Submission 1995

ಪುಸ್ತಕದ ಶೀರ್ಷಿಕೆ: ಉತ್ತರ ಕಾಂಡ

ಪುಸ್ತಕದ ಲೇಖಕರು: ಎಸ್. ಎಲ್. ಭೈರಪ್ಪ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ವಿದ್ಯಾ ಕನ್ವಿಕರ್

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 4.5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಉತ್ತರಕಾಂಡ ನಾ ಕಂಡಂತೆ: ಉತ್ತರಕಾಂಡ ಸೀತೆಯ ಸರಳ ಸುಂದರ ಚಿತ್ರಣ 'ಪರ್ವ'ದಲ್ಲಿ ಕುಂತಿ ದ್ರೌಪದಿಯರನ್ನು ಸರಳವಾಗಿ ಚಿತ್ರಿಸಿದಂತೆ ಇಲ್ಲಿ ರಾಮಕಥೆಯಲ್ಲಿ ಸೀತೆ ತೀರ ಸರಳ ಸಾಮಾನ್ಯವಾಗಿ ಕಾಣುವ ಆದರೆ ದೃಢ ನಿರ್ಧಾರದ ಸಬಲೆಯಾಗಿ ಚಿತ್ರ ತಗೊಂಡಿದ್ದಾಳೆ. ಲೇಖಕರು ರಾಮಾಯಣವನ್ನು ನಮ್ಮ ಜೀವನಕ್ಕೆ ಹತ್ತಿರವಾಗಿ ಬಿಂಬಿಸಿ ನಮ್ಮದೇ ಕಥೆ ಏನೋ ಎಂಬಂತೆ ಆಗಿದೆ ಸೀತೆಯ ಹುಟ್ಟಿನ ಬಗ್ಗೆ ದಶರಥ ಮಹಾರಾಜನಿಗೂ ಸಂಶಯ ಕಾಡಿದೆ ಅವನಿಗೂ ಅವಳೊಬ್ಬ ಕುಲ ಗೋತ್ರಗಳಿಲ್ಲದ ಹೆಣ್ಣು ಅವಳನ್ನು ಸೊಸೆಯಾಗಿ ಸ್ವೀಕರಿಸುವುದು ಹೇಗೆ ಎಂದು ತಿರಸ್ಕರಿಸಿದ್ದಾನೆ ನಂತರದ ದಿನಗಳಲ್ಲಿ ಅವಳಲ್ಲಿಯ ಸಂಸ್ಕಾರ, ಸರಳತೆಯ ಅರಿವಾಗಿ ಅವಳನ್ನು ಸೊಸೆ ಎಂದು ಸ್ವೀಕರಿಸಿದ್ದಾನೆ ಇತ್ತ ಜನಕರಾಜನ ಕುಮಾರಿಯಾದರು ಮಹಾರಾಣಿಗೆ ಸಾಕು ಮಗಳೇ. ನಾನು ತಾಯಿ ಮೊಲೆ ಹಾಲು ಕುಡಿದಿಲ್ಲ ಅವಳ ಮಡಿಲು ಸಿಕ್ಕರು ತಾನು ತಾಯಿ ಇಲ್ಲದ ಮಗು ಎಂಬ ಭಾವವನ್ನು ಸೀತೆಯಲ್ಲಿ ಭೈರಪ್ಪನವರು ಕಂಡಿದ್ದಾರೆ ಮುಂದೆ ಪತಿಗೃಹದಲ್ಲಿ ಸೀತೆ ರಾಮಲಕ್ಷ್ಮಣರು ಕೈಕೆಯಿಯಿಂದಾಗಿ 14 ವರ್ಷ ವನವಾಸದ ಶಿಕ್ಷೆ. ಅರಮನೆ ವಾಸದಿಂದ ಕಾಡಿಗೆ ಹೋದಾಗಲೂ ರಾಮನ ಕುರಿತಾದ ಅನುರಾಗ, ಲಕ್ಷ್ಮಣನಲ್ಲಿ ಭ್ರಾತೃತ್ವದ ಭಾವ ಎಲ್ಲ ತುಂಬಾ ಸ್ಫುಟವಾಗಿ ಬಂದಿದೆ ರಾವಣನಿಂದ ಅಪಹೃತಳಾಗಿ ಶೂರ್ಪನಖಿಯಜೊತೆಯಲ್ಲಿ ಆದ ಸಂವಾದವೆಲ್ಲವೂ ತುಂಬಾ ಮಾರ್ಮಿಕವಾಗಿ ಮೂಡಿ ಬಂದಿದೆ ನಂತರದಲ್ಲಿ ಲಕ್ಷ್ಮಣನಿಂದ ರಾಜಾಜ್ಞೆ ಪಾಲಿಸಿದ್ದೇನೆ, ನಿಮ್ಮನ್ನು ರಾಮ ಪರಿತ್ಯಜಿಸಿದ್ದಾನೆ ಎಂಬ ಮಾತು ಕಿವಿಗೆ ಬಿದ್ದಾಗ ನಮ್ಮಂತೆ ಅವಳು ಲಕ್ಷ್ಮಣನನ್ನು ಶಪಿಸಿದ್ದಾಳೆ. ನಂತರ ಲಕ್ಷ್ಮಣ ನನ್ನ ತಂಗಿಯ ಗಂಡ ಅವನನ್ನು ವೃಥಾ ಶಪಿಸಿದೆನಲ್ಲ ಎಂದು ಪರಿತಪಿಸಿದ್ದಾಳೆ, ಅಲ್ಲದೆ ನಾನೇನು ಶಪಿಸುವಷ್ಟು ತಪಃಶಕ್ತಿಯನ್ನು ಹೊಂದಿಲ್ಲ ನಾನು ಆಡಿದ್ದು ಬರೀ ಬೈಗುಳ ಎಂಬ ತಿಳಿವು ಅವಳಲ್ಲಿ ಮೂಡಿದೆ. ಮಕ್ಕಳು ಬೆಳೆದಂತೆಲ್ಲ ಮಕ್ಕಳ ಬಗ್ಗೆ ಕಾಳಜಿ , ಅವರಿಗೆ ತಂದೆಯ ಕೊರತೆ ಎಲ್ಲದರ ಬಗ್ಗೆಯೂ ಸಾಕಷ್ಟು ತಲೆಕೆಡಿಸಿಕೊಂಡಿದ್ದಾಳೆ. ಅಶ್ವಮೇಧದ ಕುದುರೆಯನ್ನು ಮುಕ್ತಗೊಳಿಸುವಲ್ಲಿ ಮಕ್ಕಳನ್ನು ಸಾಕಷ್ಟು ಒಲೈಸಿದ್ದಾಳೆ ಅನಿವಾರ್ಯವಾಗಿ ಮಕ್ಕಳನ್ನು ವಾಲ್ಮೀಕಿ ಋಷಿಯ ಜೊತೆ ರಾಜಾಸ್ಥಾನಕ್ಕೆ ಕಳುಹಿಸಿದ್ದಾಳೆ ರಾಮ ಮಕ್ಕಳನ್ನು ಒಪ್ಪಿಕೊಂಡರೂ,ಅವರುಗಳು ತಂದೆಯನ್ನು ರಾಜನಾಗಿ, ಗುರುವಾಗಿ ಒಪ್ಪಿಕೊಳ್ಳಲೇ ಇಲ್ಲ ತದನಂತರ ಅವರಿಬ್ಬರನ್ನೂ ಲಕ್ಷ್ಮಣನಿಗೆ ಒಪ್ಪಿಸಿ, ರಾಮ ಪತ್ನಿಯಿಂದ, ಮಕ್ಕಳಿಂದ ಪರಿತ್ಯಕ್ತನಾಗಿ ಸಾಕಷ್ಟು ನೋವು ಅನುಭವಿಸಿ ನದಿಯಲ್ಲಿ ಮುಳುಗಿ ಪ್ರಾಣ ತ್ಯಾಗ ಮಾಡಿದ ವಿಷಯ ತಿಳಿದ ಸೀತೆ ಯಾಕೆ ರಾಮ, ಇಷ್ಟೊಂದು ಕಾಡಿದ್ದು ನಿನಗೆ ಸಾಲದಾಯಿತೇ?ಎಂದು ಪರಿತಪಿಸಿ ಕೊನೆಗೂ ನಾನು ಮುಂಡೆಯಾಗಿ ಜೀವಿಸಲಾರೆ, ಮುತ್ತೈದೆಯಾಗಿಯೇ ಇರುವೆ ಎಂದು ಅನುಸೂಯೆಯಿಂದ ಕಾಣಿಕೆಯಾಗಿ ಬಂದ ಆಭರಣಗಳನ್ನು ಧರಿಸಿಕೊಂಡು, ಅವಳದೇ ರೇಷ್ಮೆ ಸೀರೆ ಉಟ್ಟು, ಚೆನ್ನಾಗಿ ಅಲಂಕರಿಸಿಕೊಂಡು,ಜನಕ ರಾಜಕುಮಾರಿ ಭೂಮಾತೆಯ ಮಡಿಲ ಮಗಳು ಭೂಮಾತೆಯ ತೊಟ್ಟಿಲಲ್ಲಿಯೇ ಮಲಗಿದ ಸೀತೆ ಸಾಮಾನ್ಯರಲ್ಲಿ ಸಾಮಾನ್ಯಳಾಗಿ ಚಿತ್ರಿತಗೊಂಡಿದ್ದಾಳೆ. ಇಂಥದೊಂದು ಚಿತ್ರಣ ಭೈರಪ್ಪನವರಂಥವರಿಂದ ಮಾತ್ರ ಸಾಧ್ಯ!!!

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಸೀತೆ ಎಂದಿಗೂ ಯಾವುದೇ ಲೇಖಕನ ಲೇಖನಿಗೆ ತೀರ ಹತ್ತಿರದ ಪಾತ್ರ ,ಸೀತೆ ನನಗೆ ತೀರ ಅಚ್ಚುಮೆಚ್ಚಿನ ಪಾತ್ರ. ಅವಳ ತಾಯಿಯ ಮೊಲೆ ಹಾಲಿನ ಮತ್ತು ನಿಜ ತಾಯಿಯ ಪ್ರೀತಿಯ ಹಂಬಲ, ನನ್ನ ಮನಸ್ಸನ್ನು ಮುಟ್ಟಿತು. ರಾವಣನಿಂದ ಅಪಹೃತಳಾಗುವ ಸಮಯದಲ್ಲಿ ನಡೆಯುವ ಸೀತೆ-ಲಕ್ಷ್ಮಣರ ಸಂವಾದ ಮನಸ್ಸಿನಲ್ಲಿ ಉಳಿಯುವಂಥದ್ದು. ರಾಮ ಸೀತೆಯರ ಅಂತ್ಯಕಾಲ ಮನಸ್ಸಿಗೆ ನಾಟುವಂಥದ್ದು. ಎಲ್ಲ ಪಾತ್ರ ಮತ್ತು ಸನ್ನಿವೇಶಗಳು ನಮ್ಮ ಮನಸ್ಸಿನಲ್ಲಿ ಜೀವಂತವಾಗಿವೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಈ ಕಾದಂಬರಿ ಮನೋವೈಜ್ಞಾನಿಕ ಅಥವಾ ಐತಿಹಾಸಿಕ ಅಲ್ಲ ಎಂದು ನನ್ನ ಅನಿಸಿಕೆ. ಆದರೆ ಇದು ನಮ್ಮ ನಿಮ್ಮ ಮನಸ್ಸಿಗೆ ಹತ್ತಿರವಾದ ಕಾದಂಬರಿ ಇದನ್ನು ಓದಲು ಮನಸ್ಸು ವಯಸ್ಸುಗಳ ಭೇದವಿಲ್ಲ ಎಲ್ಲ ವಯೋಮಾನದವರಿಗೂ ಎಲ್ಲ ಮನಸ್ಥಿತಿಯವರಿಗೂ ಹೊಂದುತ್ತದೆ ಎಲ್ಲರೂ ಇದರಲ್ಲಿ ತಮ್ಮ ಕನಸಿನ ತಾವು ಆರಾಧಿಸುವ ಪಾತ್ರಗಳನ್ನು ಕಾಣಬಹುದು

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

1
Votes
173
Views
7 Months
Since posted

Voting Closed!

Scroll to Top