Submission 1939

ಪುಸ್ತಕದ ಶೀರ್ಷಿಕೆ: ಶಿವನ ಡಂಗುರ

ಪುಸ್ತಕದ ಲೇಖಕರು: ಚಂದ್ರಶೇಖರ ಕಂಬಾರ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಿನಾಯಕ ಲ್ಯಾವಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಚಂದ್ರಶೇಖರ ಕಂಬಾರರು ಕನ್ನಡ ಸಾಹಿತ್ಯವನ್ನು ನಾಟಕ ರೂಪದಲ್ಲಿ, ಜನಪದ ಕಥೆಯ ಮೂಲಕ ಹೇಳುತ್ತಿದ್ದರು. ಆದರೆ ಈ ಕಾದಂಬರಿ ಮೂಲಕ ಸಮಕಾಲೀನ ಸಾಹಿತ್ಯ ಮತ್ತು ಹಳ್ಳಿಗಳ ಬದಲಾವಣೆಗಳನ್ನು ಮನಮುಟ್ಟುವಂತೆ ಹೇಳಿದ್ದಾರೆ. ಹಳ್ಳಿ ಅಂದ ಮೇಲೆ ಗೌಡರ ದಬ್ಬಾಳಿಕೆ ಇರಲೇ ಬೇಕು. ಶಿವಾಪುರದಲ್ಲಿ ಕೂಡ ಬರಮೇಗೌಡ ಹಾಗೆ ಇದ್ದು, ಯೌವ್ವನ ಅವಧಿಯಲ್ಲಿ ಎಲ್ಲಾ ಹೆಂಗಸರ ದೇಹದ ರುಚಿ ನೋಡಿ, ಕೊನೆಗಾಲದ ಅವಧಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಇತ್ತ , ನಾಯಕ ಚೆಂಬಸ ಮತ್ತು ಶಾರವ್ವ ಪಾತ್ರಗಳ ಮೂಲಕ ಅವರ ಪ್ರೇಮ , ಅಗಲುವಿಕೆ, ವಿರಹದ ನೋವುಗಳನ್ನು ಕಂಬಾರರು ಮನಕಲಕುವಹಾಗೆ ಬರೆದಿದ್ದಾರೆ. ಈರಪ್ಪನ ಪಾತ್ರವನ್ನು ಹೆಸರಿಗೆ ತಕ್ಕ ಹಾಗೆ ಕಥೆ ಅಲ್ಲಿ ಚಿತ್ರಿಸಿದ್ದಾರೆ. ದೇವದಾಸಿ ಪದ್ಧತಿ ಮತ್ತು ಅದರ ಆಗು ಹೋಗುಗಳ ಬಗ್ಗೆ ಸೂಕ್ಷ್ಮ ಉಲ್ಲೇಖವಿದೆ. ಕೊನೆಗೆ ಇಷ್ಟೆಲ್ಲಾ ಮಾಡಿದ ಈರಪ್ಪ ಅಂತ್ಯಕ್ಕೆ ಲೇಖಕರು ಕಂಡು ಕೊಟ್ಟಿಲ್ಲ. ಮಹಾದೇವಿ ಪಾತ್ರದ ಮೂಲಕ ದಂಪತಿಗಳನ್ನು ಒಟ್ಟು ಮಾಡಿದ್ದು, ಮಹಾದೇವಿಯ ಜಾಣ್ಮೆ ಅನ್ನು ತುಂಬ ಮನೋಜ್ಞ ಆಗಿ ಚಿತ್ರಿಸಿದ್ದಾರೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಚೆಂಬಸ ಮತ್ತು ಶಾರವ್ವನ ಪ್ರೇಮಕಥೆ, ಓಂ ನಮಃ ಶಿವಯಾನ ಭಕ್ತಿ, ಮಹಾದೇವಿಯ ಓಟ..

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಲಭ್ಯವಿಲ್ಲ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

3
Votes
94
Views
3 Months
Since posted

Voting Closed!

Scroll to Top