Submission 1913

ಪುಸ್ತಕದ ಶೀರ್ಷಿಕೆ: ಇರೊಮ್ ಶರ್ಮಿಳಾ ಹಸಿವು ಗೆದ್ದ ಹುಡುಗಿ

ಪುಸ್ತಕದ ಲೇಖಕರು: ಸಂತೋಷ ಕುಮಾರ ಮೆಹೆಂದಳೆ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಶ್ರೀರಾಮ ಸುರೇಶ ಹೆಗಡೆ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಈ ಪುಸ್ತಕವು ಮಣಿಪುರದ ಉಕ್ಕಿನ ಮಹಿಳೆ ಖ್ಯಾತಿಯ ಇರೋಮ್ ಶರ್ಮಿಳಾ ಅವರ ಬಗ್ಗೆ ಪ್ರತಿಧ್ವನಿಸುತ್ತದೆ.ತುಂಬಾ ಚೆಂದದ ಹೆಣ್ಣುಮಗಳು ನೂರಾರು ಕವನಗಳನ್ನು ಬರೆದು ಹೆಸರಾದ ಶರ್ಮಿಳಾ ಬೇಕಿದ್ದರೆ ಎಲ್ಲರಂತೆ ಸುಖವಾಗಿ ಜೀವನ ಮಾಡಿಕೊಂಡು ಇರಬಹುದಿತ್ತು ,ಆದರೆ ಆಕೆ ಬದುಕನ್ನು ಮಾನವ ಹಕ್ಕು ಹೋರಾಟ ಗಾರ್ತಿಯಾಗಿ ಅದರಲ್ಲೂ ಮಣಿಪುರ ರಾಜ್ಯದಲ್ಲಿ ವಿಶೇಷ ಶಸ್ತ್ರಾಸ್ತ್ರ ಕಾಯಿದೆ ಅಧಿಕಾರ ಬಳಸಿ ಮಿಲಿಟರಿ (ಅಸ್ಸಾಂ ರೈಫಲ್ಸ್) ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ಸಲುವಾಗಿ 2000 ನೆಯ ಇಸವಿ ನವೆಂಬರ್ 2 ರಂದು ಶುರುವಾದ ಉಪವಾಸ ಸತ್ಯಾಗ್ರಹ ಹೋರಾಟ . ಕವಿ ಮನಸ್ಸಿನ ಸುಂದರ ಇರೋಮ್ ಶರ್ಮಿಳಾ ಯೌವನವನ್ನು ಇತರರಂತೆ ಕುಟುಂಬಕ್ಕೂ,ಸ್ವಂತ ಸುಖಕ್ಕೂ ಮೀಸಲಿಡದೆ ನೇರವಾಗಿ ಸಮಾಜ ಮುಖಿಯಾಗಿ ನಿಂತು ಗಾಂಧಿಗಿರಿ ಹಿಡಿದವಳು. ಅವಳ ಜೀವನದ ಯೌವ್ವನದ ಮೊದಲ ಹದಿನೈದು ವರ್ಷಗಳನ್ನು ಈಗಾಗಲೇ ಅನಾಮತ್ತಾಗಿ ಉಪವಾಸ ಕೂತ ಜೈಲಿನ ಸರಳುಗಳ ಹಿಂದಿನ ಕಥೆ ಇದಾಗಿದೆ. ಸತತ ಬಂದಿಯಾಗುತ್ತ ಉಪವಾಸ ಬಿದ್ದಿದ್ದಳು. ಸರಕಾರವೂ ಜೀವವನ್ನು ಬಲಿಕೊಡಲು ಸಿದ್ದವಿಲ್ಲದೆ ನಳಿಕೆ ಮೂಲಕ ಆಹಾರ ಕೊಡುತ್ತಿತ್ತು. ಜವಾಹರ್ ಲಾಲ್ ನೆಹರೂ ಆಸ್ಪತ್ರೆಯಲ್ಲಿ ಬಂಧಿಯಾಗಿದ್ದ ಅವಳಿಗೆ ಭೇಟಿಯಾಗಿ ವಿಚಾರಿಸಲು ಕೇವಲ 20 ನಿಮಿಷ ಸಂದರ್ಶಕರಿಗೆ ನೀಡಲಾಗುತ್ತಿತ್ತು. ಸ್ತ್ರೀ ಕುಲದ ಹೆಮ್ಮೆಯಾದ ಶರ್ಮಿಳಾ ಅಂತ ಕಣ್ಣಿಗೆ ಕಾಣದೆ ಅಗೋಚರವಾಗಿ ಕಳೆದು ಹೋಗುತ್ತಿರುವ ಅಮ್ಮಂದಿರ ಅಪರೂಪದ ಆತ್ಮಶಕ್ತಿಯ ಪರಿಚಯ ಈ ಪುಸ್ತಕದ ಉದ್ದೇಶ. ನ್ಯಾಯಾಂಗದ ,ಕಾನೂನಿನ ಸಂಕೀರ್ಣತೆಗಳು ಎದ್ದು ಕಾಣುತ್ತವೆ.ಈ ಪುಸ್ತಕವು ಪ್ರಜಾ ಪ್ರಭುತ್ವದಲ್ಲಿ ಅಹಿಂಸಾತ್ಮಕ ಪ್ರತಿಭಟನೆಯ ಮಿತಿಯನ್ನು ವಿಮರ್ಶಿಸುವಂತೆ ಮಾಡುತ್ತದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಶರ್ಮಿಳಾ ಚಾನು ಎಂಬ ಸ್ತ್ರೀ ಕುಲದ ಸ್ಪೂರ್ತಿ ಮಾಲೊಮ್ ಹತ್ಯಾಕಾಂಡ ಐರನ್ ಲೇಡಿ ಆಫ್ ಮಣಿಪುರ

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಸಾಮಾಜಿಕ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು,ಆತ್ಮಚರಿತ್ರೆ ಮತ್ತು ಜೀವನಚರಿತ್ರೆ ಪ್ರಿಯರು,ರಾಜಕೀಯ ಮತ್ತು ಇತಿಹಾಸ ಆಸಕ್ತರಿಗಾಗಿ.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
114
Views
4 Months
Since posted

Voting Closed!

Scroll to Top