Submission 1832

ಪುಸ್ತಕದ ಶೀರ್ಷಿಕೆ: ಶ್ರೀಮದ್ಭಗವದ್ಗೀತಾ ತಾತ್ಪರ್ಯ

ಪುಸ್ತಕದ ಲೇಖಕರು: ವ್ಯಾಸ ಮಹರ್ಷಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಪ್ರಭು ನಿಲಾರಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಸಧ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗುತ್ತಿರುವ ವಿಷಯ ನಿಮಗೆ ಗೊತ್ತೆ ಇದೆ, ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಸೇರಿಸುವುದೋ? ಅಥವಾ ಬೇಡವೋ? ಎಂಬ ವಿಚಾರಗಳ ಬಗ್ಗೆ ನಡೆಯುತ್ತಿರುವ ಚರ್ಚೆ ಮತ್ತು ವಾದಗಳನ್ನು ಗಮನಿಸಿದಾಗ. ನನಗೆ ಯಾಕೋ ನಾನು ಇಲ್ಲಿಯವರೆಗೂ ಓದಿದಂತ ಪುಸ್ತಕಗಳಲ್ಲಿ ತುಂಬಾ ಮಹತ್ವದ್ದು ಮತ್ತು ತುಂಬಾನೇ ವಿರೋಧ ವ್ಯಕ್ತವಾದ ಶ್ರೀ ಮದ್ಭವದ್ಗೀತಾ ತಾತ್ಪರ್ಯ ಪುಸ್ತಕದ ಬಗ್ಗೆ ಚಿಕ್ಕದಾಗಿ ವಿಮರ್ಶೆ ಮಾಡಬೇಕೆನಿಸಿತು. ಈ ಕೃತಿಯ ಬಗ್ಗೆ ವಿಮರ್ಶೆ ಮಾಡಲು ಮುಂದಾದಾಗ ಎಲ್ಲೋ ಒಂದು ಕಡೆ ಭಯ ಖಂಡಿತ ಇತ್ತು.ಆದರೆ ಶ್ರೀ ಕೃಷ್ಣನು ಹೇಳಿದಂತೆ ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂದು ನನ್ನ ಅಭಿಪ್ರಾಯವನ್ನು ಮಂಡಿಸುತ್ತಾ ಇದ್ದೀನಿ. ಶ್ರೀ ಜಯದಯಾಲಜಿ ಗೋಯಂದಕ ಅವರು ಹಿಂದಿಯಲ್ಲಿ ವಿವರಣೆ ನೀಡಿದನ್ನು ಗೋರಖಪುರ ಗೀತಾ ಪ್ರೇಸ್ ಅವರ ಪ್ರಕಾಶನದಡಿಯಲ್ಲಿ ಶ್ರೀ ತಂ.ನ.ಮೂರ್ತಿ ಕನ್ನಡಕ್ಕೆ ಅನುವಾದಿಸಿದ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಪುಸ್ತಕದ ಬಗ್ಗೆ ಚಿಕ್ಕದಾಗಿ ಹೇಳುವುದಾದರೆ. ಈ ಪುಸ್ತಕದಲ್ಲಿ ಎಲ್ಲ ಅನುವಾದಕರ ಹಾಗೆ ಮೂರ್ತಿಯವರು ಸಂಸ್ಕೃತ ಶ್ಲೋಕಗಳ ಕೆಳಗೆ ಅದರ ಕನ್ನಡ ವಿವರಣೆಯನ್ನು ಮಾತ್ರ ನೀಡದೆ,ಜೊತೆಗೆ ಅದರ ಕೆಳಗೆ ಒಂದು ಪಟ್ಟಿಯನ್ನು ಮಾಡಿ,ಸಂಸ್ಕೃತದ ಕೆಲ ಪದಗಳನ್ನು ಎಡಬದಿಯಲ್ಲಿ ಕೊಟ್ಟು. ಅದರ ಕನ್ನಡ ಅರ್ಥಗಳನ್ನು ಬಲ ಬದಿಯಲ್ಲಿ ಹಾಕಿ ಹೊಸ ಓದುಗರಿಗೆ ಅರ್ಥೈಸಿಕೊಳ್ಳಲು ಸುಲಭವಾದ ಮಾರ್ಗವನ್ನ ಕಟ್ಟಿಕೊಡುವುದರ ಜೊತೆಗೆ ಅನುವಾದಕರು ಯಾವುದೇ ಸಾಹಿತ್ಯಿಕ ಪದಗಳನ್ನು ಅತಿಯಾಗಿ ಬಳಸದೆ ಸಾಮಾನ್ಯ ಜನರ ಬಳಕೆಯಲ್ಲಿರುವ ಪದಗಳನ್ನೆ ಬಳಸಿಕೊಂಡು ಓದಲು ಅಣಿ ಮಾಡಿಕೊಟ್ಟಿದ್ದಾರೆ. 700 ಶ್ಲೋಕ 18 ಅಧ್ಯಾಯಗಳು ಇರುವಂತಹ ಈ ಚಿಕ್ಕ ಪುಸ್ತಕದಲ್ಲಿ ಅರ್ಜುನನ ವಿಷಾದ ಯೋಗದ ಅಧ್ಯಾಯಗಳಿಗೆ ಸ್ವಲ್ಪ ವಿವರಣೆ ಕಡಿಮೆ ನೀಡಿದರು ,ಮುಂದೆ ಬರುವ 17 ಅಧ್ಯಾಯಗಳಲ್ಲಿ ಮತ್ತು ಶ್ರೀ ಕೃಷ್ಣನು ಹೇಳಿದ ಬೋಧನೆಗಳಿಗೆ ಜಾಸ್ತಿ ವಿವರಣೆ ನೀಡಲು ಅನುವಾದಕರು ತುಂಬಾ ಮಹತ್ವ ಕೊಟ್ಟಿದ್ದಾರೆ. ಭಕ್ತಿ ಯೋಗ,ಕರ್ಮ ಯೋಗ,ಜ್ಞಾನ ಯೋಗ,ಎಂಬ ಮೂರು ಯೋಗಗಳ ಬಗ್ಗೆ ಅದ್ಭುತವಾದ ವಿವರಣೆಗಳನ್ನು ನಾವಿಲ್ಲಿ ಕಾಣಬಹುದು. ಮಾನವ ಚಂಚಲ ಮನಸ್ಥಿತಿಯಿಂದ ಎದುರಿಸುತ್ತಿರುವ ಸಾಲು ಸಾಲು ವೇದನೆಗಳಿಗೆ ಸೂಕ್ತ ಪರಿಹಾರ, ಹಾಗೆ ಪುನರ್ಜನ್ಮದ ಚಕ್ರ ಬಂಧನದಿಂದ ಮುಕ್ತಿ ಪಡೆಯುವುದರ ದಾರಿಯನ್ನ ಶ್ರೀ ಕೃಷ್ಣ ಹೇಗೆ ಅರ್ಜುನನಿಗೆ ವಿವರಿಸಿದನು ಎಂಬುದರ ಬಗೆಗಿನ ಸುಂದರವಾದ ಮಾಹಿತಿಯನ್ನು ನಾವಿಲ್ಲಿ ಕಾಣಬಹುದು. ಸೂರ್ಯನಿಗೂ ಗ್ರಹಣ ಹಿಡಿದ ಹಾಗೆ ಈ ಕೃತಿಗೂ ನೂರಾರು ವರ್ಷಗಳಿಂದ ಅದರ ಮೇಲೆ ಕೆಲವು ವಾದ ವಿವಾದಗಳು ಕೇಳಿ ಬರುತ್ತಲೆೇ ಇವೆ. ಸಾಂಪ್ರದಾಯಿಕವಾಗಿ ಭಗವದ್ಗೀತೆಯನ್ನು ವ್ಯಾಸ ಮಹರ್ಷಿಗಳು ಬರೆದಿದ್ದಾರೆಂದು ಹೇಳುತ್ತಾರೆ. ಆದರೆ ಇದು 'ಅನೇಕ ಲೇಖಕರ ಸಂಕೀರ್ಣ' ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ . ಸ್ವಲ್ಪ ಚಿಂತಕರು ಭಗವದ್ಗೀತೆಯಿಂದ ಹಲವು ಶ್ಲೋಕಗಳನ್ನ ಕೈಬಿಡುವಂತೆ ಸಾಕಷ್ಟು ಬಾರಿ ತಮ್ಮ ವಾದವನ್ನು ಮಂಡಿಸಿರುವುದು ಉಂಟು. ಇನ್ನು ಕೆಲವರು ಅರ್ಜುನನಿಗೆ ಕೊಲ್ಲುವ ಪ್ರಚೋದನೆ ನೀಡುವ ಶ್ರೀಕೃಷ್ಣನ ಮಾತುಗಳು ಹೇಗೆ ಸಮಾಜಕ್ಕೆ ಪ್ರೇರಣಾದಾಯಕ ಮತ್ತು ಸಮಾಜಕ್ಕೆ ಇದು ಯಾವ ರೀತಿಯ ಸ್ಪೂರ್ತಿಯನ್ನು ನೀಡುತ್ತದೆ?ಎಂಬುದು ಕೇಳಿದುಂಟು. ನಾವು ಇನ್ನೂ ಸ್ವಲ್ಪ ಮುಂದೆ ಹೋಗಿ ನೋಡುವುದಾದರೆ ಕೆಲವೊಂದು ಶ್ಲೋಕಗಳಿಗೆ ಕೆಲವೊಂದು ಚಿಂತಕರು ವಿಧವಿಧವಾದ ಅರ್ಥಗಳನ್ನು ನೀಡಿರುವುದು ಗಮನಾರ್ಹ. ಈ ಆಧುನಿಕ ಭಾರತದಲ್ಲಿ ಸರ್ವಧರ್ಮಿಯರು ಸಮ್ಮತಿಯಿಂದ ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳೆಂದು ಒಪ್ಪಿಕೊಂಡರು ಸಹ,ಭಗವದ್ಗೀತೆಯ ಬಗ್ಗೆ ಅಲ್ಲಲ್ಲಿ ಸ್ವಲ್ಪ ಅಪಸ್ವರಗಳು ಕೇಳಿ ಬರುತ್ತಲೇ ಇವೆ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಮಂಡಿಸುವ ಸ್ವಾತಂತ್ರ್ಯವಿರುವಾಗ ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳದೆ ಒಳ್ಳೆಯದು ಎಲ್ಲಿಯೇ ಇರಲಿ ಅದನ್ನು ಸ್ವೀಕರಿಸೋಣ ಹಾಗೆ ಕೆಟ್ಟದ್ದನ್ನು ಕೈ ಬಿಡೋಣ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ರಣರಂಗದಲ್ಲಿ ಯುದ್ಧ ಪ್ರಾರಂಭವಾಗುವ ಮುನ್ನ ಅರ್ಜುನ ತನ್ನ ಶತ್ರು ಸೈನ್ಯದ ಕಡೆಗೆ ದಿಟ್ಟಿಸಿ ನೋಡಿ ಒಂದು ಕ್ಷಣ ನಾನು ಯುದ್ಧ ಮಾಡಬೇಕಾಗಿರುವುದು ವಿದ್ಯೆ ಹೇಳಿಕೊಟ್ಟ ಗುರುಗಳ ಜೊತೆನಾ? ಅಥವಾ ತನ್ನ ಜೊತೆ ಕೂಡಿ ಬೆಳೆದ ಸಹೋದರರು ಮತ್ತು ಮಿತ್ರರ ಜೊತೆನಾ? ಎಂದು ತನ್ನಲ್ಲಿಯ ಪ್ರಶ್ನಿಸಿಕೊಂಡು. ತಳಮಳದಿಂದ ಕೊನೆಗೆ ಅವರ ವಿರುದ್ಧ ಶಸ್ತ್ರ ಎತ್ತಲಾರದೆ ಯುದ್ಧದಿಂದ ಹಿಂಜರಿಯುತ್ತಿರುವಾಗ . ಶ್ರೀ ಕೃಷ್ಣನು ಅರ್ಜುನನಿಗೆ ಧರ್ಮ ಬೋಧನೆಯನ್ನು ಮಾಡುವುದರ ಜೊತೆಗೆ ತನ್ನ ವಿಶ್ವರೂಪವನ್ನು ತೋರಿಸುವ ವಿವರಣೆಯು ಕಣ್ಣ ಮುಂದೆಯೇ ಕಟ್ಟಿದಂತಿದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಬದುಕಿನ ಬಗ್ಗೆ ಸ್ಪಷ್ಟತೆಯ ಚಿತ್ರಣ ಅರಸುತ್ತಿರುವವರಿಗೆ ಮತ್ತು ಜೀವನದಲ್ಲಿ ಒಂದೆರಡು ಸೋಲುಗಳನ್ನು ನೋಡಿದ ಮಾತ್ರಕ್ಕೆ ಜೀವನವೇ ಸಾಕು ಎಂಬಂತೆ ನಿಟ್ಟುಸಿರು ಬಿಡುತ್ತಿರುವ ಯುವ ಪೀಳಿಗೆಗೆ ಈ ಪುಸ್ತಕ ತುಂಬಾ ಪ್ರಯೋಜನಕಾರಿ

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

10
Votes
125
Views
8 Months
Since posted

Voting Closed!

Scroll to Top