Submission 1764

ಪುಸ್ತಕದ ಶೀರ್ಷಿಕೆ: ಅಮ್ಮ ಹೇಳಿದ ಎಂಟು ಸುಳ್ಳುಗಳು

ಪುಸ್ತಕದ ಲೇಖಕರು: ಎ. ಅರ್. ಮಣಿಕಾಂತ್

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಸುಜನ್ ಎಸ್.

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

"ಅಮ್ಮ ಹೇಳಿದ ಎಂಟು ಸುಳ್ಳುಗಳು"- ಅಮ್ಮ ಹೇಳಿದ್ದು ಕೆಲವೊಮ್ಮೆ ಸುಳ್ಳುಗಳಾದರೂ, ಆ ಸುಳ್ಳುಗಳು ಒಳ್ಳೆಯ ಜೀವನ ನಡೆಸಲು ಹೇಳಿರುವ ಸುಳ್ಳುಗಳು. ಬದುಕಿನಲ್ಲಿ ಅವಕಾಶಗಳು ಸಿಗದೇ ವಂಚಿತರಾಗಿ, ದೈಹಿಕವಾಗಿ, ಮಾನಸಿಕವಾಗಿ ನ್ಯೂನತೆಗಳಿದ್ದರು, ಅವೆಲ್ಲವನ್ನು ಮೆಟ್ಟಿನಿಂತು, ಸಮಾಜದಲ್ಲಿ ಉನ್ನತ ಸ್ಥಾನಗಳಿಗೆ ತಲುಪಿರುವ ಅನೇಕರ ನೈಜ ಕಥೆಗಳನ್ನು ತುಂಬಾ ಅದ್ಬುತವಾಗಿ ಲೇಖಕರಾದ ಎ.ಆರ್. ಮಣಿಕಾಂತ್ ಅವರು ಈ ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಈ ಪುಸ್ತಕ ಕೇವಲ ಸಾಧಕರ ಕಥೆಗಳನ್ನು ಹೇಳುತ್ತಿಲ್ಲ, ಅವರ ಸಾಧನೆಗಳ ಹಿಂದಿನ ಪರಿಶ್ರಮ, ಅಡೆತಡೆಗಳನ್ನು ಮೆಟ್ಟಿನಿಂತು, ಮುಳ್ಳಿನ ಹಾದಿಯಲ್ಲಿ ಪಯಣಿಸಿ, ಸೋತು ಗೆದ್ದಿರುವ ನಮಗೆಲ್ಲ ಸ್ಪೂರ್ತಿಯಾಗುವ ಸಾಧಕರ ಕಥೆಗಳು. ಅಮ್ಮ ಹೇಳಿದ ಸುಳ್ಳುಗಳ ಹಿಂದೆ ಬಡತನ, ಸಂಕಟ, ಅಸಹಾಯಕತೆ ಇತ್ತು. ಎಲ್ಲಾ ಸುಳ್ಳುಗಳ ಹಿಂದೆ ಮಕ್ಕಳು ಚೆನ್ನಾಗಿರಬೇಕೆಂಬ ಪ್ರೀತಿ ಅದಾಗಿತ್ತು. ಬಡತನ ಬೇಗೆಯಲ್ಲಿ ಬೆಂದು, ಒಪ್ಪತ್ತಿತ ಊಟಕ್ಕೆ ಕಷ್ಟಪಡುತ್ತಿದ್ದರು, ಇರುವ ಅಲ್ಪ ಸ್ವಲ್ಪ ಊಟವನ್ನು ಮಕ್ಕಳಿಗೆ ಊಟಮಾಡಿಸಲು, ತನಗೆ ಹಸಿವಿಲ್ಲವೆಂದು ಹೇಳಿದ ಸುಳ್ಳು, ಹಬ್ಬದ ದಿನ ಮಾಡಿದ ಪಾಯಸವನ್ನು ತನ್ನ ಮಕ್ಕಳಿಗೆ ತಿನ್ನಿಸಿ, ತನಗೆ ಹಲ್ಲು ನೋವಿದೆ ಎಂದು ಹೇಳಿದ ಸುಳ್ಳು, ಹೀಗೆ ಅಮ್ಮ ಹೇಳಿದ್ದ ಎಂಟು ಸುಳ್ಳುಗಳು ತನ್ನ ಮಕ್ಕಳ ಮೇಲಿನ ಪ್ರೀತಿ, ಪಾಲನೆಗಾಗಿ. ಅವಳು, ಸತ್ತ ನಂತರವೂ ಮಾತನಾಡಿದಳು!, ಅಮ್ಮ ಹೇಳಿದ ಎಂಟು ಸುಳ್ಳುಗಳು, ಕಂದನ ಪತ್ರ, ಸೈಕಲ್ ರಿಕ್ಷಾದವನ ಮಗ ಐ.ಎ.ಎಸ್. ಮಾಡಿದ!, ಹೇಗೆ ಪುಸ್ತಕದಲ್ಲಿ ಪ್ರಕಟವಾಗಿರುವ ಎಲ್ಲರದ್ದೂ ಒಂದೊಂದು ಜೀವನ ವ್ಯತೆಯಾದರೂ, ಅದೆಲ್ಲವನ್ನೂ ಮೀರಿ ಗೆದ್ದು ಬದುಕನ್ನು ಕಟ್ಟಿಕೊಂಡು ನಮಗೆಲ್ಲ ಮಾದರಿಯಾಗಿದ್ದಾರೆ. ಬದುಕಲು ಕಲಿಸುವ, ತಪ್ಪಿರುವ ಬದುಕಿನ ದಾರಿಯ ದಿಕ್ಕನ್ನು ಬದಲಿಸುವ ಪುಸ್ತಕ ಎ.ಆರ್. ಮಣಿಕಾಂತ್ ರವರ ಲೇಖನಿಯಿಂದ ಬಂದಿರುವುದು ಇನ್ನು ವಿಶೇಷ. "ಅಮ್ಮ ಹೇಳಿದ ಎಂಟು ಸುಳ್ಳುಗಳು" ಪುಸ್ತಕ 2,00,000 ಪ್ರತಿಗಳು ಮಾರಾಟವಾಗಿ, ಇದೀಗ 200ನೇ ಮುದ್ರಣ ಕಾಣುತ್ತಿದ್ದು, ನನ್ನ ತುಂಬು ಹೃದಯದ ಅಭಿನಂದನೆಗಳು ಮಣಿಕಾಂತ್ ಸರ್.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಇರುವ ಎಲ್ಲರ ಕಥೆಗಳು ಮನಸ್ಸಿಗೆ ತುಂಬಾ ಪ್ರಭಾವ ಬೀರುತ್ತದೆ. ಕೆಲವೊಂದು ಕಥೆ ಕಣ್ಣೀರು ತರಿಸಿದರೆ, ಕೆಲವೊಂದು ಕಥೆ ಮನಸನ್ನು ಬಡಿದೆಬ್ಬಿಸುತ್ತವೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಎಲ್ಲರೂ ತಪ್ಪದೆ ಒಮ್ಮೆಯಾದರೂ ಈ ಪುಸ್ತಕವನ್ನು ಓದಲೇಬೇಕು...

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

2
Votes
95
Views
8 Months
Since posted

Voting Closed!

Scroll to Top