. ಮುಂದೆ, ಅವಳ ವಂಚನೆಯಿಂದ ಆದ ನೋವನ್ನು ತಾಳಲಾರದೆ ಸೇಡು ತೀರಿಸಿಕೊಳ್ಳಲು ಹಿಮವಂತನು 'ದೇಬ್ನಾಥ್'ನ ಮೇಲೆ ವಾಮಾಚಾರಗಳ ಪ್ರಯೋಗ ಮಾಡುತ್ತಾನೆ. ಈ ವಿಷಯವನ್ನು 'ಊರ್ಮಿಳೆ' ಕಂಡುಹಿಡಿದು ಕೊಳ್ಳುತ್ತಾಳೆ. ಈ ವಾಮಾಚಾರ ಪ್ರಯೋಗದಿಂದ ಈ ನಾಲ್ಕು ಜನರ ಜೀವನ ಏನಾಗುತ್ತದೆ ಎನ್ನುವುದು ಪುಸ್ತಕವನ್ನು ಓದಿ ತಿಳಿಯಬೇಕಿದೆ. ಪ್ರಪಂಚದಲ್ಲಿ ಪ್ರಾರ್ಥನಾ ಎನ್ನುವ ಹುಡುಗಿಯನ್ನು ಬಿಟ್ಟರೆ, ಬೇರಾರು ಇಲ್ಲ ಎನ್ನುವ ಹಿಮವಂತ ಅವಳಿಗೆ ನೋವನ್ನುಂಟು ಮಾಡುತ್ತಾನೆ. ಅಷ್ಟು ಪ್ರೀತಿ ಕೊಟ್ಟ ಹಿಮವಂತನಿಗೆ ಪ್ರಾರ್ಥನಾ ವಂಚಿಸುತ್ತಾಳೆ. ಈ ನಿಟ್ಟಿನಲ್ಲಿ ನೋಡಿದರೆ, ಇಬ್ಬರು ಮಾಡಿರುವುದು ತಪ್ಪು, ಆದರೆ ಹಿಮವಂತ ಎಂದಿಗೂ ಪ್ರಾರ್ಥನಾಳ ಜಾಗಕ್ಕೆ ಬೇರಾವ ಹುಡುಗಿಯನ್ನು ನೆನೆಸಿಕೊಂಡಿರಲಿಲ್ಲ. ಹಾಗಾಗಿ ಓದುಗರಿಗೆ ಪ್ರಾರ್ಥನಾಳ ಮೇಲೆ ಸಿಟ್ಟು ಬರುವುದು ಸಹಜ. ಹಿಮವಂತನು ಕೂಡ ನೇರವಾಗಿ ಅವಳಿಗೆ ಶಿಕ್ಷೆ ಕೊಡುವ ಬದಲು ದೇಬೂವಿಗೆ ಶಿಕ್ಷಿಸುತ್ತಾನೆ. ಹೀಗೆ ನೋಡಿದಾಗ ಇಬ್ಬರು ಒಂದು ರೀತಿಯಲ್ಲಿ ತಪ್ಪಿತಸ್ಥರೆ. ಒಟ್ಟಿನಲ್ಲಿ ಈ ಪುಸ್ತಕವು ಓದುಗರಿಗೆ ಹಲವು ಮಜಲುಗಳಲ್ಲಿ ಮನರಂಜನೆ ನೀಡುತ್ತದೆ. ಅಷ್ಟೇ ಅಲ್ಲದೆ ಪುಸ್ತಕವನ್ನು ಓದುತ್ತಿದ್ದಂತೆ ಎಲ್ಲಾ ಪಾತ್ರಗಳಿಗೂ ಭಾವನಾತ್ಮಕವಾಗಿ ಸಂಬಂಧ ಬೆಳೆದು ಕೊಳ್ಳುತ್ತದೆ. ಪುಸ್ತಕದ ಲೇಖಕರು, ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ಜವಾಬ್ದಾರಿಯನ್ನು ನೀಡಿ ನ್ಯಾಯ ಒದಗಿಸಿದ್ದಾರೆ. ಕಥೆಯು ಎಲ್ಲೂ ಬೇಸರವಾಗದೆ ಮುಂದೇನಾಗುತ್ತದೆ ಎಂಬ ಕುತೂಹಲವನ್ನು ಕಾಪಾಡಿಕೂಳ್ಳುವಂತೆ ಇರಿಸಿದ್ದಾರೆ. ಇನ್ನೂ ಲೇಖಕರ ಭಾಷಾ ಭಂಡಾರದ ಬಗ್ಗೆ ಯಾರು ಕೂಡ ತುಟಿ ಎರಡು ಮಾಡಲು ಎಲ್ಲೂ ಅವಕಾಶ ನೀಡಿಲ್ಲ. ಎಲ್ಲಾ ವಿಷಯವನ್ನು ಅಚ್ಚುಕಟ್ಟಾಗಿ ಹಾಗೂ ಇನ್ನೂ ಸುಂದರವಾಗಿ ಬೆರೆಯಲು ಸಾಧ್ಯವಿಲ್ಲವೆಂಬಂತೆ ಬರೆದಿದ್ದಾರೆ. ಈ ಪುಸ್ತಕವು ಕನ್ನಡದಲ್ಲಿ ಓದಲೇಬೇಕಾದ ಪುಸ್ತಕಗಳಲ್ಲಿ ಒಂದು ಹಾಗೂ ನನ್ನ ಸಾರ್ವಕಾಲಿಕ ನೆಚ್ಚಿನ ಪುಸ್ತಕ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಹೇಳಿ ಹೋಗು ಕಾರಣ' - ಈ ಇಡೀ ಪುಸ್ತಕವೆ ಒಂದು ಅದ್ಭುತ. ಎಲ್ಲಾ ಕ್ಷಣಗಳು ರೋಮಾಂಚನ ಕಾರಿಯಾಗಿ ಮೂಡಿ ಬಂದಿದೆ. ನನಗೆ ಈ ಪುಸ್ತಕದಲ್ಲಿ ಎರಡು ಸಂಗತಿಗಳು ಬಹಳ ಇಷ್ಟ- ೧.ದೇಬ್ನಾಥ್ನಿಗೆ ದಿನಕ್ಕೊಮ್ಮೆ ಮೇಲೆ ಮೋಹವಾದರೂ ಸಹ, ಅವನು ಪ್ರಾರ್ಥನಾಳನ್ನು ಪ್ರೀತಿಸಲು ಶುರು ಮಾಡಿದ ಮೇಲೆ, ಅವಳನ್ನು ಬಿಟ್ಟು ಮತ್ಯಾರನ್ನು ಅವನು ಬೇರೆ ದೃಷ್ಟಿಯಿಂದ ನೋಡುವುದಿಲ್ಲ. ಅವನು ಯಾವುದೆ ಆಸ್ತಿ-ಅಂತಸ್ತನ್ನು ಲೆಕ್ಕಿಸದೆ ಅವಳನ್ನು ನಿರ್ಮಲವಾಗಿ ಪ್ರೀತಿಸುತ್ತಾನೆ. ಅವನ ಎಷ್ಟೋ ದುಶ್ಚಟಗಳು ಪ್ರಾರ್ಥನಾಳಿಂದ ಕಡಿಮೆಯಾಗಿರುತ್ತದೆ ಹಾಗೂ ಇನ್ನೂ ಕೆಲವು ಸಂಪೊರ್ಣವಾಗಿ ಮಾಯಾ ವಾಗಿರುತ್ತದೆ. ಪ್ರಾರ್ಥನಾಳನ್ನು ಅವನು ಅವನ ಅಪ್ಪ -ಅಮ್ಮನಿಗೂ ಪರಿಚಯಿಸಲು ಹಿಂದು-ಮುಂದು ನೋಡುವುದಿಲ್ಲ. ಹಿಮವಂತನು ಪ್ರಾರ್ಥನಾಳ ಮೇಲಿನ ಸೇಡನ್ನು ಕೋಪವನ್ನು ದೇಬೂವಿನ ಮೇಲೆ ತೋರಿಸಿದರು, ದೇಬೂ ನರಳುತ್ತಿದ್ದರು ಸಹ ಅವನು ಪ್ರಾರ್ಥನಾಳನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ಅವನು ಈ ನಿಷ್ಕಲ್ಮಶ ಪ್ರೀತಿಗೆ ಕೂಂಚ ಮನೆ ಸೋಲಬೇಕಾಯಿತು. ೨. ನಿಮ್ಮ 'ಊರ್ಮಿಳೆ'ಯು ಯಾರೆಂದರೆ ಯಾರಿಗು ಮನಸೋಲದವಳು, ಹಿಮವಂತನ ಒಳ್ಳೆಯತನಕ್ಕೆ ಮನಸೋಲದೆ ಇರಲಾಗಲಿಲ್ಲ. ಅಷ್ಟೇ ಅಲ್ಲದೆ ಅವಳು ಅವಳಿಗೆ ತಿಳಿಯದೆ ಹಲವು ಬದಲಾವಣೆಗಳನ್ನು ಮಾಡಿಕೊಂಡಿರುತ್ತಾಳೆ. ಹಿಮವಂತನೆಡೆಗೆ ಮನಸೋಲುವುದರ ಜೊತೆಗೆ, ಅವಳು ತನ್ನ ಸಿಗರೇಟಿಗೆ ಅವಳ ತುಟಿಯ ರುಚಿ ತೋರಿಸಿ ದಿನಗಳೇ ಕಳೆದಿರುತ್ತದೆ. ಮುಂಜಾನೆ ಎದ್ದು ದೇವರನ್ನು ನೆನೆಸಿಕೊಂಡು ಭಕ್ತಿಯಿಂದ ಕೈ ಮುಗಿಯುವುದನ್ನು ರೂಢಿಸಿಕೊಂಡಿರುತ್ತಾಳೆ. ನಂತರ ಅವಳು ಹಿಮವಂತನ ಜೊತೆಯಾಗುತ್ತಾಳೆ. ಅಷ್ಟೇ ಅಲ್ಲದೆ 'ಊರ್ಮಿಳೆ' ಯು ನನಗೆ ತುಂಬಾ ಇಷ್ಟವಾದ ಪಾತ್ರವಾಗಿ ಉಳಿದಿದೆ. ಈ ಮೇಲಿನ ಎರಡು ವಿಷಯಗಳು ನನ್ನ ಮನಸೆಳೆದವು.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಈ ಪುಸ್ತಕವು ಎಲ್ಲಾ ವರ್ಗದವರಿಗೂ ಅಂದರೆ, ಪುಸ್ತಕಾಸಕ್ತರಿಗು ಹಾಗು ಪುಸ್ತಕಗಳನ್ನು ಇಷ್ಟ ಪಡದವರಿಗೂ ಇಷ್ಟವಾಗುತ್ತದೆ. ಮುಖ್ಯವಾಗಿ ಪ್ರೀತಿಯಲ್ಲಿ ಬಿದ್ದು ಮುಳುಗಿರುವ ವರಿಗೆ ಹಾಗೂ ಅದರಿಂದ ಸುಧಾರಿಸಿಕೊಳ್ಳುತ್ತಿರುವವರಿಗೆ ಒಳ್ಳೆಯ ಪುಸ್ತಕ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.