ಪುಸ್ತಕದ ಶೀರ್ಷಿಕೆ: ಹಾಣಾದಿ
ಪುಸ್ತಕದ ಲೇಖಕರು: ಕಪಿಲ್ ಪಿ ಹುಮನಾಬಾದೇ
-------------
ಪುಸ್ತಕ ವಿಮರ್ಶೆ ಸಲ್ಲಿಸಿದವರು: ದಾಲ್ಸಿಂಗ್ ನಲ್ಲಿ ಪ್ರಕಾಶ್
-------------
ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5
ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.
-------------
ಪುಸ್ತಕದ ಸಾರಾಂಶ:
ನಮ್ಮ ಬೀದರ್ ಆಡು ಭಾಷೆ ಯಲ್ಲಿ ಮೂಡಿ ಬಂದ ಕಾದಂಬರಿ. ಕಥೆ ವಸ್ತು ಅದ ಗುಬ್ಬಿ ಆಯಿ ನಮ್ಮೂನು ಒಂದೇ ಬೇರೆಯೇ ತೀರಿವಿಗೆ ಕೊಂಡುಯುತ್ತಾಳೆ. ಬದುಕು ಕಟ್ಟು ಕೊಳ್ಳಲ್ಲೂ ಸಿಟಿ ಸೇರುದ ಕಥೆ ನಾಯಕ ಪ್ರತಿ ತಿಂಗಳು ಅಪ್ಪನಿಗೆ ಮೆನಿ ಆರ್ಡರ್ ಮಾಡ್ತಾ ಇದ್ದ. ಹೀಗೆ ಕಾಲಗಳು ಕಳೆದೆವು ಒಂದ್ ದಿನ ಮನಿ ಆರ್ಡರ್ ಮುಟ್ಟದೆ ತಿಂತುರುಗಿ ಬಂದಾಗ ನಾಯಕನಿಗೆ ಯಾಕೋ ಅನುಮಾನ, ಸಂಕಟ ಮನಸು ಗೊಂದಲದ ಗುಡ್ ಆಯಿತು ಮನಸು ತಾಳಲಾರೆದ ತನ್ನ ಹಳ್ಳಿ ಕಡೆಗೆ ಮುಖ ಮಾಡಿ ಬಸ್ ಹತ್ತಿದ. ಹಳ್ಳಿ ಯಲ್ಲಾ ಹಾಳ್ ಕೊಂಪೆ ಆಗಿತ್ತು. ಯಾವಾಗಲೂ ಜನ ಬಿಡುಗಿದ್ದು ಚರ್ಚ್ ಈವಾಗ್ ಮಸಣ ಮೌನ ತಾಳಿತ್ತು ಅಲ್ಲಿಂದ್ ಕಾಲ್ ಕಿತ್ತು ಬಂದ. ಹಿಂಗೇ ಮುಂದೆ ಸಾಗುತ್ತಾ ಶಾಲೆಯ ಆವರಣ ದಲ್ಲಿ ನಿಂತ ನೀರು ಅದೆಷ್ಟು ದಿನಗಳು ಕೆಳೆದವು ಯಾರು ಇಲ್ಲ ಆಡಲಾಕ್ ಇಲ್ಲ. ನಮ್ಮ ಶಾಲೆ ದಿನಗಳಲ್ಲಿ ಪುಸ್ತಕ ಓದಿದ ಕಿಂತಲೂ ದೋಣಿ ಮಾಡಿ ಆಡಿದ್ದೇ ಹೆಚ್ಚು. 1990 ರಿಂದ 2000 ಇಸಿವಿ ಯಲ್ಲಿ ಜನಿಸಿದ ಪ್ರತಿ ಒಬ್ಬರ ಬಾಲ್ಯದ ನೆನಪು ಇಲ್ಲಿ ಮಾರಿಕಳಿಸುತ್ತೆ. ಹೀಗೆ ಮುಂದೆ ನಡೆದ ಹಿಂತಾ ನೀರಾವ ಮೌನ ತನು ಯಾವತ್ತೂ ನೋಡಿರಲಿಲ್ಲ ಊರಿಗೆ ಊರು ಖಾಲಿಯಾಗಿ ಬರಿ ಹಾಳು ಮನೆ ಗಳು ಇದ್ದವು.ಮನೆಗಳಿಲ್ಲದೆ ಮನುಷ್ಯ ರಾದರು ಇದಿದ್ದರೆ ನಮ್ಮ ಕಥಾ ನಾಯಕನಿಗೆ ಖುಷಿ ಆಗ್ತಾ ಇತ್ತು.ತನ್ನ ಮನೆ ಯದುರು ಸಾಲಾಗಿ ಜೋಡಿಸಿಟ್ಟಾ ಕಲ್ಲುಗಳು ಚೆಲ್ಲಾಪಿಲ್ಲಿ ಗಳಾಗಿ ಬಿದ್ದಿದವು. ಮನೆ ಮುಂದೆ ಇದ್ದ ಬಾದಾಮಿ ಗಿಡ ನೀಲಗಿರಿ ಡಿಗ ಈವಾಗ್ ಇಲ್ಲ ತುಂಬಾ ದಿಗ್ಬ್ರಮೆ ಗೊಂಡಿದ. ಅಪ್ಪನಿಗೆ ತುಂಬಾ ಈಸ್ಟ್ ಅದ ಗಿಡಗಳು ತುಂಬಾ ವರ್ಷ ಗಳೇ ಹಿಂದೆ ನೆಟ್ಟ ಗಿಡ ಗಳು ಈವಾಗ ಬ್ರಹಧಕಾರದಲ್ಲಿ ಬೆಳೆದು ನಿಂತಿದವು.ಈವಾಗ್ ಅವ್ವು ಗಳೂ ಈವಾಗ್ ಇಲ್ಲ ಯಾಕೆ ಹಿಗ್ ಆಯಿತು ಅಪ್ಪಾ ಯಲ್ಲಿ ಅಂತಾ ಯೋಚ್ನೆ ಮಾಡುತಿವಾಗ ಕರೆದಳು ಗುಬ್ಬಿ ಆಯಿ ನೀನ್ ಸಲುವಾಗಿ ನಾನು ಕಾಯ್ತಾ ಇರೋದು ಅಂತಾ ಹೇಳಿದಳು.ಮನೆಗೆ ಬಂದ ಅತಿಥಿ ಯನ್ನು ಯಾವ ರೀತಿಲಿಯಲ್ಲಿ ಸತ್ಕಾರ ಮಾಡಬೇಕು ಆ ರೀತಿಲಿ ಮಾಡಿದಳು. ಈ ಆಯಿ ಯಾರು ನಾನು ನೋಡೇ ಇಲ್ಲ ವಲ್ಲ ಅನ್ಸಿದ್ರು ಕೇಳ್ಬೇಕು ಅನ್ನಿಸಿಲ್ಲ. ಬರಿ ಅಪ್ಪನ ಯೋಚ್ನೆ ಆಯಿ ಅಪ್ಪಾ ಯಲ್ಲಿ ಅಂದಾಗ ತಡಿ ಹೇಳ್ತೀನಿ ಅಂದಳು.ಯಾವದು ಊರಲ್ಲಿ ಅದ ಬಾದಾಮ್ ಗಿಡದಲ್ಲಿ ದೆವ್ವ ಇದೆ ಅಂತಾ ಹೇಳಿ. ಈ ಊರಲ್ಲಿ ಅದು ಏನೇ ಆದರೂ ಈ ಗಿಡನೆ ಕಾರಣ ಅಂತಾ ಗಿಡ ಕಡಿಯಲು ಮುಂದೆ ಆದರೂ (ಅಪ್ಪಾ ನನ್ನ ಕಿಂತ ಈ ಗಿಡ ವನ್ನು ಪ್ರೀತಿ ಸಿದ್ದ )ಮನೆ ಯಲ್ಲಿ ನಾನು ಇಲ್ಲ(ಗುಬ್ಬಿ ಆಯಿ )ದ ನಿಮ್ಮ ಅಪ್ಪ ಎಲ್ಲದ್ ಸಮಯ ನೋಡಿ ಯಾರೋ ಕಿಡಿಗೇಡಿಗಳು ಆ ಬಾದಾಮ್ ಗಿಡ ಕಡೆದು ಹಾಕಿದರೂ ಅವಾಗ್ ನಿಮ್ಮ ಅಪ್ಪ ತುಂಬಾ ಬೆಂದು ಹೊದು, ಕುಂದು ಹೋದ, ನರಳಿ ಹೋದ, ಊಟ, ನೀರು ಬಿಟ್ಟ, ಊರಿಗೆ ಶಾಪ ಕೊಟ್ಟ, ನಾನು ದೆವ್ವ ವಾಗಿ ನಿಮ್ಮನು ಸುಮ್ನೆ ಬಿಡಲ್ಲ ಅಂತಾ ಹೇಳಿ ಕೊನೆಗೆ ಒಂದ್ ದಿನ ಆ ಗಿಡದ ವಣಾಗಿ ನಿಂತ ಪಂಟೆ ಗಳು ಜೋಡಿಸಿಟ್ಟು ಸುಟ್ಟು ಕಾರಕಲು ಅದ ಮಗ. ನಾನು ನಿಮ್ಮ ಅಪ್ಪನಿಗೆ ಕಾಪಾಡಲೇ ಇಲ್ಲ ನನ್ನ ನಿಮ್ಮ ಅಪ್ಪ ಆ ಕಾಮ ಪಿಶಾಚಿ ಇಂದ ಕಾಪಾಡಿ ನನ್ನ ಇಲ್ಲಿ ತಂದು ಸಕ್ತ ಇದ್ದ ಅಂತಾ ಹೇಳ್ತು ಗುಬ್ಬಿ ಆಯಿ. ಈ ನಡುವೆ ನಮಗೆ ಕಂಟಿ, ಕಂಟಿಯ ಮಗ ತುತ್ಯಾ ಅವನ ಹೆಂಡತಿ ಮತ್ತೇ ಹುಟ್ಟದೆ ಇರೋ ಹೆಣ್ಣು ಮಗಾ ಸ್ವಲ್ಪ ಹೋಯ್ತು ಕಾಡಿ ಮರೆಯಾಗುತ್ತೆ. ಆ ಕಾದಂಬರಿ ನೆನಪು ಗಳ ಚಿತ್ಕಾರ, ಬಾಲ್ಯದ ನೆನಪು ಗಳು, ಮೂಡ ನಂಬಿಕೆಯ, ಕಥೆ ಯಾಗಿದೆ ಮುಂದೆ ಏನ್ ಆಗುತ್ತೆ ಹೇಗೆ ಆಗುತ್ತೋ ಅಂತಲೇ ನಮ್ಮನು ಮುಂದಿನ ಓದಿನ ಪುಟ್ಟಕ್ಕೆ ಕುತೂಹಲ ದಿಂದ ಸಾಗಿಸುತ್ತೆ. ಗಂಡಸರ ಕಣ್ಣೀರಿಗೆ ಆಣೆಕಟ್ಟು ಇರುತವೇ ಅಂತಾ ಕಾಡೋ ವಾಕ್ಯ ಹಣೆಬರಹ ದಲ್ಲಿ ಇಂದಾಗ ನಡಿತುದ್ ಜಿಂದಗಿ ಮಾಲಾಕ್ ನಾವು ತಲಿ ಖಾರ್ಬ್ ಮಾಡ್ಕೊಬಾರದು. ಉಣ್ಣೋ ಅನ್ನಕ್ ದೇವರು ಬೆಳೆಸಿದ ಗಿಡಕ್ಕೆ ಯಲ್ಲಿಯಾ ಜಾತಿ. ಮನುಷ್ಯ ನಿಗೆ ನೆನಪು ಗಳಿಗಿಂತ ಕೊಲ್ಲೋ ಬೇರೆ ಸಂಗತಿ ಇಲ್ಲ. ಇನ್ನು ಅಲ್ಲಿ ಬಾರೋ ಕೆಲ ವಾಕ್ಯ ಗಳು ತುಂಬಾ ಕಾಡುತ್ತೆ ತುಂಬಾ ಕಾಡುವ ಕಾದಂಬರಿ ಒಮ್ಮೆ ಅದುರು ಓದಲೇ ಬೇಕು. ಕಪಿಲ್ ಹುಮ್ನಾಬಾದೇ ಹಂತ ನವ ಯುವಕರು ರನ್ನು ಪ್ರೋತ್ಸಾಹಿಸಾಬೇಕು ಅವರಿಂದ ಹಿಂತಾ ಇನ್ನು ಹತ್ತು ಪುಸ್ತಕ ಗಳು ಬರೆಸಬೇಕು. ವಿವರಿಸುವಾಗ ಏನ್ ಆದರೂ ತಪ್ಪು ಇದಾರೆ ಕ್ಷಮೆ ಇರ್ಲಿ 🙏🏻ಧನ್ಯವಾದಗಳು....
-------------
ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:
ಮೊದ್ಲಿಗೆ 1990ರಿಂದ 2000 ಇಸುವಿ ಯಲ್ಲಾ ಜನಿಸಿದ ಯಲ್ಲೋರ್ ಬಾಲ್ಯ ವನ್ನು ನೆನಪಿಸುತ್ತೆ. ನೋಟ್ ಬುಕ್ ಅನ್ನು ಮಳೆ ಇರಲ್ಲಿ ದೋಣಿ ಮಾಡಿ ಬಿಟ್ಟಿದ್ದು, ಡ್ರ್ಯಾಗನ್ ಹುಳುವನ್ನು ದಾರಕಟ್ಟಿ ಆಡಿದ್ದು, ನಾವುಗಳೇ ಮಾಡಿದ್ದ ಪತಂಗ ಹಾರಿಸಿದ್ದು, ಹುತ್ತಗಳು ಕೇಡಾವಿದ್ದು, ಮಾವಿನಕಾಯಿ ಟಿಫ ಮುಗುಳು ವಡೆ ದಾಗ ತಂದು ಹಚ್ಚಿದು, ನಾಯಿ ಮರಿ ಜೊತೆಗೆ ಆಡಿದ್ದು, ಚಿಮಿಣಿ ಗ್ಯಾಸ್ ಗಳದ್ದು.ಮುಂದೆ ಬರುವ ಕಂಟಿ ಅನ್ನೋ ಪಾತ್ರ ಒಂದ್ ಮಾತ್ ಹೇಳುತ್ತೆ ಹಣೆಬರಹ ಬರದಾಗ ಇರತದ ಜಿಂದಗಿ. ಜಾಸ್ತಿ ತಲಿ ಖರಾಬ್ ಮಾಡ್ಕೋಬೇಡ ಅನ್ನೋ ಮಾತು ಮನಸಿಗೆ ತುಂಬಾ ನಾಟಿತು.ಉಣ್ಣೋ ಅನ್ನಕ್, ದೇವರು ಬೆಳೆಸಿದ ಗಿಡಕ್ಕೆ ಯ್ಲಲಿನ ಜಾತಿ ಅನ್ನೋ ವಿಚಾರ ತುಂಬಾ ಜನರಿಗೆ ಗೊತ್ತು ಈರ್ಲಾಕಿಲ್ಲ. ಇನ್ನು ಮುಂದೆ ಬಾರೋ ಕಂಟಿ ಮಗಾ ತೊತ್ಯಾ ಅವನ ಹೆಂಡತಿ, ಇನ್ನು ಹುಟ್ಟದೆ ಇರೋ ತೊತ್ಯಾ ನ ಮಗಳು ಬಂದು ಕಡತಾಳೆ ಸ್ವಲ್ಪ ಮಟ್ಟಿಗೆ ಕಾಡುತ್ತಾರೆ ಪುಸ್ತಕ ಓದಿದಾಗ ತಿಳಿಯುತ್ತೆ ಆ ಗುಬ್ಬಿ ಆಯಿ,ಕಂಟಿ ಮಹತ್ವ ಕೊನೇದಾಗಿ ಮನುಷ್ಯನಿಗೆ ನೆನಪುಗಳಿಗಿಂತ ಕ್ರೂರವಾಗಿ ಕೊಲ್ಲುವ ಇನ್ನೊಂದು ಸಂಗತಿಇಲ್ಲ ಏನಿಸುತಿತ್ತು.
-------------
ಯಾರಿಗಾಗಿ ಈ ಪುಸ್ತಕ ಸೂಕ್ತ?
ಒಂದು ಕಲ್ಪನಾ ಲೋಕದಲ್ಲಿ ಹೋಗಿ ಕುತೂಹಲ ಬರಿತ ವಾಗಿ ಓದಿ ಬರುವ ಪುಸ್ತಕ. ಕ್ಷಣ ಕ್ಷಣಕ್ಕೆ ಏನ್ ಆಗುತ್ತೆ ಅಂತಾ ಕಾಡೋದೇ ಇರಲಾರದು.
-------------
ಸೂಚನೆ:
ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.