Submission 1810

ಪುಸ್ತಕದ ಶೀರ್ಷಿಕೆ: ಕರುಣಾಳು ಬಾ ಬೆಳಕೆ ಭಾಗ -೨

ಪುಸ್ತಕದ ಲೇಖಕರು: ಡಾ. ಗುರುರಾಜ ಕರಜಗಿ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಡಾ ಇಂದು ರವಿಕುಮಾರ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ನಾನು ಓದಿದ ಪುಸ್ತಕ ಕರುನಾಳು ಬಾ ಬೆಳಕೆ ಭಾಗ ಎರಡು ಈ ಪುಸ್ತಕವು ನನ್ನ ಹೃದಯದ ಬಾಗಿಲನ್ನು ತೆರೆದ ಪುಸ್ತಕ. ಮುಸುಕಿದೆ ಮೊಗ್ಗಿನಲ್ಲಿ ಕೈ ಹಿಡಿದು ನಡೆಸಲಿ ಎನ್ನುವ ಸಾಲುಗಳು ನನ್ನ ಮನದಾಳದ ಕತ್ತಲೆಯನ್ನು ಸರಿಸಿ ಶಿಕ್ಷಕಿಯಾದ ನನಗೆ ಪ್ರತಿಯೊಂದು ಅಧ್ಯಾಯಗಳು ದಾರಿ ದೀಪಗಳಾಗಿವೆ. ನಾನು ಈ ಪುಸ್ತಕವನ್ನು ವಿಮರ್ಶೆ ಮಾಡುವಷ್ಟು ದೊಡ್ಡವಳಲ್ಲ. ಆದರೆ ಈ ಪುಸ್ತಕದಲ್ಲಿರುವ 101 ಕಥೆಗಳು ಪ್ರತಿಯೊಬ್ಬ ಮನುಷ್ಯನಿಗೂ ಸಮಾಜದಲ್ಲಿ ಬದುಕಲು ಬುದ್ಧಿಜೀವಿಯಾಗಲು ಸಂತೋಷವಾಗಿ ಮುಕ್ತಿಯನ್ನು ಪಡೆಯಲು ಆದರ್ಶ ಪ್ರಾಯವಾದ ಮಾತುಗಳಾಗಿವೆ. ಅವುಗಳಲ್ಲಿ ಕೆಲವುಗಳನ್ನು ನಾನು ಇಲ್ಲಿ ಹೇಳಬಯಸುತ್ತೇನೆ ೧)ಶಿಕ್ಷಕರಾದವರು ಮೈಯಲ್ಲಿ ಕಣ್ಣಾಗಿರಬೇಕು ಅವನು ವಿದ್ಯಾರ್ಥಿಗಳಿ ಮಾದರಿಯಾಗಿರಬೇಕು ೨)ಕೊಟ್ಟ ಮಾತು ಉಳಿಸಿಕೊಳ್ಳಲು ಮನೋ ಧೈರ್ಯವಿರಬೇಕು ೩) ಯಾವಾಗಲೂ ಜೀವನದಲ್ಲಿ ದೊಡ್ಡ ಗುರಿಯನ್ನು ಹೊಂದಿರಬೇಕು, ೪) ಹಿರಿಯರ ಮಾತನ್ನು ಆಲಿಸಿದಾಗ ಜೀವನದಲ್ಲಿ ಯಶಸ್ವಿಯನ್ನು ಕಾಣುತ್ತೇವೆ ೫)ಹೀನತೆಯನ್ನು ಕಳಚಿದಾಗಮನುಷ್ಯ ಮಹತ್ವಕಾಂಕ್ಷೆ ರೋಗದಿಂದ ಮುಕ್ತ ನಾಗುತ್ತಾನೆ ೬)ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಏಕಾಗ್ರತೆ ತಾಳ್ಮೆ ನಮ್ಮ ಮಾತಿನ ತೂಕ ಸರಿಯಾಗಿದ್ದರೆ ನಾವು ನಮ್ಮ ಕರ್ತವ್ಯವನ್ನು ಬಹುನಿಷ್ಠೆಯಿಂದ ನಿರ್ವಹಿಸಬಹುದು ೭) ನಮ್ಮಲ್ಲಿ ಏನಿಲ್ಲ ಎನ್ನುವುದಕ್ಕಿಂತ ಇರುವುದರಲ್ಲಿ ತೃಪ್ತಿಯನ್ನು ಪಡುವುದೇ ಜೀವನ ೮) ನಾವು ಮಾಡಿದ ಕೆಲಸದಂತೆ ಪ್ರತಿಫಲವನ್ನು ಪಡೆಯುತ್ತೇವೆ ೯) ವಿನಯವಿಲ್ಲದ ವಿದ್ಯೆ ಅಹಂಕಾರದ ಢಮರವಿದ್ದಂತೆ ೧೦)ಪ್ರತಿ ಪಾಠಕ್ಕೂ ನಾವು ತಯಾರಿ ಮಾಡಿಕೊಂಡಾಗ ಮಾತ್ರ ಉತ್ತಮ ಗುರುಗಳಾಗಿ ಮಕ್ಕಳಿಗೆ ಮಾದರಿಯಾಗಿ ನಾವು ಸಮಾಜದ ಸೇವಕರಾಗುತ್ತೇವೆ ೧೧)ನಾವು ಯಾವುದೇ ನಿರ್ಧಾರಕ್ಕೂ ಅವಸರವನ್ನು ಮಾಡಲಾರದೆ ಕೋಪವನ್ನು ತೋರದೆ ಸಮಾಧಾನದಿಂದ ನಿರ್ಧಾರವನ್ನು ಗೈದರೆ ತೃಪ್ತಿಯಿಂದ ಬದುಕಬಹುದು. ಪ್ರತಿಯೊಂದು ಅಧ್ಯಾಯಗಳು ಮಾರ್ಗದರ್ಶಕಗಳಾಗಿವೆ. ಪದಗಳ ನಿರ್ಬಂಧ ಇರುವುದರಿಂದ ನನ್ನ ಭಾವನೆಗಳನ್ನು ಇಲ್ಲಿಗೆ ನಿಲ್ಲಿಸುತ್ತೇನೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಅಧ್ಯಾಯ 122 ನೀಡಿದ್ದಷ್ಟನೆ ಪಡೆಯುತ್ತೇವೆ ಈ ಕಥೆಯಲ್ಲಿ ರವೀಂದ್ರನಾಥ್ ಟಾಗೋರ್ ಅವರು ಗೀತಾಂಜಲಿ ಪುಸ್ತಕದಿಂದ ಆಯ್ದ ಕಥೆಯನ್ನು ಲೇಖಕರು ಬಹಳ ಚೆನ್ನಾಗಿ ತಿಳಿಸಿರುತ್ತಾರೆ ಬಿಕ್ಷುಕನೋ ರಾಜನಿಗೆ ಜೋಳದಾಕಾಳನ್ನು ಕೊಟ್ಟಾಗ ಅಷ್ಟೇ ಗಾತ್ರದಲ್ಲಿ ಬಂಗಾರವನ್ನು ಪಡೆಯುತ್ತಾನೆ ಅದರಂತೆ ನಾವು ಈ ಸಮಾಜಕ್ಕೆ ಏನನ್ನು ಕೊಡುತ್ತಿವೆಯೋ ಅದನ್ನು ಪಡೆಯಲು ಮಾತ್ರ ಸಾಧ್ಯ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಈ ಪುಸ್ತಕವು ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಇರುವುದರಿಂದ ಪ್ರತಿಯೊಬ್ಬರು ಇದನ್ನು ಓದಿದರೆ ತಮ್ಮ ಜೀವನದಲ್ಲಿ ಸಾರ್ಥಕತೆಯನ್ನು ಪಡೆಯುತ್ತಾರೆ ಅಥವಾ ಕೆಲವು ಅಂಶಗಳನ್ನಾದರೂ ಅಳವಡಿಸಿಕೊಳ್ಳಬಹುದು. ಎನ್ನುವುದು ನನ್ನ ಅಭಿಪ್ರಾಯ ಈ ಪುಸ್ತಕವನ್ನು ಓದಲು ಅವಕಾಶ ಮಾಡಿಕೊಟ್ಟ ಗುರುರಾಜ ಸರ್ ಅವರಿಗೆ ಧನ್ಯವಾದಗಳು

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

11
Votes
141
Views
8 Months
Since posted

Voting Closed!

Scroll to Top