ಪುಸ್ತಕದ ಶೀರ್ಷಿಕೆ: ಚಂದ್ರಗಿರಿಯ ತೀರದಲ್ಲಿ
ಪುಸ್ತಕದ ಲೇಖಕರು: ಡಾ| ಸಾರ ಅಬೂಬಕ್ಕರ್
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಿಜಯಾಂಬಿಕ ಹೆಚ್. ವಿ
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ಹೀಗೆ ಬಿ.ಇಡಿ ತರಗತಿಯ ಮದ್ಯಾನದ ಅವಧಿ ಯಾರು ತರಗತಿಯನ್ನು ತೆಗೆದುಕೊಳ್ಳದ ಕಾರಣ, ನನ್ನ ಸ್ನೆಹಿತೆ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಕನ್ನಡ ಮಾಡಿದ್ದಳು. ಅವಳ ಬಿಳಿ ನನಗೆ ಕಾದಂಬರಿ ಕೇಳಲು ಬಹಳ ಕುತೂಹಲ. ಹಾಗಾಗಿ ಬಂದು ಕಾದಂಬರಿ ಹೇಳಲು ತಿಳಿಸಿದೆ. ಅವಳು "ಚಂದ್ರಗಿರಿಯ ತೀರದಲ್ಲಿ" ಕದಂಬರಿ ಹೇಳಿದಳು. ನನ್ನ ಕುತೂಹಲಕ್ಕೆ ಈ ಕಾದಂಬರಿ - ಮುನ್ನುಡಿ ಹಾಕಿತು. ನನ್ನಲ್ಲಿ ಸ್ನೇಹಿತೆ ಬಾಯಿಂದ ಕಾದಂಬರಿ ಕೇಳಿ ಹುಟ್ಟಿದ ಹಲವು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾನು ಈ ಕಾದಂಬರಿಯನ್ನು ಓದಲು ಇಚ್ಚಿಸಿ, ಓದಿದ ನಂತರ ನನ್ನ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡೆ. ವಿಮರ್ಶೆ ಸಾರಾ ಅಬೂಬಕ್ಕ ಅಬೂಬಕ್ಕರ್ ಹೆಣ್ಣು ಮಕ್ಕಳ ಮತ್ತು ಮುಸ್ಲಿಂ ಸಮುದಾಯದ ಸಾಮಾಜಿಕ ಕಳಕಳಿ ಇರುವ ಬರಹಗಾತಿ ಇವರು ಮುಸ್ಲಿಂ ಧರ್ಮದ ಕೆಲವು ಪದ್ಧತಿಗಳ,ಪುರುಷ ಪ್ರಾಬಲ್ಯ ಸಮಾಜದಲ್ಲಿ ಸ್ವತಂತ್ರ ಸ್ವಾವಲಂಬನೆಯಿಂದ ವಂಚಿತಳಾದ ಹೆಣ್ಣು ಮಗಳ ಅಸಹಾಯಕ ಸ್ಥಿತಿಯ ಅನಾವರಣ ಔಚಿತ್ಯ ಪೂರ್ಣವಾಗಿ ಕಾದಂಬರಿಯಲ್ಲಿ ಹೊರಹೊಮ್ಮಿದೆ. ಚಂದ್ರಗಿರಿ ತೀರದಲ್ಲಿ ಕಾದಂಬರಿ ಮನಸ್ಸಿನ ಅಂತರಾಳಕ್ಕೆ ಹೋಕ್ಕಿ ಓದುಗರಲ್ಲಿ ತಾರ್ಕಿಕ ಚಿಂತನೆಗೆ ನೂಕುತ್ತದೆ. ಇದು ಮೂಲತಃ ಮುಸಲ್ಮಾನ ಸಮುದಾಯದ ಹೆಣ್ಣು ಮಕ್ಕಳ ಜೀವನ ದೃಷ್ಟಿಯಿಂದ ಮಾತ್ರವಲ್ಲದೆ, ಸಮಾಜದಲ್ಲಿ ಶೋಷಿತರಾದ ಹೆಣ್ಣು ಮಕ್ಕಳ ಅಸಹಾಯಕತೆಯ ದೃಶ್ಯ ಪದರುಗಳಾಗಿ ಓದುಗರ ಮುಂದೆ ಅನಾವರಣಗೊಳ್ಳುತ್ತದೆ. ದಾಂಪತ್ಯದಲ್ಲಿ ಗಂಡು- ಹೆಣ್ಣು ಪರಸ್ಪರ ಸಾಮರಸ್ಯ, ನಂಬಿಕೆ, ಪ್ರೀತಿ, ಗೌರವ, ವಿಶ್ವಾಸದಿಂದ ಇರುವುದು ಬಹಳಾ ಮುಖ್ಯ. ಈ ಕಾದಂಬರಿಯು ನಾದಿರ ಕಥೆ ನಾಯಕಿ, ನಾಯಕ ರಶೀದ್. ಅವರ ಜೀವನದಲ್ಲಿ ಸ್ವತಹ ತಂದೆಯಿಂದ ಇಬ್ಬರ ದಾಂಪತ್ಯದಲ್ಲಿ ಎದ್ದ ಬಿರುಗಾಳಿಯನ್ನು ಅವಿಸ್ಮರಣೀಯವಾಗಿ ಚಿತ್ರಕರಿಸಿದೆ. ಎಲ್ಲಿ ಪ್ರಮುಖವಾದ ಅಂಶವೇನೆಂದರೆ ಮುಸಲ್ಮಾನ ಪದ್ಧತಿಯಲ್ಲಿದ್ದ "ತಲಾಖ್" (3 ಬಾರಿ ತಲಾಖ್ ನೀಡಿದರೆ ವಿಚ್ಛೇದನ ಪಡೆದಂತೆ ). ನಾದಿರ ತಂದೆಯ ಸ್ಟಾರ್ಥ, ಕ್ರೌರ್ಯ ಮನೋಭಾವದಿಂದ ಅಳಿಯನೊಂದಿಗೆ ನಡೆದ ಸಣ್ಣ ಮನಸ್ತಾಪದಿಂದ ಸ್ವಂತ ಮಗಳ ಜೀವನವನ್ನೇ ಕತ್ತಲಿಗೆ ನೋಕಿತ ಕರುಣಹೀನ ತಂದೆ ಕಾದಂಬರಿಯಲ್ಲಿ ಪುರುಷರ ಪ್ರಧಾನ ಸಾಮಾಜಿಕ ವ್ಯವಸ್ಥೆಯ ಕೇಂದ್ರ ಬಿಂದು. ನಾದಿರ ಹಾಗೂ ರಶೀದ್ ಪರಸ್ಪರ ತಲಖ್ ನೀಡುವಂತೆ ಮಾಡಿ ಇಬ್ಬರ ಸುಂದರ ಜೀವನದಲ್ಲಿ ತಂದೆ ಮಹಮ್ಮದ್ ಬಿರುಗಾಳಿ ಎಬ್ಬಿಸಿದ. ನಾದಿರ ತನ್ನ ಅಂತರಂಗದ ದುಃಖ ಯಾರ ಬಳಿ ಹೇಳಿಕೊಳ್ಳಲು ಸಾಧ್ಯವಿತ್ತು? ನಿಷ್ಕರುಣಿ ತಂದೆಯ ಬಳಿ?, ಸ್ವಾಭಿಮಾನವೇ ಮುಖ್ಯ ಎಂದ ಪತಿಯ ಬಳಿ?, ಎಲ್ಲ ತಿಳಿದು ಅಸಹಾಯಕಳಾದ ತಾಯಿಯ ಬಳಿ? ನಗುವನ್ನು ಕಸಿದುಕೊಂಡು ಹೋದ ಅತ್ತೆಯ ಬಳಿ? ಕೊನೆಗೆ ಚಂದ್ರಗಿರಿ ನದಿ ತೀರಕ್ಕೆ ಬಂದ ನಾದಿರನ ಆಯ್ಕೆ ಜೀವ ತ್ಯಾಗವಾಯ್ತಿ. ಕಾದಂಬರಿ ಕೇವಲ ನಾದಿರ ಬದುಕಿನ ಚಿತ್ರಣ ನೀಡದೆ, ಸಮಾಜದಲ್ಲಿ ಇಂತಹ ಅನೇಕ ಅಸಹಾಯಕ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಯೋಚನಾ ಶಕ್ತಿ ಇಲ್ಲದಾಗಲೇ ಸಂಸಾರ ಸಾಗರಕ್ಕೆ ನೂಕಲ್ಪಡುತ್ತಾರೆ. ಯಾರೊಂದಿಗೂ ತಮ್ಮ ದುಃಖ ಹೇಳಿಕೊಳ್ಳಲಾಗದೆ, ಸಾಮಾಜಿಕ ಧಾರ್ಮಿಕ ಕಟ್ಟುಪಾಡುಗಳಿಗೆ ಒಳಗಾಗಿ ಸಾವಿಗೆ ಶರಣಾಗುತ್ತಿರುವ ಹೆಣ್ಣು ಮಕ್ಕಳ ಜೀವನಕ್ಕೆ ಕೈಗನ್ನಡಿ ಈ ಕಾದಂಬರಿ. ಪ್ರಮುಖ ಅಂಶಗಳು:- 1) ಪುರುಷ ಪ್ರಾಬಲ್ಯದ ಪ್ರಭಾವ 2) ಧಾರ್ಮಿಕ ವಿಧಿ ವಿಧಾನಗಳು ಸಂಪ್ರದಾಯಗಳು 3) ಹೆಣ್ಣು ಮಕ್ಕಳಿಗೆ ಶಿಕ್ಷಣದ ಅಗತ್ಯತೆ 4) ಮುಸಲ್ಮಾನ "ತಲಖ್" ಪದ್ಧತಿ 5) ಬಾಲ್ಯ ವಿವಾಹ 6) ಸ್ತ್ರೀ ಶೋಷಣೆ 7) ರಕ್ಷಕನೇ ಭಕ್ಷಕನಾದಾಗ ಆಗುವ ಪರಿಣಾ ಪರಿಣಾಮಗಳಬಗ್ಗೆ ಹೀಗೆ ಅನೇಕ ಅಂಶಗಳ ಬಗ್ಗೆ ಕಾದಂಬರಿಯೂ ತಿಳಿಸುತ್ತದೆ. ನನ್ನಲ್ಲಿ ಹುಟ್ಟಿದ ಪ್ರಶ್ನೆಗಳು. 1)ಕೌಟುಂಬಿಕವಾಗಿ, ಸಾಮಾಜಿಕವಾಗಿ ತಿರಸ್ಕಡಿಸಲ್ಪಡುವ ಹೆಣ್ಣಿಗೆ ಬೇರೊಂದು ಬದುಕೇ ಇಲ್ಲವೇ? 2)ಕೇವಲ ಸಂಸಾರಕ್ಕಾಗಿ ಆಕೆ ಜೀವನ ಸವಿಸ ಬೇಕೆ? 3) ಎಲ್ಲರೂ ಕೈ ಬಿಟ್ಟಾಗ ಬದುಕೇ ಇಲ್ಲ ಎಂದು ಸಾವಿಗೆ ಶರಣಾಗಬೇಕ? ಇಂತಹ ಅನೇಕ ಪ್ರಶ್ನೆಗೆ ನಾ ಕಂಡುಕೊಂಡ ಉತ್ತರ ಜೀವನದಲ್ಲಿ ಸಂಸಾರ ಎಂಬುದು ಒಂದು ಭಾಗವಾದರೆ,ಸಮಾಜ ಬದುಕಲು ಬೇಕಾಗುವ ವ್ಯವಸ್ಥೆ. ಎಲ್ಲರಿಗೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ. ಧರ್ಮಗಳು ಆಚರ-ವಿಚಾರಗಳು ಸ್ತ್ರೀಯ ರಕ್ಷಣೆ ಮಾಡಬೇಕು. ಹೊರತಾಗಿ ಆಕೆಯ ಜೀವನಕ್ಕೆ ಕುಂದು ತರುವಂತಿರಬಾರದು. ಉಪಸಂಹಾರ. ದಾಂಪತ್ಯವು ನಂಬಿಕೆ ಅಡಿಪಾಯದ ಮೇಲೆ ಕಟ್ಟಲಾದ ಸುಂದರ ಮಂದಿರವಾಗಬೇಕು. ಹಾಗೂ ಸ್ತ್ರೀ- ಪುರುಷ ಸುಶಿಕ್ಷಿತರಬೇಕು. ವಿಚಾರವಂತರಾಗಬೇಕು. ಸರಿ-ತಪ್ಪಿನ ವಿಮರ್ಶಿಸಿ ನಿರ್ಧಾರ ಕೈಗೊಳ್ಳಬೇಕು. ಶೋಷಿತ ಆಸಹಾಯಕ ಹೆಣ್ಣು ಮಕ್ಕಳು ಮುಖ್ಯವಾಹಿನಿಗೆ ಬಂದು ನ್ಯಾಯ ಪಡೆಯಬೇಕು. ಎಂಬ ಆಶಯ ಕಾದಂಬರಿ ಒಳಗೊಂಡಿದೆ. ನಂತರ1 ಆಗಸ್ಟ್ 2019 ರಲ್ಲಿ ತ್ರಿವಳಿ ತಲಾಖ್ ರದ್ಧತಿ ಇಂದ ಮುನ್ಲೆಂ ಮಹಿಳೆಯರ ಬದುರಿಗೆ ಬಂದು ನ್ಯಾಯ ನೀಡಿದೆ.
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
1) ನಾದಿರ(ನಾಯಕಿ ಮಗಳು) 2) ರಶೀದ್( ನಾಯಕ ಅಳಿಯ) 3) ಮಹಮ್ಮದ್ ಖಾನ್( ತಂದೆ) 4) ಫಾತಿಮಾ(ತಾಯಿ) 5) ಜಮೀರಾ-(ಮಗಳು)
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಪ್ರತಿಯೊಬ್ಬರು ಈ ಪುಸ್ತಕ ಓದಬೇಕು. ಈ ಮೂಲಕ ಸ್ತ್ರೀಯರ ಆಸಹಾಯಕತೆ ಮಾತ್ರವಲ್ಲ, ಸಮಾಜದಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಧಾರ್ಮಿಕವಾಗಿ ಶೋಷಿತರಾದ ಹೆಣ್ಣು ಮಕ್ಕಳ ಸ್ಥಿತಿಯ ಬಗ್ಗೆ ಚಿತ್ರಣ ನೀಡುತ್ತದೆ.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.